ಮೂಡಿಗೆರೆ: ರಾಜ್ಯದ ಹೆಸರಾಂತ ಕ್ರೈಂ ವರದಿಗಾರ ರವಿಬೆಳಗೆರೆ ಆಪ್ತ ಸುನಿಲ್ ಹೆಗ್ಗರವಳ್ಳಿ (43 ವ.) ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ರವಿಬೆಳಗೆರೆಯವರ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಆರಂಭಿಸಿದ ಸುನಿಲ್ ಹಲವಾರು ಕ್ರೈಮ್ ವರದಿಗಳ ಮೂಲಕ ರಾಜ್ಯಾದ್ಯಂತ ಹೆಸರುಗಳಿಸಿದ್ದರು. ರವಿ ಬೆಳಗೆರೆ ಅನಾರೋಗ್ಯದ ಸಮಯದಲ್ಲಿ ಅವರ ಅತ್ಯಾಪ್ತ ನಾಗಿ ಹಾಯ್ ಬೆಂಗಳೂರು ಪತ್ರಿಕೆ ಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಕ್ರೈಂ ವರದಿಗಾರಿಕೆಯಲ್ಲಿ ಚತುರ ನಾಗಿದ್ದ ಅವರು ಹಾಯ್ ಬೆಂಗಳೂರು ಪತ್ರಿಕೆ ಹಲವಾರು ಓದುಗರನ್ನು ಗಳಿಸಿಕೊಟ್ಟಿದ್ದರು. ನಂತರ ದಿನಗಳಲ್ಲಿ ರವಿ ಬೆಳಗೆರೆ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಆರೋಪ ಹೊತ್ತು ಪತ್ರಿಕೆಯಿಂದ ಹೊರನಡೆದಿದ್ದರು.
ಅದಾದ ಬಳಿಕ ಕಳೆದ ಕೆಲವು ಸಮಯಗಳಿಂದ ಬೆಂಗಳೂರು ಬಿಟ್ಟು ಬಂದು ಹುಟ್ಟೂರು ಚಿಕ್ಕಮಗಳೂರು ಜಿಲ್ಲೆ ಹೆಗ್ಗರವಳ್ಳಿಯಲ್ಲಿ ನೆಲೆಸಿದ್ದರು. ಇಂದು ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಗೋಣಿಬೀಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ.