Ad Widget .

ಮುಳುಗಿದ್ದ ಸೇತುವೆ ಮೇಲೆ ಬಸ್ ಚಲಾಯಿಸಿದ ಚಾಲಕ ಅಮಾನತು

ಮಹಾರಾಷ್ಟ್ರ: ಪ್ರವಾಹದಿಂದ ಸಂಪೂರ್ಣವಾಗಿ ಮುಳುಗಿದ್ದು ಸೇತುವೆ ಮೇಲೆ ಚಾಲಕನೊಬ್ಬ ಬಸ್ ಚಲಾಯಿಸಿದ ಘಟನೆ ರಾಯಗಡ ಜಿಲ್ಲೆಯಲ್ಲಿ ನಡೆದಿದೆ. ಜನರ ಜೀವದ ಜೊತೆ ಚೆಲ್ಲಾಟವಾಡಿದ ಚಾಲಕರನ್ನು ಎಂಎಸ್ಆರ್’ಟಿಸಿ ಅಮಾನತು ಮಾಡಿದೆ.

Ad Widget . Ad Widget .

ರಾಯಗಡದ ಮಹಾಡ ತಾಲೂಕಿನ ನದಿಯ ಸೇತುವೆ ಭಾರಿ ಮಳೆ ಹಿನ್ನೆಲೆಯಲ್ಲಿ ಮುಳುಗಡೆಯಾಗಿತ್ತು. ಮುಳುಗಿದೆ ಸೇತುವೆ ಮೇಲೆ ಇತರೆ ಯಾವುದೇ ವಾಹನಗಳು ಸಂಚರಿಸಿಲ್ಲ. ಆದರೆ ದುಸ್ಸಾಹಸಕ್ಕೆ ಕೈಹಾಕಿದ ಎಂಎಸ್ಆರ್’ಟಿಸಿ ಬಸ್ ಚಾಲಕ ಬಸ್ಸನ್ನು ನೀರಿನ ಮೇಲೆಯೇ ನದಿಯ ಇನ್ನೊಂದು ಬದಿಗೆ ಕೊಂಡೊಯ್ದಿದ್ದಾನೆ. ನದಿ ದಾಟುತ್ತಿದ್ದಂತೆ ಬಸ್ ಹಡಗಿನಂತೆ ಕಂಡುಬಂದಿದೆ. ಈ ವಿಷಯ ಸಾರಿಗೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು ತಕ್ಷಣವೇ ಜನರ ಜೀವದ ಜೊತೆ ಚೆಲ್ಲಾಟವಾಡಿದ ಬಸ್ ಚಾಲಕನನ್ನು ಅಮಾನತು ಮಾಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *