KRS ಬಿರುಕು ಬಿಟ್ಟಿದೆ ಎಂದು ನಾನು ಹೇಳೇ ಇಲ್ಲ : ಸಂಸದೆ ಸುಮಕ್ಕ ಯೂಟರ್ನ್

ಮಂಡ್ಯ : ಕೆಆರ್ ಎಸ್ ಜಲಾಶಯದ ಗೋಡೆಗಳು ಬಿರುಕು ಬಿಟ್ಟಿದೆ ಎಂದು ಹೇಳಿದ್ದ ಸಂಸದೆ ಸುಮಲತಾ ತಮ್ಮ ಹೇಳಿಕೆಯಿಂದ ಯೂಟರ್ನ್ ತೆಗೆದುಕೊಂಡಿದ್ದು ನಾನು ಹಾಗೆ ಹೇಳೇ ಇಲ್ಲ ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.

Ad Widget ... ..

ಕೆಲ ಸಮಯದ ಹಿಂದೆ ಕೆಆರ್ ಎಸ್ ಡ್ಯಾಮ್ ಸುತ್ತಲೂ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಬಿರುಕು ಬಿಟ್ಟಿದೆ. ಸೂಕ್ತ ತನಿಖೆ ಕೈಗೊಳ್ಳಬೇಕು. ಆದರೆ ಅದಕ್ಕೆ ಸ್ಥಳೀಯ ರಾಜಕಾರಣ ಅಡ್ಡಿ ಪಡಿಸುತ್ತಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದರು.

Ad Widget

ಇದೀಗ ಅದನ್ನು ತಿರುಚಿ ಹೇಳಿರುವ ಅವರು ನಾನು ಆ ರೀತಿ ಹೇಳಿಲ್ಲ. ಬದಲಾಗಿ ಗಣಿಗಾರಿಕೆಯಿಂದ ಕೆ ಆರ್ ಎಸ್ ಬಿರುಕು ಬಿಡಬಹುದು ಎನ್ನುವ ಆತಂಕ ನನಗಿತ್ತು, ಈಗಲೂ ಇದೆ. ಸಭೆಯೊಂದರಲ್ಲಿ ಡ್ಯಾಮ್ ಬಿರುಕು ಬಿಟ್ಟಿದೆಯಾ ಎಂದು ಕೇಳಿದ್ದೆ ಅಷ್ಟೇ. ಈ ಬಗ್ಗೆ ಸಿ ಬಿ ಐ ಆಗಬೇಕು ಎಂದು ಹೇಳಿದ್ದೆ. ಸಚಿವ ನಿರಾಣಿ ಅವರಿಗೆ ಎಲ್ಲವನ್ನೂ ಹೇಳಿದ್ದೇನೆ ಎಂದಿದ್ದಾರೆ. ಸುಮಲತಾ ಅವರ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಸಣ್ಣ ಮಟ್ಟದ ಬಿರುಗಾಳಿ ಎದ್ದಿತ್ತು.

Leave a Comment

Your email address will not be published. Required fields are marked *