Ad Widget .

ಸುಳ್ಯ: ದೈವಸಾನಿಧ್ಯದ ಮೈದಾನದಲ್ಲಿ ಆಡುತ್ತಿದ್ದ ಅನ್ಯಧರ್ಮೀಯನ ಹೊರಗಟ್ಟಿದ ಕಮಿಟಿ ಪ್ರತಿನಿಧಿ | ಸಾಮರಸ್ಯದ ನಡುವೆ ಕೋಮು ಬೀಜ ಬಿತ್ತುವ ಕೆಲಸವೇಕೆ ಮಹಾಸ್ವಾಮಿ…?

ಸುಳ್ಯ: ‘ದೇವಸ್ಥಾನದ ಮೈದಾನದಲ್ಲಿ ಹಿಂದೂಗಳು ಅಲ್ಲದೆ ಬೇರೆ ಧರ್ಮದವರಿಗೆ ಇಲ್ಲಿ ಅವಕಾಶವಿಲ್ಲ, ಇಲ್ಲಿಂದ ಹೊರಗೆ ನಿಂತು ಮಾತನಾಡು, ಇಲ್ಲಿ ನೀನು ಆಡಬಾರದು, ನಿನಗೆ ಚರ್ಚ್ ಆವರಣ ಇಲ್ಲವೇ?’ ಗದರಿದ ದೇವಸ್ಥಾನ ಆಡಳಿತ ಕಮಿಟಿಯ ಪ್ರತಿನಿಧಿಯೋರ್ವ ಹೇಳಿ ಆಟವಾಡುತ್ತಿದ್ದ ಅನ್ಯಕೋಮಿನ ಯುವಕನೋರ್ವನನ್ನು ಮೈದಾನದಿಂದ ಹೊರಗಟ್ಟಿದ ಘಟನೆ ಸುಳ್ಯದ ಜಯನಗರದಲ್ಲಿ ನಡೆದಿದ್ದು ಜಾಲತಾಣಗಳಲ್ಲಿ ವಿಡೀಯೋ ವೈರಲ್ ಆಗಿದೆ.

Ad Widget . Ad Widget .

ಹೊರಗಟ್ಟಿದವನನ್ನು ಜಯನಗರ ಕೊರಂಬಡ್ಕದ ಆದಿಮೊಗೇರ್ಕಳ ದೈವಸ್ಥಾನದ ಪದಾಧಿಕಾರಿ ಪ್ರವೀಣ್ ಕುಮಾರ್ ಜಯನಗರ ಎಂದು ತಿಳಿದುಬಂದಿದೆ. ದೈವಸಾನಿಧ್ಯದಲ್ಲಿ ಸುಮಾರು ಎರಡು ವರ್ಷದಿಂದ ಸ್ಥಳೀಯ ಯುವಕರು ಆಟವಾಡುತ್ತಿದ್ದರು. ಈ ಮೈದಾನದಲ್ಲಿ ಬೇರೆ ಬೇರೆ ಜಾತಿ, ಧರ್ಮದ ಹುಡುಗರು, ಮಕ್ಕಳು ನಿರಂತರವಾಗಿ ಬಿಡುವಿನ ವೇಳೆಯಲ್ಲಿ ಆಟವಾಡುತ್ತಿದ್ದರು. ಆದರೆ ಕಳೆದ‌ ವರ್ಷದವರೆಗೆ ಈ ಸನ್ನಿಧಿಗೆ ಆಡಳಿತ ಮಂಡಳಿ ಇರಲಿಲ್ಲ. ಕಳೆದ ವರ್ಷ ಈ ದೇವಸ್ಥಾನಕ್ಕೆ ಆಡಳಿತ ಸಮಿತಿ ರಚಿಸಲಾಗಿತ್ತು. ಅದುವರೆಗೂ ಈ ಯುವಕರು ಆಟವಾಡುವುದನ್ನು ಯಾರು ಕೂಡ ಪ್ರಶ್ನೆ ಮಾಡಿರಲಿಲ್ಲ. ಇದೀಗ ಕೆಲದಿನಗಳ ಹಿಂದೆ ಪದಾಧಿಕಾರಿಯಾಗಿ ನೇಮಕಗೊಂಡ ಪ್ರವೀಣ್ ಕುಮಾರ್ ಜಯನಗರರವರು ಯುವಕರು ಆಟವಾಡುತ್ತಿದ್ದ ಮೈದಾನದಲ್ಲಿ ಬೇಕೆಂದೇ ತನ್ನ ಜೊತೆಗಾರರನ್ನು ಸೇರಿಸಿಕೊಂಡು, ಸಸಿಗಳನ್ನು ನೆಡಲು ಗುಂಡಿಗಳನ್ನು ತೆಗೆದಿದ್ದರು ಎನ್ನಲಾಗಿದೆ. ಇದರಿಂದಾಗಿ ಆಡಲು ಕಷ್ಟವಾದ ಕಾರಣ ಪ್ರವೀಣ್‌ರ ಬಳಿ ಹೋಗಿ ಕೇಳಿದ್ದಾರೆ. ಅದರೆ ಪ್ರವೀಣ್ ಇದಕ್ಕೆ ಸರಿಯಾಗಿ ಉತ್ತರ ಕೊಡದೆ ಇಲ್ಲಿ ಹಿಂದೂಗಳು ಅಲ್ಲದೆ ಬೇರೆ ಯಾವ ಧರ್ಮದವರು ಆಟವಾಡಬಾರದು ಎಂದು ಗದರಿಸಿದ್ದಾರೆ.

Ad Widget . Ad Widget .

ಕಳೆದ ಶನಿವಾರ ಹುಡುಗರ ತಂಡ ಇಲ್ಲಿ ಆಟವಾಡಲು ತೆರಳಿದಾಗ ಈ ಜಾಗ ಹಿಂದೂಗಳಿಗೆ ಸೇರಿದ್ದು. ಇಲ್ಲಿ ಹಿಂದೂ ಬಿಟ್ಟು ಅನ್ಯಧರ್ಮೀಯರು ಆಡಬಾರದು. ಅವರು ಆಡಲು ಚರ್ಚ್, ಮಸೀದಿ ಜಾಗಗಳಿವೆ. ಅಲ್ಲೇ ಆಟವಾಡಲಿ ಎಂದು ದಬಾಯಿಸಿದ್ದಾರೆ. ಈ ಮೂಲಕ ಸಾಮರಸ್ಯದಿಂದ ಆಟವಾಡುತ್ತಿದ್ದ ಯುವಕರ ನಡುವೆ ಜಾತಿ,ಧರ್ಮದ ವಿಷಬೀಜ ಬಿತ್ತಿದ್ದಾರೆ ಪ್ರವೀಣ್. ಈ ಮಾತು ಯುವಕರಿಗೆ ಅರಗಿಸಿಕೊಳ್ಳಲಾಗದೇ ಆಟ ಕೂಟಕ್ಕೆ ಯಾವ ಜಾತಿ? ವಿವಿಧ ಧರ್ಮೀಯರು ಹಿಂದೂ ದೈವಸ್ಥಾನ, ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿರುವಾಗ ಆಟದಲ್ಲಿ ಜಾತಿ, ಧರ್ಮ ತರುವುದು ಸರಿಯೇ? ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಪ್ರವೀಣ್ ಕುಮಾರ್ ಉತ್ತರಿಸಬೇಕಿದೆ.

Leave a Comment

Your email address will not be published. Required fields are marked *