Ad Widget .

ಬರ್ತಾ ಇದೆ ಮೂರನೇ ಅಲೆ, ದೇಶವಾಸಿಗಳೇ ಎಚ್ಚರದಿಂದಿರಿ- ಐಎಂಎ ಕಳವಳ

ನವದೆಹಲಿ: ಕೊರೋನಾ 2ನೇ ಅಲೆ ಇಳಿಕೆಯ ನಂತರ ಜನರು ಮಾರ್ಗಸೂಚಿಗಳನ್ನು ಎಗ್ಗಿಲ್ಲದೇ ಮುರಿಯುತ್ತಿದ್ದು, ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆತಂಕ ವ್ಯಕ್ತಪಡಿಸಿದೆ. ಜನರ ವಿನಾಕಾರಣ ಓಡಾಟ ಹಾಗೂ‌ ಯಾತ್ರೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದೆ.

Ad Widget . Ad Widget .

‘ ಜಗತ್ತಿನಲ್ಲಿ ಲಭ್ಯವಿರುವ ಸಾಕ್ಷ್ಯಗಳನ್ನು ನೋಡಿದರೆ ಹಾಗೂ ಯಾವುದೇ ಸಾಂಕ್ರಾಮಿಕ ರೋಗದ ಇತಿಹಾಸವನ್ನು ಗಮನಿಸಿದರೆ ಕೊರೋನಾದ 3ನೇ ಅಲೆ ಕೂಡ ಬಂದೇ ಬರುತ್ತದೆ ಎಂದು ಅನುಮಾನವಿಲ್ಲದೆ ಹೇಳಬಹುದು. ದೇಶದ ವೈದ್ಯಕೀಯ ಸಮುದಾಯದ ಅವಿರತ ಪರಿಶ್ರಮದಿಂದಾಗಿ ಈಗಷ್ಟೇ ಎರಡನೇ ಅಲೆಯಿಂದ ಹೊರಗೆ ಬಂದಿದ್ದೇವೆ. ಈ ಹಂತದಲ್ಲಿ ಜನರು ಹಾಗೂ ಸರ್ಕಾರಗಳು ಕೋವಿಡ್‌ ಜೊತೆ ರಾಜಿ ಮಾಡಿಕೊಳ್ಳುತ್ತಿರುವುದನ್ನು ನೋಡಿದರೆ ಆತಂಕವಾಗುತ್ತದೆ’ ಎಂದು ಐಎಂಎ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

Ad Widget . Ad Widget .

ಪ್ರವಾಸ, ಯಾತ್ರೆ, ಧಾರ್ಮಿಕ ಉತ್ಸವಗಳು ನಮಗೆ ಬೇಕು. ಆದರೆ ಕೋವಿಡ್ ನಿಂದ ಬಚಾವಾಗಲು ಇನ್ನೂ ಕೆಲ ತಿಂಗಳು ಅವುಗಳನ್ನು ಮುಂದೂಡುವ ಅಗತ್ಯವಿದೆ. ಸರಿಯಾಗಿ ಎಲ್ಲರಿಗೂ ಲಸಿಕೆ ಸಿಗದೆ ಸಾಮೂಹಿಕವಾಗಿ ಜನರು ಒಂದೆಡೆ ಸೇರಲು ಅವಕಾಶ ಮಾಡಿಕೊಟ್ಟರೆ ಅಲ್ಲಿ ಸೇರುವ ಜನರೆಲ್ಲ 3ನೇ ಅಲೆಗೆ ಸಿಲುಕಿ ಬಲಿಯಾಗವಹುದು. ಕಳೆದ ಅಲೆಯ ಅನುಭವದಲ್ಲಿ ಹೇಳುವುದಾದರೆ ಎಲ್ಲರಿಗೂ ಲಸಿಕೆ ನೀಡುವುದು ಹಾಗೂ ಕೋವಿಡ್‌ ಮಾರ್ಗಸೂಚಿ ಅಳವಡಿಸಿಕೊಳ್ಳುವುದರಿಂದ 3ನೇ ಅಲೆಯ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಐಎಂಎ ಸೂಚನೆ ಕೊಟ್ಟಿದೆ.

Leave a Comment

Your email address will not be published. Required fields are marked *