ಲಂಡನ್: ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಯೂರೊ ಕಪ್ ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಇಟಲಿ ಗೆದ್ದು ಬೀಗಿದೆ. ಅಂತಿಮ ಸೆಣಸಾಟದಲ್ಲಿ 3-2 ರ ಅಂತರದಿಂದ ಗೆದ್ದ ಇಟಲಿ 53 ವರ್ಷಗಳ ಬಳಿಕ ಯುರೊ ಕಪ್ ಗೆದ್ದು ಸಂಭ್ರಮಿಸಿತು.
ವೆಂಬ್ಲೇ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಎಕ್ಸಟ್ರಾ ಅವಧಿ ಮುಗಿಯುವಾಗ ಇತ್ತಂಡಗಳು 1-1 ಗೋಲು ಬಾರಿಸಿದ್ದರು. ಆದರೆ ಪೆನಾಲ್ಟಿ ಶೂಟ್ ಔಟ್ ನಲ್ಲಿ ಇಟಲಿ ಗೆಲುವು ಸಾಧಿಸಿತು.
ಇಂಗ್ಲೆಂಡ್ ಆಟವನ್ನು ಉನ್ನತ ಮಟ್ಟದಲ್ಲಿ ಪ್ರಾರಂಭಿಸಿತು. 1.57 ನೇ ನಿಮಷದಲ್ಲೇ ಲ್ಯೂಕ್ ಮೊದಲ ಗೋಲು ಗಳಿಸಿದದರು. ಆದರೆ ಜಾರ್ಜಿಯೊ ಚಿಯೆಲಿನಿ ಮತ್ತು ಲಿಯೊನಾರ್ಡೊ ಬೊನುಸಿಯವರ ಅನುಭವಿ ರಕ್ಷಣಾತ್ಮಕ ಆಟವು ಇಂಗ್ಲಿಷ್ ಆಕ್ರಮಣಕಾರಿ ಆಟವನ್ನು ತಗ್ಗಿಸಿತು, ಇದರಿಂದಾಗಿ ನಾಯಕ ಹ್ಯಾರಿ ಕೇನ್ ಗೆ ದೊಡ್ಡ ಫೈನಲ್‌ನಲ್ಲಿ ಒಂದೇ ಒಂದು ಅವಕಾಶವನ್ನು ಸೃಷ್ಟಿಸಲಿಲ್ಲ.
ಮೊದಲಾರ್ಧದಲ್ಲಿ ಹಿನ್ನಡೆಯಲ್ಲೇ ಸಾಗಿದ್ದ ಇಟಲಿಯ ಪರ 67ನೇ ನಿಮಿಷದಲ್ಲಿ ಲಿಯಾನಾರ್ಡೋ ಬೊನುಸಿ ಗೋಲು ಹೊಡೆದು ಸಮಬಲ ಸಾಧಿಸಿದರು. ನಂತರ ಪೆನಾಲ್ಟಿ ಶೂಟ್ ಔಟ್ ನಲ್ಲಿಅದ್ಭುತ ಆಟವಾಡಿದ ಇಟಲಿ ಗೆಲುವು ಸಾಧಿಸಿತು.