ದಾವಣಗೆರೆ; ದಿನೇದಿನೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಜಾಸ್ತಿ ಆಗ್ತಿದೆ. ಇದರ ಬಗ್ಗೆ ನೀವ್ಯಾಕೆ ಪ್ರಶ್ನೆ ಮಾಡ್ಬಾರ್ದು, ಅಂತ ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರರನ್ನು ಕೇಳಿದ್ರೆ ಅವ್ರು ಹೇಳೋ ಉತ್ತರ ಕೇಳಿದ್ರೆ ಇವ್ರೇನಾ ನಮ್ಮ ಸಂಸದರು ಅನ್ನೋ ಪ್ರಶ್ನೆ ಉಂಟಾಗುತ್ತೆ.
ಹೌದು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ದಾವಣಗೆರೆ ಬಿಜೆಪಿ ಸಂಸದ ಜಿ.ಎಮ್. ಸಿದ್ದೇಶ್ವರ್ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆಯಿಂದ ಜನರು ಸೈಕಲ್ ಏರುವ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ ಎಂಬ ಪ್ರಶ್ನೆಗೆ ಸಂಸದ ಜಿ.ಎಂ. ಸಿದ್ದೇಶ್ವರ್ ಹೀಗೆ ಪ್ರತಿಕ್ರಿಯೆ ನೀಡಿದ್ದು, ಸೈಕಲ್ ನಲ್ಲಿ ಓಡಾಡಿದ್ರೆ ಒಳ್ಳೆಯ ವ್ಯಾಯಾಮ ಆಗುತ್ತೆ ಎಂದು ಬಾಲಿಶ ಹೇಳಿಕೆ ನೀಡಿದ್ದಾರೆ.
ಇಂಧನ ಬ್ಯಾರಲ್ ರೇಟ್ ಜಾಸ್ತಿ ಇದೆ, ಪೆಟ್ರೋಲ್ ಬೆಲೆ ಜಾಸ್ತಿ ಆಗಿದೆ. ಪೆಟ್ರೋಲ್ ರೇಟ್ ಜಾಸ್ತಿ ಆದ್ರೆ ಏನ್ ಮಾಡೋಕೆ ಆಗುತ್ತೆ? ಅದನ್ನೆಲ್ಲ ಮೋದಿ ನೋಡಿಕೊಳ್ಳುತ್ತಾರೆ. ಜನ ಸೈಕಲ್‌ನಲ್ಲಿ ಓಡಾಡಿದ್ರೆ ಏನ್ ಆಗುತ್ತೆ. ಒಳ್ಳೆಯ ವ್ಯಾಯಾಮ ಆಗುತ್ತೆ ಎಂದು ಉಡಾಫೆ ಮೆರೆದಿದ್ದಾರೆ.
ಇನ್ನು ಇದೇ ವೇಳೆ ಜಿಎಸ್ಟಿ ಪಾಲು ಕರ್ನಾಟಕ ರಾಜ್ಯಕ್ಕೆ ಸಿಗುತ್ತಿಲ್ಲ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ಜಿಎಸ್ಟಿ ಪಾಲಿನ ಬಗ್ಗೆ ನಮಗೇನೂ ಗೊತ್ತಿಲ್ಲ. ಈ ಬಗ್ಗೆ ಹಣಕಾಸು ಸಚಿರನ್ನೇ ಕೇಳಿ ಎಂದು ಬೇಜವಾಬ್ದಾರಿಯುತ ಉತ್ತರ ನೀಡಿದ್ದಾರೆ.