Ad Widget .

‘ಲವ್ ಜಿಹಾದ್’ ಅಂದ್ರೆ ಮುಸ್ಲಿಂಗೆ ಮಾತ್ರ‌ ಸೀಮಿತ ಅಲ್ಲವೆಂದ ಅಸ್ಸಾಂ ಸಿಎಂ

ಗುವಾಹಟಿ: ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಪ್ರೀತಿ ಹೆಸರಲ್ಲಿ ‌ಮೋಸ ಮಾಡಿದ್ರೆ ಮಾತ್ರ ಲವ್ ಜಿಹಾದ್ ಅಲ್ಲ, ಹಿಂದೂ ಹುಡುಗ ಹಿಂದೂ ಹುಡುಗಿಗೆ ಮೋಸ ಮಾಡಿದ್ರೂ ಅದು ಲವ್ ಜಿಹಾದ್ ಎನಿಸಿಕೊಳ್ಳುತ್ತೆ ಎಂದು ಅಸ್ಸಾಂ ಸರ್ಕಾರ ಅಭಿಪ್ರಾಯಪಟ್ಟಿದೆ.

Ad Widget . Ad Widget .

ನಾವು ಲವ್‌ಜಿಹಾದ್ ಪದವನ್ನು ಬಳಸಲು ಬಯಸುವುದಿಲ್ಲ. ಏಕೆಂದರೆ ಹಿಂದೂವೊಬ್ಬ ಹಿಂದೂ ಯುವತಿಗೆ ಮೋಸ ಮಾಡಬಾರದು ಎಂದು ನಾವು ಭಾವಿಸುತ್ತೇವೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಮೋಸ ಮಾಡುವುದು ಮಾತ್ರ ಲವ್‌ ಜಿಹಾದ್ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Ad Widget . Ad Widget .

ಈ ಕಾನೂನು ಹಿಂದೂ ಮತ್ತು ಮುಸಲ್ಮಾನರು ಸೇರಿದಂತೆ ಎಲ್ಲರಿಗೂ ಏಕರೂಪವಾಗಿರುತ್ತದೆ ಎಂದು ಹೇಳಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಹಿಂದೂ ಯುವಕನೊಬ್ಬ ಹಿಂದೂ ಯುವತಿಗೆ ಪ್ರೀತಿ ಹೆಸರಲ್ಲಿ ತನ್ನ ಧರ್ಮ ಮತ್ತು ಇತರೆ ವೈಯಕ್ತಿಕ ಮಾಹಿತಿಗಳನ್ನು ಮರೆಮಾಚಿ ಮೋಸ ಮಾಡೋದು ಕೂಡ ಲವ್‌ ಜಿಹಾದ್ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಲವ್‌ ಜಿಹಾದ್ ಅನ್ನೋದು ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯ ನಡುವಿನ ಸಂಬಂಧವನ್ನು ಗುರಿಯಾಗಿಸಿಕೊಂಡು ಬಲಪಂಥೀಯ ಗುಂಪುಗಳು ಬಳಸುವ ಪದವಾಗಿದ್ದು, ಇದು ಮಹಿಳೆಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡುವ ಹುನ್ನಾರವಾಗಿದೆ ಎಂದು ಹೇಳಲಾಗುತ್ತಿದೆ. ಈ ವರ್ಷ ಅಸ್ಸಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಲವ್‌ ಜಿಹಾದ್ ವಿರುದ್ಧ ಕಠಿಣ ಕಾನೂನು ತರುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.

Leave a Comment

Your email address will not be published. Required fields are marked *