Ad Widget .

ಮಡಿಕೇರಿ: ಮುಂದುವರಿದ ವರುಣನ ಆರ್ಭಟ | ಆಕಾಶವಾಣಿ ಟವರ್ ತಡೆಗೋಡೆ ಕುಸಿತ

Ad Widget . Ad Widget .

ಕೊಡಗು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಮಡಿಕೇರಿ ಆಕಾಶವಾಣಿ ಟವರ್ ನ ತಡೆಗೋಡೆ ಕುಸಿದಿದೆ. ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಕೊಡಗು ತತ್ತರಿಸಿದೆ.

Ad Widget . Ad Widget .

ಇಂದು ಆಕಾಶವಾಣಿಯ ಟವರ್ ನ ತಡೆಗೋಡೆ ಕುಸಿದಿದ್ದು
ಕಳೆದ ವರ್ಷದ ಮಳೆ ಕುಸಿದ ತಡೆಗೊಡೆಯನ್ನು ಮರು ನಿರ್ಮಿಸಲಾಗಿತ್ತು. ಕೊಡಗಿನ ಕಾವೇರಿ ನದಿ ತುಂಬಿ ಹರಿಯಿತ್ತಿದ್ದು ಹಲವೆಡೆಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಕಳೆದೆರಡು ವರ್ಷಗಳಿಂದ ಕೊಡಗಿನಲ್ಲಿ ಭಾರಿ ಮಳೆಗೆ ಗುಡ್ಡ ಕುಸಿತ ಉಂಟಾಗುತ್ತಿದ್ದು ಈ ವರ್ಷವೂ ಗುಡ್ಡ ಕುಸಿಯಲಾರಂಭಿಸಿದೆ.
ಇದೀಗ ಕಳೆದ ಎರಡು ದಿನಗಳಿಂದ ಆರ್ಭಟಿಸುತ್ತಿರುವ ಗಾಳಿ ಮಳೆಯಿಂದ ಟವರ್ ಕುಸಿಯುವ ಭೀತಿ ಎದುರಾಗಿದ್ದು ಆಸುಪಾಸಿನ ಜನರಲ್ಲಿ ಆತಂಕ ಹುಟ್ಟುಹಾಕಿದೆ.

ವರದಿ : ಮೋವಿನ್ ಕುಮಾರ್

Leave a Comment

Your email address will not be published. Required fields are marked *