Ad Widget .

ಧರ್ಮನಿಂದನೆ ಪ್ರಕರಣ ಪ್ರವೀಣ್ ರಿಂದ ಪೊಲೀಸ್ ‌ಸಮ್ಮುಖದಲ್ಲಿ ಕ್ಷಮೆಯಾಚನೆ, ರಾಜಿಯಲ್ಲಿ ಪ್ರಕರಣ ಇತ್ಯರ್ಥ

Ad Widget . Ad Widget .

Ad Widget . Ad Widget .

ಸುಳ್ಯ: ದೈವಸ್ಥಾನಕ್ಕೆ ಸೇರಿದ ಜಾಗದಲ್ಲಿ ಕ್ರಿಕೆಟ್ ಆಡಲು ಬರುತ್ತಿದ್ದ ಅನ್ಯಧರ್ಮದ ಯುವಕನಿಗೆ ನಿಂದನೆ ಮಾಡಿದ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿದ್ದು, ಅನ್ಯಧರ್ಮೀಯನ ನಿಂದನೆಗೈದ ಆರೋಪ ಎದುರಿಸುತ್ತಿದ್ದ ಪ್ರವೀಣ್ ಕುಮಾರ್ ಜಯನಗರ ಕ್ಷಮೆಯಾಚಿಸಿದ್ದಾರೆ.

ಜಯನಗರದ ಆದಿ ಮೊಗೇರ್ಕಳ ದೈವ ಸ್ಥಾನದ ಎದುರಿನ ಜಾಗದಲ್ಲಿ ಊರಿನ ಯುವಕರು ಕಳೆದ ಹಲವು ಸಮಯಗಳಿಂದ ಕ್ರಿಕೆಟ್ ಆಡುತ್ತಿದ್ದರು. ಇತ್ತೀಚೆಗೆ ಅದೇ ಸ್ಥಳದಲ್ಲಿ ದೈವಸ್ಥಾನದ ಪದಾಧಿಕಾರಿಗಳು ಮತ್ತು ಇತರರು ವನಮಹೋತ್ಸವ ಸಲುವಾಗಿ ಗಿಡಗಳನ್ನು ನೆಡಲು ಗುಂಡಿ ತೋಡಿದ್ದರು. ಆಡಲು ಬರುತ್ತಿದ್ದ ಯುವಕರು ಇದನ್ನು ಪ್ರಶ್ನಿಸಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದು ದೇವಸ್ಥಾನದ ಪದಾಧಿಕಾರಿ ಪ್ರವೀಣ್ ಎಂಬವರು ಯುವಕರ ಗುಂಪಿನಲ್ಲಿದ್ದ ಅನ್ಯಧರ್ಮದ ಯುವಕನಿಗೆ ನಿಂದಿಸಿದ್ದರು.

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಬೆನ್ನಲ್ಲೇ ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಮುಖಂಡರುಗಳು ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಧರ್ಮದ ಮುಖಂಡರನ್ನು ಸುಳ್ಯ ಪೊಲೀಸರು ಠಾಣೆಗೆ ಕರೆಸಿ ಪಂಚಾಯತಿ ನಡೆಸಿದ್ದಾರೆ. ಈ ಸಂದರ್ಭ ನಿಂದನೆ ಮಾಡಿದ ಪ್ರವೀಣ್ ಕುಮಾರ್, ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಧಾರ್ಮಿಕ ಮುಖಂಡರ ಎದುರು ಆಟ ಆಡಲು ಬರುತ್ತಿದ್ದ ಯುವಕರೊಂದಿಗೆ ಕ್ಷಮೆಯಾಚಿಸಿದ್ದಾರೆ. ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ತವಾಗಿದ್ದು, ಸುಖಾಂತ್ಯಗೊಂಡಿದೆ.

Leave a Comment

Your email address will not be published. Required fields are marked *