Ad Widget .

ಸುಳ್ಯ: ಜೀತ ಕಾರ್ಮಿಕ ಪದ್ದತಿ ಇನ್ನೂ ಜೀವಂತ, ಮಕ್ಕಳು, ಮಹಿಳೆಯರಿಂದ ಸಂಬಳವಿಲ್ಲದ ದುಡಿಮೆ; ಅಧಿಕಾರಿಗಳಿಂದ ದಾಳಿ | ಸಾಮಾಜಿಕ ಸೇವೆಯೆಂದ ಮನೆ ಯಜಮಾನ!

ಸುಳ್ಯ: ಮನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸೇರಿದಂತೆ ಹಲವು ಮಂದಿಗೆ ಸಂಬಳ ನೀಡದೆ ದುಡಿಸುತ್ತಿರುವುದು ಕಂಡುಬಂದು, ಅಧಿಕಾರಿಗಳು ದಾಳಿ ನಡೆಸಿದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಗ್ರಾಮದ ಕರಿಕಳದಲ್ಲಿ ನಡೆದಿದೆ.

Ad Widget . Ad Widget .

ಪಂಜ ಗ್ರಾಮದ ಕರಿಕಳದ ವಿಶ್ವನಾಥ್ ಭಟ್ ಎಂಬವರ ಮನೆಯಲ್ಲಿ ಈ ಘಟನೆ‌ ನಡೆದಿದ್ದು ಇಲ್ಲಿ ಸುಮಾರು 8-10 ಮಕ್ಕಳು ಹಾಗೂ ಮಹಿಳೆಯರನ್ನು ದುಡಿಯುತ್ತಿದ್ದರು. ಆದರೆ ಇವರ ದುಡಿಮೆಗೆ ಯಾವುದೇ ರೀತಿಯಲ್ಲಿ ಸಂಬಳವನ್ನು ನೀಡಲಾಗುತ್ತಿಲ್ಲ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಪುಟ್ಟ ಪುಟ್ಟ ಮಕ್ಕಳು ದನ ಮೇಯಿಸುತ್ತಿರುವ ವೀಡಿಯೋ ಕೂಡ ವೈರಲ್ ಆಗಿತ್ತು. ಸಾಮಾಜಿಕ ಸಂಘಟನೆ ‘ನೀತಿ’ ತಂಡಕ್ಕೆ ಲಭ್ಯವಾದ ಮಾಹಿಯನ್ವಯ ಬಚ್​​​​ಪನ್ ಬಚಾವೋ ಸಂಸ್ಥೆಯು, ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶಕರಿಗೆ ನೀಡಿದ ದೂರು ಆಧರಿಸಿ, ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶಕರಾದ ಪಲ್ಲವಿ ಆಕುರಾತಿ ಅವರು ದ.ಕ ಜಿಲ್ಲಾಧಿಕಾರಿಗಳಿಗೆ ಘಟನೆಯ ವಿವರ ಪಡೆದು ದಾಳಿ ನಡೆಸಿ ಮಕ್ಕಳನ್ನು ರಕ್ಷಣೆ ಮಾಡುವಂತೆ ಆದೇಶಿಸಿದರು.

Ad Widget . Ad Widget .

ಈ ಆದೇಶದ ಮೇರೆಗೆ ಬಚ್​ಪನ್ ಬಚಾವೋ ರಾಜ್ಯ ಸಮನ್ವಯಾಧಿಕಾರಿ ಬೆಂಗಳೂರಿನ ಬಿನು ವರ್ಗೀಸ್, ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮೀ ಅವರ ನೇತೃತ್ವದಲ್ಲಿ ಬಾಲ ಕಾರ್ಮಿಕ ಅಧಿಕಾರಿಗಳು, ಪುತ್ತೂರು ಕಾರ್ಮಿಕ ಇಲಾಖೆ ಅಧಿಕಾರಿಗಳು, ಸುಳ್ಯ ಸಿಡಿಪಿಓ, ಇನ್ನಿತರೆ ಅಧಿಕಾರಿಗಳು ದಾಳಿ ನಡೆಸಿ ಮಾಹಿತಿ ಕಲೆಹಾಕಿದ್ದಾರೆ.

ದಾಳಿ ನಡೆಸಿದ ವೇಳೆ ಅಧಿಕೃತ ದಾಖಲೆಗಳು ಇಲ್ಲದೇ ಮಾನಸಿಕ ಅಸ್ವಸ್ಥರು, ಮಹಿಳೆಯರು, ಪುಟ್ಟ ಮಕ್ಕಳು ಕಂಡುಬಂದಿದ್ದಾರೆ. ಮನೆಯವರು ಸಾಮಾಜಿಕ ಸೇವೆ ಮಾಡುತ್ತಿದ್ದೇವೆ ಎಂಬುದಾಗಿ ಸಮಾಜಾಯಿಷಿ ಹೇಳಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ಟ್ರಸ್ಟ್ ನೋಂದಣಿಯಾಗಲಿ, ಜನರಿಗೆ ಆಧಾರ್ ಸೇರಿದಂತೆ ಯಾವುದೇ ಅಧಿಕೃತ ದಾಖಲೆಗಳೂ ಇವರ ಬಳಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ 48 ಗಂಟೆಗಳ ಒಳಗಾಗಿ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಜೀತಕಾರ್ಮಿಕವೋ, ಸಾಮಾಜಿಕ ಸೇವೆಯೋ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ

Leave a Comment

Your email address will not be published. Required fields are marked *