ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ರ ನಡುವೆ ವಿವಾದಗಳು ಕೆಲ ದಿನಗಳಿಂದ ನಡೆವುತ್ತಿದೆ. ವಿವಾದ ಹೆಚುತ್ತಿದ್ದಂತೆ ಸುಮಲತಾ ಅವರ ಅಭಿಮಾನಿಗಳು ಸುಮಲತಾ ಮತ್ತು ಅಂಬರೀಶ್ ಬೆಂಬಲಿಗರು ಪೇಜ್ ಗಳಲ್ಲಿ ಹೆಚ್‌ಡಿಕೆ ಅಂಬರೀಶ್ ಮುಂದೆ ಕೈಕಟ್ಟಿ ನಿಂತ ಪೋಟೋವನ್ನು ವಿವಿಧ ಬರಹಗಳ ಮುಖಾಂತರ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಸುಮಲತಾ, ನಮ್ಮ ಪಕ್ಷ ನಿಮ್ಮಂತಹ ಸಾವಿರಾರೂ ಲೀಡರ್ ಗಳನ್ನು ತಯಾರು ಮಾಡಿದೆ ಅಂತ ಹೇಳುತ್ತಾರೆ. ನೀವು ಸಾವಿರಾರರು ಜನರನ್ನು ತಯಾರು ಮಾಡಿಸಿರಬಹುದು. ಆದ್ರೆ ನಿಮ್ಮ ಈ ರೀತಿಯ ನಡವಳಿಕೆ, ಮಾತುಗಳಿಂದಲೇ ಎಷ್ಟೋ ಒಳ್ಳೆಯ ಜನ ಬೇರೆ ಪಕ್ಷ ಸೇರಿಕೊಂಡಿದ್ದಾರೆ. ನಿಮ್ಮ ಮಾತುಗಳಿಂದಲೇ ಅವರೆಲ್ಲ ನಿಮ್ಮ ಪಕ್ಷ ತೊರೆದಿರೋದು. ನೀವು ತಯಾರು ಮಾಡಿರುವ ಸಾವಿರಾರರು ಜನ, ಅದಕ್ಕಿಂತ ದೊಡ್ಡವರು ಅಂಬರೀಶ್ ಅವರ ಮುಂದೆ ಕೈ ಕಟ್ಟಿ ನಮ್ಮ ಮನೆಯಲ್ಲಿ ನಿಂತಿರೋದನ್ನು ಹಲವು ವರ್ಷ ನೋಡಿದ್ದೇನೆ ಎಂದು ಹೇಳಿದ್ದರು.
ಈ ಹೇಳಿಕೆ ಬೆನ್ನಲ್ಲೇ ಫೋಟೋ ವೈರಲ್ ಮಾಡುವ ಮೂಲಕ ಸುಮಲತಾ ಬೆಂಬಲಿಗರು ದಳಪತಿಗಳಿಗೆ ಟಕ್ಕರ್ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಿನ್ನೆ ಅಂಬರೀಶ್ ಎದುರು ಕೈಕಟ್ಟಿ ನಿಲ್ಲುತ್ತಿದ್ದವರೆಲ್ಲಾ ಈಗ ಮಾತನಾಡುತ್ತಿದ್ದಾರೆ ಎಂದು ಸುಮಲತಾ ಅಂಬರೀಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.
ಇನ್ನೂ ಈ ಬಗ್ಗೆ ಮಾತನಾಡಿದ್ದ ಕುಮಾರಸ್ವಾಮಿ ಸ್ಥಳೀಯ ಜೆಡಿಎಸ್ ಶಾಸಕರುಗಳು ಕಳೆದ ಎರಡು ವರ್ಷದಿಂದ ನಾನು ಏನು ಮಾಡಿದರೂ ಅದನ್ನು ವಿರೋಧ ಮಾಡಿಕೊಂಡು ಬಂದಿದ್ದಾರೆ. ಅವರಿಂದ ಸಹಕಾರವನ್ನ ಬಯಸುವುದು ಕನಸಿನ ಮಾತು. ಯಾರಾದರೂ ಒಳ್ಳೆ ಕೆಲಸ ಮಾಡಿದರೆ ಅದನ್ನ ತಿರುಚುವ ಕೆಲಸ ಮಾಡುತ್ತಿದ್ದಾರೆ. ಕೊರೊನಾದ ಸಂದರ್ಭದಲ್ಲಿ ಆಕ್ಸಿಜನ್ ಹಾಗೂ ಐಸಿಯು ಅಂಬ್ಯುಲೆನ್ಸ್ ನಾನು ಪರ್ಸನಲ್ ಆಗಿ ಕೊಡಿಸಿದ್ದೇನೆ. ಒಂದೊAದು ಜೀವಕ್ಕೂ ಬೆಲೆ ಇಲ್ವಾ? ಅವರು ಎಲ್ಲವನ್ನು ತಿರುಚಿ ತಿರುಗಿಸಿ ಹೇಳ್ತಾರೆ. ಕಳೆದ ಲೋಕ ಸಭೆ ಚುನಾವಣೆ ಸೋಲು ಇದುವರೆಗೆ ಡೈಜೆಸ್ಟ್ ಮಾಡಿಕೊಳ್ಳೋಕೆ ಅವರಿಗೆ ಆಗಿಲ್ಲ. ಈ ಬೆಳವಣಿಗೆಯೆ ಅದಕ್ಕೆಲ್ಲಾ ದೊಡ್ಡ ಕಾರಣ. ಅವರು ಮಂಡ್ಯಕ್ಕೆ ಬಂದಾಗಲೆಲ್ಲಾ ಆ ನೋವನ್ನು ಹೊರ ಹಾಕ್ತಿದಾರೆ. ಆದರೆ ಜನ ಒಂದು ಸರಿ ತೀರ್ಪು ಕೊಟ್ಟ ನಂತರ ಅದನ್ನ ಒಪ್ಪಿಕೊಳ್ಳಬೇಕು. ಮುಂದಿನ ಬಾರಿ ಪ್ರಯತ್ನ ಪಡೋಣ ಅನ್ನಬೇಕು ಎರೆಡು ಬಾರಿ ಸಿಎಂ ಆದವರು ಅದನ್ನ ಸ್ವೀಕರಿಸಬೇಕು ಹೊರತು ಈ ರೀತಿಯ ಚೈಲ್ಡಿಶ್ ಹೇಳಿಕೆ ಅವರಿಗೆ ಶೋಭೆ ತರಲ್ಲ ಎಂದರು.
ಡೀಲ್ ಗಳಲ್ಲಿ ಮಾಸ್ಟರ್ ಯಾರು ಅಂತ ಕರ್ನಾಟಕದ ಜನರಿಗೆ ಗೊತ್ತು. ನಾನು ಜಾಸ್ತಿ ಮಾತನಾಡಿದರೆ ಅವರಿಗೆ ಹೇಸಿಗೆ ಆಗುತ್ತೆ. ಡೀಲ್ ಅವರಿಗೆ ಪ್ರಧಾನ ಅಜೆಂಡ ರೀತಿ ಆಗಿದೆ. ಪ್ರತಿ ಒಂದು ಕೆಲಸದಲ್ಲೂ ಡೀಲ್ ಮಾಡ್ತಾರೆ. ಆಡಿಯೋ, ವೀಡಿಯೋ ಏನೇ ಇದ್ರೂ ರಿಲೀಸ್ ಮಾಡಲಿ ಅದನ್ನ ಫೇಸ್ ಮಾಡ್ತೀನಿ ಅವರಿಗೆ ಚಾಲೆಂಜ್ ಮಾಡ್ತೀನಿ. ಅಂಬರೀಶ್ ಮನೆಯಲ್ಲಿ ನಾನೇ ಆಗಲಿ, ನನ್ನ ಮಗನಾಗಲಿ ಭ್ರಷ್ಟಾಚಾರದ ದಾರಿಯಲ್ಲಿ ಹೋಗುವ ಕರ್ಮ ನಮಗೆ ಇಲ್ಲ ಎಂದಿದ್ದಾರೆ.