Ad Widget .

ಪೆಟ್ರೋಲ್ ಸುರಿದು ಬಾಲಕಿಯ ಹತ್ಯೆ ಯತ್ನ, ಯೋಗಿ ರಾಜ್ಯದಲ್ಲಿ ಯಾಕಿಂಗೆ?

ಲಕ್ನೊ: ಉತ್ತರ ಪ್ರದೇಶದಲ್ಲಿ ದಿನೇದಿನೇ ಅಪರಾದ ಚಟುವಟಿಕೆಗಳು ಹೆಚ್ಚಾಗ್ತಿದೆ. ಕೆಲ ದಿನಗಳ ಹಿಂದಷ್ಟೇ ದಲಿತ ಯುವಕನ ಮೇಲೆ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳ ಕುರಿತು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ದ ಪ್ರತಿಪಕ್ಷಗಳು ವಾಕ್ಸಮರ ನಡೆಸಿದ್ದವು. ಅದರ ಬೆನ್ನಲ್ಲೇ ಮತ್ತೊಂದು ಅಮಾನವೀಯ ಘಟನೆ ರಾಜ್ಯದ ಬುಲಂದ್ ಶಹರ್ ಜಿಲ್ಲೆಯ ಮುಂಡಖೇಡದಲ್ಲಿ ನಡೆದಿದೆ.

Ad Widget . Ad Widget .

ವ್ಯಕ್ಯಿಯೋರ್ವ ಮನೆ ಮುಂದೆ ಬಿದ್ದಿದ್ದ ಸೆಗಣಿಯನ್ನು ಬಾಲಕಿಯೋರ್ವಳ ಬಳಿ ಎತ್ತಾಕಲು ಹೇಳಿದ್ದು, ಆಕೆ ವಿರೋದಿಸಿದಾಗ ಅವಳ ಜೊತೆಗೆ ಜಗಳ ಕಾಯ್ದಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆಕೆಯ ಮೇಲೆ ಪೆಟ್ರೋಲ್ ಸುರಿದು ಹತ್ಯೆಗೈಯಲು ಯತ್ನಿಸಿರುವ ಕುರಿತು ವರದಿಯಾಗಿದೆ.
ಘಟನೆಯಲ್ಲಿ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದು, ಗಲಾಟೆ ಕೇಳಿ ಸ್ಥಳೀಯರು ದೌಡಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಇದೇ ವೇಳೆ ಆರೋಪಿ ಪರಾರಿಯಾಗಿದ್ದು, ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಸುಟ್ಟಗಾಯಗಳಿಂದಾಗಿ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಜೀವನ್ಮರಣ ಹೋರಾಟದಲ್ಲಿದ್ದಾಳೆ.
ಪ್ರಕರಣದ‌ ಸುತ್ತ ಪೊಲೀಸರು ಬಲೆ ಬೀಸಿದ್ದು, ತನಿಖೆ ವೇಳೆ ಇದು ಪ್ರೇಮವೈಫಲ್ಯ ಎಂದು ತಿಳಿದುಬಂದಿದೆ. ಸಮಗ್ರ ತನಿಖೆ ಬಳಿಕ ನೈಜ ಕಾರಣ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Ad Widget . Ad Widget .

ಉತ್ತರ ಪ್ರದೇಶದಲ್ಲಿ ದಿನೇದಿನೇ ಅಪರಾಧ ಕೃತ್ಯಗಳು ಹೆಚ್ಚಾಗಿತ್ತಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ವಿಪಕ್ಷಗಳು ಒತ್ತಾಯಿಸುತ್ತಿವೆ.

Leave a Comment

Your email address will not be published. Required fields are marked *