Ad Widget .

ಎಷ್ಟೇ ಗೋಗರೆದರೂ ಕರಗದ ಪ್ರಿಯಕರನ ಮನ | ಕಲ್ಯಾಣ ಮಂಟಪದೆದುರು ಪ್ರೀತಿಗಾಗಿ ಅಂಗಲಾಚಿದ ಪ್ರೇಯಸಿ | ಇಲ್ಲಿದೆ ಮನಕರಗಿಸುವ ವಿಡಿಯೋ

ಮಧ್ಯಪ್ರದೇಶ: ತನ್ನನ್ನು ಪ್ರೀತಿಸಿದ ಯುವಕ ಬೇರೊಬ್ಬಳು ಯುವತಿಯೊಂದಿಗೆ ವಿವಾಹವಾಗುತ್ತಿರುವ ವಿಷಯ ತಿಳಿದ ಯುವತಿಯೊಬ್ಬಳು ಮನನೊಂದು ಕಲ್ಯಾಣ ಮಂಟಪದೆದುರು ಪ್ರೀತಿಗಾಗಿ ಗೋಗರೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ.

Ad Widget . Ad Widget .

ರಾಜ್ಯದ ಹೋಶಂಗಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಯುವಕ ಮತ್ತು ಕಾನ್ಪುರ ಮೂಲದ ಯುವತಿ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಬ್ಬೊರನ್ನೊಬ್ಬರು ಬಿಟ್ಟಿರದ ಇಬ್ಬರೂ, ಬಹಳ ಅನ್ಯೋನ್ಯವಾಗಿದ್ದರು. ಆದರೆ ಕೊನೆಯಲ್ಲಿ ಯುವಕ ಕೈಕೊಟ್ಟಿದ್ದಾನೆ.

Ad Widget . Ad Widget .

ಯುವಕ ತನಗೆ ಮೋಸ ಮಾಡಿ ಬೇರೊಬ್ಬಳ ಜೊತೆ ಮದುವೆಯಾಗುತ್ತಿರುವ ವಿಷಯ ಇತ್ತೀಚೆಗೆ ಯುವತಿಗೆ ತಿಳಿದಿದೆ. ತನ್ನನ್ನೇ ಮದುವೆಯಾಗುವಂತೆ ಆಕೆ ಕೇಳಿಕೊಂಡಿದ್ದಾಳೆ. ಇದ್ಯಾವುದಕ್ಕೂ ಒಪ್ಪದ ಯುವಕ ಹಲವಾರು ಕಾರಣಗಳನ್ನು ನೀಡಿದ್ದಾನೆ. ಪ್ರೀತಿಸಿದಾಕೆಯನ್ನು ಬಿಟ್ಟು ಬೇರೊಬ್ಬಳನ್ನು ವರಿಸುವುದಾಗಿ ಹಠಕ್ಕೆ ಬಿದ್ದಿದ್ದಾನೆ. ಯುವಕನಿಗೆ ಆತನ ಮನೆಯವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಈ ಸಮಯದಲ್ಲಿ ಯುವತಿ ಒಬ್ಬಂಟಿಯಾಗಿದ್ದಾಳೆ.

ಪ್ರೀತಿಸಿದ ಯುವತಿಗೆ ಮದುವೆಗೆ ಬಾರದಂತೆ ತಡೆಯೊಡ್ಡಿದ್ದಾನೆ. ತನ್ನ ಊರಿನ ಕಲ್ಯಾಣ ಮಂಟಪದಲ್ಲಿ ಮದುವೆಯಾಗಲು ಹೊರಟಿದ್ದಾನೆ. ತಾಳಲಾರದ ನೋವಿನಿಂದ ಯುವತಿ ಅಲ್ಲಿಗೂ ಬಂದು ಗೋಗರೆದಿದ್ದಾರೆ. ತನ್ನನ್ನು ಮದುವೆಯಾಗುವಂತೆ ಅಂಗಲಾಚಿ ಕೊಂಡು ತನ್ನ ಕೊನೆಯ ಪ್ರಯತ್ನ ಮಾಡಿದ್ದಾಳೆ. ಆದರೆ ಇದ್ಯಾವುದಕ್ಕೂ ಕ್ಯಾರೇ ಅನ್ನದ ಯುವಕ ಮದುವೆಯಾಗಿದ್ದಾನೆ. ಕೊನೆಗೆ ಯುವತಿಯನ್ನು ಸಂತೈಸಿ ಪೊಲೀಸರು ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಮನನೊಂದ ಯುವತಿ ಪ್ರೀತಿಗಾಗಿ ಅಂಗಲಾಚುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ:

Leave a Comment

Your email address will not be published. Required fields are marked *