Ad Widget .

ಬೆಳ್ತಂಗಡಿ: ಹೆಂಡತಿಯ ಕೈಗೆ ಚೊಂಬು ಕೊಟ್ಟು ನಾದಿನಿಯನ್ನು ಹಾರಿಸಿಕೊಂಡು ಹೋದ ಗಂಡ

ಬೆಳ್ತಂಗಡಿ: ನವ ವಿವಾಹಿತ ಓರ್ವ ತನ್ನ ಹೆಂಡತಿಯನ್ನು ಬಿಟ್ಟು ನಾದಿನಿಯ ಜೊತೆ ಪರಾರಿಯಾದ ಘಟನೆ ಘಟನೆ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಕೈಕಂಬ ಎಂಬಲ್ಲಿ ನಡೆದಿದೆ.

Ad Widget . Ad Widget .

ಪರಾರಿಯಾದವರನ್ನು ಮುಸ್ತಾಫ್ ಮತ್ತು ರೈಹಾನಳ ಎಂದು ಹೇಳಲಾಗಿದೆ. ಮುಸ್ತಫಾ 9 ತಿಂಗಳ ಹಿಂದೆ ಮುಹಮ್ಮದ್ ಅವರ ಪುತ್ರಿ ಸೌಧಾ ಎಂಬಾಕೆಯನ್ನು ವಿವಾಹ ವಾಗಿದ್ದನು. ಅನಂತರ ಆತ ಮತ್ತು ಪತ್ನಿ ಸೌದ ಮಾವನ ಮನೆಗೆ ಬಂದು ಹೋಗುತ್ತಿದ್ದರು. ಈ ಸಂದರ್ಭ ನಾದಿನಿ ರೈಹಾನಳ ಜೊತೆಗೆ ಅಳಿಯ ಮುಸ್ತಫಾ ಸಲುಗೆಯಿಂದ ಇದ್ದುದ್ದಲ್ಲದೇ ಪೋನ್ ಮುಖಾಂತರ ಕೂಡ ಮಾತನಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಪತ್ನಿ ಮನೆಯಲ್ಲಿ ಇಲ್ಲದ ಸಂದರ್ಭ ಮುಸ್ತಾಫ್ ರೈಹಾನಳನ್ನು ಆತನ ಮನೆಗೆ ಕರೆಸಿಕೊಳ್ಳುತಿದ್ದಳು ಎಂದು ಹೇಳಲಾಗುತ್ತಿದೆ.

Ad Widget . Ad Widget .

ಇವರ ಅಕ್ರಮ ಕುಚುಕು ಸಂಬಂಧ ಪತ್ನಿ ಸೌಧಾನಿಗೆ ತಿಳಿಯುತ್ತಿದ್ದಂತೆ ಮುಸ್ತಫಾ ನಡುವೆ ಜಗಳ ಮಾಡಿಕೊಂಡು ಸೌಧಾ ತನ್ನ ತವರು ಮನೆಗೆ ತೆರಳಿದ್ದಳು.

ಜು.8 ರಂದು ಬೆಳಿಗ್ಗೆ ಸುಮಾರು 6-45 ಗಂಟೆಗೆ ಮುಸ್ತಫಾ ಹಾಗೂ ಅವನ ತಾಯಿ ಕಾರಿನಲ್ಲಿ ಕನ್ಯಾಡಿಯ ಕೈಕಂಬದಲ್ಲಿರುವ ಮಾವನ ಮನೆಗೆ ಬಂದಿದ್ದರು. ಆ ಸಮಯ ನಾದಿನಿ ರೈಹಾನಳು ಮನೆಯಲ್ಲಿ ಯಾರಿಗೂ ಹೇಳದೇ ಬ್ಯಾಗೊಂದನ್ನು ಹಿಡಿದುಕೊಂಡು ಬಾವನ ಜೊತೆ ಕಾರುಹತ್ತಿ ಹೋಗಿದ್ದಾಳೆ.

ಸದ್ಯ ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *