Ad Widget .

ಬಂಟ್ವಾಳ: ಯುವಕನನ್ನು ಉಸಿರುಗಟ್ಟಿಸಿ ಕೊಲೆಗೈದ ಗ್ಯಾಸ್ ಗೀಸರ್..!!!

ಬಂಟ್ವಾಳ: ಯುವಕನನ್ನು ಉಸಿರು ಗಟ್ಟಿಸಿ ಕೊಲೆಗೈದ ಗ್ಯಾಸ್ ಗೀಸರ್..!!!ಬಂಟ್ವಾಳ: ಸ್ನಾನ ಮಾಡುತ್ತಿದ್ದ ವೇಳೆ ಗ್ಯಾಸ್ ಗೀಸರ್‌ನಿಂದ ಬಿಡುಗಡೆಯಾದ ವಿಷ ಅನಿಲ ಯುವಕನ ಪ್ರಾಣಕ್ಕೆ ಕುತ್ತು ತಂದ ಘಟನೆ ಫರಂಗಿಪೇಟೆಯ ಮಾರಿಪಳ್ಳ ಎಂಬಲ್ಲಿ ಜು.12 ರ ಸೋಮವಾರ ಸಂಜೆ ನಡೆದಿದೆ.ಮೃತ ಯುವಕನನ್ನು ಇಸ್ಮಾಯಿಲ್ ಅವರ ಪುತ್ರ ಇಜಾಝ್ ಅಹ್ಮದ್ (23) ಎಂದು ಗುರುತಿಸಲಾಗಿದೆ.

Ad Widget . Ad Widget .

ಈತ ಹುಬ್ಬಳ್ಳಿಯ ಅಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ತಂದೆಯ ಅನಾರೋಗ್ಯದ ಹಿನ್ನಲೆಯಲ್ಲಿ ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದು ಸೋಮವಾರ ಸಂಜೆ ಗ್ಯಾಸ್ ಗೀಸರ್ ಬಳಸಿ ಸ್ನಾನಕ್ಕೆ ತೆರಳಿದ್ದ. ತುಂಬಾ ಸಮಯ ಕಳೆದರು ಇಜಾಝ್ ಅಹ್ಮದ್ ಹೊರ ಬಾರದ ಹಿನ್ನೆಲೆಯಲ್ಲಿ ಮನೆಯವರು ಬಾಗಿಲು ಬಡಿದು ಕೂಗಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆತಂಕಗೊಂಡ ಆತನ ತಂದೆ ಮತ್ತು ಸಹೋದರರು, ಕೂಡಲೇ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಸ್ನಾನಗೃಹದಲ್ಲಿ ಪ್ರಜ್ಞಾಹೀನರಾಗಿ ಬಿದ್ದಿರುವುದು ಕಂಡಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ.

Ad Widget . Ad Widget .

ಸ್ನಾನ ಗೃಹದಲ್ಲಿ ಅಳವಡಿಸಿದ್ದ ಗ್ಯಾಸ್ ಗೀಸರ್ ಸೋರಿಕೆಯಾಗಿ ಕಾರ್ಬನ್ ಮಾನಾಕ್ಸೆಡ್ ಹೊರ ಬಂದಿದೆ. ಪರಿಣಾಮ ವಿಷಅನಿಲ ಸೇವಿಸಿ ಆತ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಇನ್ನು ಈ ಪ್ರಕರಣಗಳು ಅಪರೂಪದಾಗಿದ್ದು ಈ ಗ್ಯಾಸ್ ಗೀಸರ್ ಬಳಸುವವರಿಗೆ ಭಯದ ವಾತರಣ ಮೂಡಿದೆ. ಅದಲ್ಲದೆ ಈ ಗೀಸರ್ ಪರಿಶೀಲನೆ ನಡೆಸಿ ಹೇಗೆ ಇದು ಹೊರ ಬಂದಿದೆ ಎಂಬ ತನಿಖೆಯಾಗಕಾಗಿದೆ. ಅಲ್ಲದೆ ಇಂತಹ ಜೀವಕ್ಕೆ ಅಪಾಯ ತರುವ ಅಥವಾ ಉತ್ತುಮ ಗುಣಮಟ್ಟ ಹೊಂದಿಲ್ಲದ ಗ್ಯಾಸ್ ಗೀಸರ್ ವಸ್ತುಗಳನ್ನು ತಯಾರಿಸುವ ಕಂಪೆನಿಗಳ ಮೇಲೆ ನಿಗಾವಹಿಸ ಬೇಕಾಗಿದೆ.

Leave a Comment

Your email address will not be published. Required fields are marked *