Ad Widget .

ವಿದ್ಯಾರ್ಥಿಗಳು ಪ್ರಿಪೇಡ್‌ ಎಜುಕೇಷನ್ App ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ಬಾಗಲಕೋಟೆಯ ಜನಪ್ರಿಯ ನೆಪ್ರೊಲಜಿಸ್ಟ್ ಡಾ. ಸಂದೀಪ್ ಹುಯಿಲಗೋಳ ಅವರು ಒಂದಿಷ್ಟು ಸಮಾನಾಸಕ್ತ ತಂಡವನ್ನು ಕಟ್ಟಿಕೊಂಡು ಆರಂಭಿಸಿದ ಪ್ರಿಪೆಡ್‌ ಕಲಿಕಾ ಆಪ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯವಾಗಿ ನರ್ಸಿಂಗ್‌, ಪ್ಯಾರಾಮೆಡಿಕಲ್‌ ಮತ್ತು ಅಲೈಡ್‌ ಹೆಲ್ತ್ ಕೇರ್‌ ವಿದ್ಯಾರ್ಥಿಗಳಿಗೆ, ಇಂಗ್ಲಿಷ್‌ನಲ್ಲಿ ಕಲಿಯುವುದು ಕಷ್ಟ ಎನ್ನುವವರಿಗೆ ಈ ವೈದ್ಯರ ತಂಡವು ಸರಳವಾಗಿ ಆಪ್‌ ಮೂಲಕ ಬೋಧಿಸುತ್ತಿದೆ.

Ad Widget . Ad Widget .

ಶೈಕ್ಷಣಿಕ ಹಬ್ ಆದ ಬಾಗಲಕೋಟೆಯ ಡಾ. ಸಂದೀಪ್ ಅವರು ಕನ್ನಡ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಬೋಧಿಸುವ ವಿಶೇಷ ಸೇವೆ ಪರಿಚಯಿಸಿದ್ದಾರೆ. ಈ ಕುರಿತು ನಮ್ಮ ವೆಬ್‌ಸೈಟ್‌ನಲ್ಲಿ ಈ ಹಿಂದೆಯೇ ಲೇಖನವನ್ನೊಂದನ್ನು ಪ್ರಕಟಿಸಿದ್ದೇವು. ಈ ಆಪ್‌ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ಎನ್ನುವ ವಿವರ ಇಲ್ಲಿದೆ.

Ad Widget . Ad Widget .

ಹಂತ ೧

www.preped.in ವೆಬ್‌ಸೈಟ್‌ನಲ್ಲಿ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಲಿಂಕ್‌ ನೀಡಲಾಗಿದೆ. ಡೌನ್‌ಲೋಡ್‌ ಆಪ್‌ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮಲ್ಲಿ ಕ್ಯೂಆರ್‌ ಕೋಡ್ ಸ್ಕ್ಯಾನರ್‌ ಇದ್ದರೆ ಅದರ ಮೂಲಕವೂ ಡೌನ್‌ಲೋಡ್‌ ಕೊಡಬಹುದು.

ಸ್ಕ್ಯಾನ್‌ ಮಾಡಿ ಅಥವಾ ಇಲ್ಲಿ ಕ್ಲಿಕ್ ಮಾಡಿ

ಹಂತ ೨

ಅಪ್‌ಗೆ ಸಂಬಂಧಪಟ್ಟ ಒಂದು ಎಪಿಕೆ ಫೈಲ್‌ ಡೌನ್‌ಲೋಡ್ ಆಗುತ್ತದೆ.

ಅದನ್ನು ಕ್ಲಿಕ್ ಮಾಡಿ ಇನ್ಸ್ಟಾಲ್‌ ಕೊಟ್ಟರೆ ನಿಮ್ಮ ಮೊಬೈಲ್‌ನಲ್ಲಿ ಈ ಆಪ್ ಸ್ಥಾಪನೆಯಾಗುತ್ತದೆ.

ಗೊತ್ತಿಲ್ಲದ ಮೂಲದ್ದು ಎಂಬ ಆಯ್ಕೆಯಲ್ಲಿ ಅನುಮತಿ ನೀಡಿ,ಗೂಗಲ್‌ ಪ್ಲೇ ಸ್ಟೋರ್‌ ಹೊರತುಪಡಿಸಿದ ಆಪ್‌ಗಳಿಗೆ ಹೀಗೆ ಅನುಮತಿ ಕೇಳಲಾಗುತ್ತದೆ.

ಗೂಗಲ್‌ ಪ್ಲೇ ಸ್ಟೋರ್‌ನವರಿಗೆ ಕಮಿಷನ್‌ ಹೆಚ್ಚು ಕೊಡಬೇಕಿರುವುದರಿಂದ, ವಿದ್ಯಾರ್ಥಿಗಳಿಗೆ ಆಪ್‌ ದುಬಾರಿಯಾಗಬಾರದು ಎನ್ನುವ ಕಾರಣಕ್ಕೆ ಸದ್ಯ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈ ಆಪ್‌ ಅನ್ನು ಪರಿಚಯಿಸಲಾಗಿಲ್ಲ ಎಂದು ಡಾ. ಸಂದೀಪ್‌ ಮಾಹಿತಿ ನೀಡಿದ್ದಾರೆ.

ಹಂತ ೩

ಆಪ್‌ ತೆರೆಯಿರಿ. ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ. ಒಟಿಪಿ ಬರುತ್ತದೆ. ಆ ಒಟಿಪಿ ಹಾಕಿ ಲಾಗಿನ್ ಆಗಿ. ಪುಟ್ಟ ಆಪ್‌ನೊಳಗೆ ಇರುವ ನೂರಾರು ವಿಡಿಯೋಗಳಲ್ಲಿ ನಿಮಗೆ ಬೇಕಾದ ಶೈಕ್ಷಣಿಕ ವಿಡಿಯೋವನ್ನು ನೋಡಿ. ಕಲಿಯಿರಿ.

Preped ವಿಶೇಷತೆಗಳೇನು?

•  ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಗೆ ಸಂಬಂಧಪಟ್ಟ ಕೋರ್ಸ್ಗಳನ್ನು ಅತ್ಯಂತ ಕಡಿಮೆ ಶುಲ್ಕದಲ್ಲಿ ಕಲಿಯುವ ಅವಕಾಶ. (ಕೇವಲ 300 ರೂ, 500 ರೂ. ಗೆ ಇಂತಹ ಕೋರ್ಸ್ಗೆ ಸೇರಬಹುದಾಗಿದೆ).

•    ಕನ್ನಡ ವಿದ್ಯಾರ್ಥಿಗಳನ್ನುಗಮನದಲ್ಲಿಟ್ಟುಕೊಂಡು ನರ್ಸಿಂಗ್, ಪ್ಯಾರಮೆಡಿಕಲ್, ಅಲೈಡ್ ಹೆಲ್ತ್ಕೇರ್ ಸಬ್ಜೆಕ್ಟ್ಗಳನ್ನು ಅತ್ಯಂತ ಸರಳವಾಗಿ ಅರ್ಥ ಮಾಡಿಸುವ ಪ್ರಯತ್ನ ಇದಾಗಿದೆ.

•   ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರಕಬೇಕುಎನ್ನುವುದು preped.in ಕಾಳಜಿ. ಈ ವಿಶೇಷ ಕೋರ್ಸ್ಗಳಿಗೆ ಸೇರಿದ ವಿದ್ಯಾರ್ಥಿಗಳು ತಮ್ಮ ನರ್ಸಿಂಗ್, ಪ್ಯಾರಮೆಡಿಕಲ್, ಅಲೈಡ್ ಹೆಲ್ತ್ಕೇರ್ ಕೋರ್ಸ್ಗಳನ್ನು ಅತ್ಯಂತ ಸುಲಭವಾಗಿ ಪಾಸ್ ಆಗಬಹುದು.

•   Preped. ಇನ್ ವೆಬ್ ಮತ್ತು ಆಪ್‌ನಲ್ಲಿ ೫೦೦ಕ್ಕೂ ಹೆಚ್ಚು ವಿಡಿಯೋ ಲೆಕ್ಚರರ್ಗಳನ್ನು ಅಪ್ಲೋಡ್ ಮಾಡಲಾಗಿದೆ. ಸ್ಥಳೀಯ ಭಾಷೆಯಲ್ಲಿ ಬೋಧಕರು ಬೋಧಿಸುವುದು ಇದರ ವಿಶೇಷ. ಮುಖ್ಯವಾಗಿ ಕನ್ನಡಿಗರಿಗೆ ಕನ್ನಡ ಭಾಷೆಯಲ್ಲಿ ಕಲಿಯಲು ಸಾಧ್ಯವಾಗಲಿದೆ. ಶೀಘ್ರದಲ್ಲಿ ಕೋರ್ಸ್‌ಗಳನ್ನು ಕಲಿಯಬಹುದು.

•     ೧೦ನೇ ತರಗತಿ ಬಳಿಕದ ನರ್ಸಿಂಗ್, ಪ್ಯಾರಮೆಡಿಕಲ್, ಅಲೈಡ್ ಹೆಲ್ತ್‌ಕೇರ್‌ ವಿಷಯಗಳನ್ನುಕಲಿಯಬಹುದು.

ಪ್ರಿಪೇರ್ ಎಜುಟೆಕ್ ವೆಬ್ಸೈಟ್  ನೋಡಲು ಇಲ್ಲಿ ಕ್ಲಿಕ್ ಮಾಡಿ

ಪ್ರಿಪೇರ್ ಎಜುಟೆಕ್ ಅವರ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ.

ಪ್ರಿಪೆಡ್‌.ಇನ್‌ App ಡೌನ್ಲೋಡ್ಮಾಡಿಕೊಳ್ಳಿ

(ಪ್ರಾಯೋಜಿತ ಬರಹ)

Leave a Comment

Your email address will not be published. Required fields are marked *