ವಾಷಿಂಗ್ಟನ್: ಇಲ್ಲಿನ ಪಬ್ಲಿಕ್ ಸ್ಕೂಲ್ಸ್ ಬೋರ್ಡ್ ತನ್ನ ಅಧೀನದ ಶಾಲೆಗಳಲ್ಲಿ ಉಚಿತ ಕಾಂಡೋಮ್ ಯೋಜನೆ ಜಾರಿಗೊಳಿಸಿ ಐದನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿಯೇ ಕಾಂಡೋಮ್ ನೀಡಿ ಪ್ರೋ ತ್ಸಾಹಿಸಲಾಗುತ್ತಿದೆ.
ಇಂತಾಹದೊಂದು ಅಚ್ಚರಿ ಘಟನೆ ಚಿಕಾಗೊದಲ್ಲಿ ನಡೆದಿದೆ. ಐದನೇ ತರಗತಿ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಕಾಂಡೋಮ್ ಒದಗಿಸಲಾಗುತ್ತಿದೆ. ಆದರೆ ಐದನೇ ತರಗತಿಯಿಂದ ಕೆಳಗಿನ ಮಕ್ಕಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
ಇದಕ್ಕೆ ಸಮಜಾಯಿಸಿ ನೀಡಿರುವ ಸಿಪಿಎಸ್, ಉತ್ತಮ ಲೈಂಗಿಕ ಶಿಕ್ಷಣವು ಆರಂಭದಲ್ಲಿಯೇ ದೊರೆಯಬೇಕು. ಅದರಿಂದ ಅಕಾಲಿಕ ಸಂತಾನ ಮತ್ತು ಲೈಂಗಿಕ ರೋಗ ಹರಡುವುದನ್ನು ತಡೆಗಟ್ಟಬಹುದು ಎಂದು ಹೇಳಿದೆ. ಕಳೆದ ಡಿಸೆಂಬರ್‌ನಲ್ಲಿಯೇ ಚಿಕಾಗೊ ಪಬ್ಲಿಕ್ ಸ್ಕೂಲ್ ಬೋರ್ಡ್ ಈ ವಿಚಿತ್ರ ಯೋಜನೆ ಸಿದ್ಧಪಡಿಸಿ ಕೆಲವು ಶಾಲೆಗಳಲ್ಲಿ ಜಾರಿಗೆ ಕೂಡ ತಂದಿದೆ. ನಗರದ ೬೦೦ಕ್ಕಿಂತ ಹೆಚ್ಚಿನ ಶಾಲೆಗಳಲ್ಲಿ ಕಾಂಡೋಮ್ ಭಾಗ್ಯ ಜಾರಿಗೊಳಿಸಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ಇಲಾಖೆಯೇ ಕಾಂಡೋಮ್ ವೆಚ್ಚ ಭರಿಸುತ್ತಿದ್ದು, ಮಂಡಳಿಗೆ ಯಾವುದೇ ನಷ್ಟವಿಲ್ಲ.
ಮಕ್ಕಳಿಗೆ ಸರಿಯಾದ ಲೈಂಗಿಕ ಶಿಕ್ಷಣ ನೀಡುವುದಷ್ಟೆ ನಮ್ಮ ಕೆಲಸ. ಇದು ತಪ್ಪು ಎಂದು ಕೆಲವರು ಟೀಕಿಸುತ್ತಿದ್ದಾರೆ. ಮಕ್ಕಳು ಏನೂ ತಿಳಿಯದೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಹದಿಹರೆಯದಲ್ಲೆ ಗರ್ಭ ಧರಿಸುವ ಅಪಾಯ ಹೆಚ್ಚಿದೆ. ಇದರಿಂದ ಸಮಾಜದಲ್ಲಿ ಅಕ್ರಮ ಸಂತಾನ ಹೆಚ್ಚಿ ಅನಾಥ ಮಕ್ಕಳು ಹೆಚ್ಚಾಗುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಎಚ್‌ಐವಿಯಂತಹ ಅಪಾಯಕಾರಿ ಲೈಂಗಿಕ ರೋಗಗಳೂ ಕಾಣಿಸಿ ಸಮಸ್ಯೆ ಸೃಷ್ಟಿಯಾಗುತ್ತದೆ. ಇದರಿಂದ ದೊಡ್ಡ ಅನಾಹುತ ಆಗಬಹುದು. ಹಾಗಾಗಿ ಕಾಂಡೋಮ್ ಉತ್ತಮ ಪರಿಹಾರ ಎಂದು ಸಿಪಿಎಸ್ ವೈದ್ಯ ಕೆನೆತ್ ಫಾಕ್ಸ್ ಪ್ರತಿಕ್ರಿಯಿಸಿದೆ.
ಇತ್ತ ಪ್ರೌಢ ಶಾಲೆಯೊಂದಕ್ಕೆ ತಿಂಗಳಿಗೆ 250, ಹೈಸ್ಕೂಲ್‌ಗೆ 1,000 ಕಾಂಡೋಮ್‌ಗಳನ್ನು ನೇರ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಸಿಪಿಎಸ್ ಈ ಯೋಜನೆಗೆ ಮಕ್ಕಳ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ದಾರಿ ತಪ್ಪಿಸುವ ಕ್ರಮ ಇದಾಗಿದ್ದು, ಅವರ ಕೈಗೆ ಕಾಂಡೋಮ್ ನೀಡಿದರೆ ಆಟ ಆಡಲು ಬಳಸುತ್ತವೆ. ಕೆಲವು ಮಕ್ಕಳು ಕಾಂಡೋಮ್ ಇವೆ ಎನ್ನುವ ಕಾರಣಕ್ಕೆ ಅಕ್ರಮ ಲೈಂಗಿಕ ಕ್ರಿಯೆಗೆ ಯತ್ನಿಸಬಹುದು ಎಂದು ಆಕ್ರೋಶ ಹೊರಹಾಕಿದ್ದಾರೆ.