Ad Widget .

ಪರಪ್ಪನ ಅಗ್ರಹಾರಕ್ಕೆ ಬೆಳ್ಳಂಬೆಳಗ್ಗೆ ಸಿಸಿಬಿ ದಾಳಿ | ಮಾರಕಾಸ್ತ್ರ, ಡ್ರಗ್ಸ್, ಮೊಬೈಲ್ ವಶ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಗಾಂಜಾ ವಾಸನೆ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು ಗಾಂಜಾ, ಮಾರಕಾಸ್ತ್ರ, ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Ad Widget . Ad Widget .

ಬೆಂಗಳೂರಿನಲ್ಲಿ ಮಾದಕ ವಸ್ತು ಜಾಲವನ್ನು ಸಂಪೂರ್ಣವಾಗಿ ಹೆಡೆಮುರಿಕಟ್ಟಲು ಕಳೆದೊಂದು ವರ್ಷಗಳಿಂದ ಪಣತೊಟ್ಟಿರುವ ಪೊಲೀಸರು ನಟ-ನಟಿಯರು ಸೇರಿದಂತೆ ಅನೇಕ ಡ್ರಗ್ ಪೆಡ್ಲರ್ ಗಳನ್ನು ಈಗಾಗಲೇ ಜೈಲಿಗಟ್ಟಿದ್ದಾರೆ. ಇನ್ನು ನಗರದಾದ್ಯಂತವಿರುವ ಪೊಲೀಸರು ಡ್ರಗ್ಸ್ ಜಾಲದ ಬೆನ್ನುಬಿದ್ದಿದ್ದರೆ, ಇತ್ತ ಪರಪ್ಪನ ಅಗ್ರಹಾರದಲ್ಲಿರುವ ಪೊಲೀಸರೇ ಕೈದಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿತ್ತು.

Ad Widget . Ad Widget .

ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮಾದಕ ವಸ್ತು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಕೈದಿಗಳು ಜೈಲಿನಲ್ಲಿ ಸಿಗುವ ಊಟದ ತಟ್ಟೆ ಮತ್ತು ಲೋಟಗಳನ್ನು ಮಾರಕಾಸ್ತ್ರಗಳನ್ನಾಗಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಜೈಲಿನ ಮೂಲೆಮೂಲೆಯಲ್ಲಿ ಪೊಲೀಸರು ಜಾಲಾಡಿದ್ದಾರೆ. ಜೈಲಿನೊಳಗೆ ಗಾಂಜಾ ಪೂರೈಕೆಯಾದ ಬಗ್ಗೆ ವಿಸ್ತೃತ ತನಿಖೆ ನಡೆಯುತ್ತಿದೆ.

Leave a Comment

Your email address will not be published. Required fields are marked *