Ad Widget .

ಬೆಳ್ತಂಗಡಿ: ಮಗಳನ್ನು ಕೊಡಲೊಪ್ಪದ ತಂದೆ | ಕತ್ತಿಯಿಂದ ಕಡಿದ ಸುಬ್ರಮಣ್ಯದ ಯುವಕ

ಬೆಳ್ತಂಗಡಿ: ಮಗಳನ್ನು ವಿವಾಹ ಮಾಡಿ ಕೊಡಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಯುವತಿಯ ತಂದೆಗೆ ಯುವಕನೊಬ್ಬ ಕತ್ತಿಯಿಂದ ಕಡಿದ ಘಟನೆ ತಾಲೂಕಿನ ಲಾಯಿಲ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಲಾಯಿಲ ವಿವೇಕಾನಂದ ನಗರದ ಸೋಮನಾಥ ಕಲಾಲ್ ಗಾಯಗೊಂಡವರು. ಸುಬ್ರಹ್ಮಣ್ಯದ ಕೈಕಂಬ ನಿವಾಸಿ ದಿನೇಶ್ ಆರೋಪಿ. ದಿನೇಶ್ ಹಲವು ದಿನಗಳಿಂದ ಸೋಮನಾಥ ಅವರ ಮಗಳನ್ನು ಮದುವೆ ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಅವರು ಒಪ್ಪದಿದ್ದಾಗ ಹಲವು ಬಾರಿ ಬೆದರಿಕೆಗಳನ್ನು ಒಡ್ಡಿದ್ದ. ಇದ್ಯಾವುದಕ್ಕೂ ಸೋಮನಾಥ ಅವರು ಬಗ್ಗಿರಲಿಲ್ಲ.

Ad Widget . Ad Widget .

ಇದರಿಂದ ಕುಪಿತಗೊಂಡ ದಿನೇಶ್ ಮನೆಗೆ ಬಂದು ಸೋಮನಾಥ್ ಅವರ ಪತ್ನಿ ಹಾಗೂ ಮಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ. ಸ್ವರಕ್ಷಣೆಗಾಗಿ ಅವರು ಕೈ ಎತ್ತಿದಾಗ ಕೈಗೆ ಕಡಿದಿದ್ದಾನೆ. ಬೊಬ್ಬೆ ಕೇಳಿ ಅಕ್ಕಪಕ್ಕದ ಮನೆಯವರು ಧಾವಿಸಿದಾಗ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *