Ad Widget .

ಪಕ್ಷನಿಷ್ಠೆ, ಜವಾಬ್ದಾರಿ ನಿರ್ವಹಣೆಗೆ ಕೇಂದ್ರ ಸಚಿವೆ ಸ್ಥಾನ. ಇದು‌ ಲಕ್ ಅಲ್ಲ, ಪರಿಶ್ರಮದ ಪ್ರತಿಫಲ

ಶೋಭಾ ಕರಂದ್ಲಾಜೆ, ಕರಾವಳಿಯ ಈ ಹೆಣ್ಣು‌ಮಗಳು ಈಗ ರಾಷ್ಟ್ರೀಯ ರಾಜಕಾರಣಕ್ಕೆ ಸಕ್ರಿಯವಾಗಿ‌ ಎಂಟ್ರಿಕೊಟ್ಟಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಕೃಷಿ ಹಾಗೂ ರೈತಕಲ್ಯಾಣ ಸಹಾಯಕ ಸಚಿವೆಯಾಗಿ ನಿನ್ನೆಯಷ್ಟೇ ಅಧಿಕಾರ ವಹಿಸಿಕೊಂಡರು. ಇವರ ಈ ಆಯ್ಕೆ ರಾಜಕೀಯ ವಲಯದಲ್ಲಿ ಅಚ್ಚರಿ ಹಾಗೂ ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿತ್ತು. ಶೋಭಾ ಕರಂದ್ಲಾಜೆಯವರ ರಾಜಕೀಯ ಗುರು ಡಿ.ವಿ ಸದಾನಂದ ಗೌಡರನ್ನೇ ಕೈಬಿಟ್ಟು, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಈ ಸಂಸದೆಯನ್ನು ಆಯ್ಕೆ ಮಾಡಿರುವುದು ಇವರ ರಾಜಕೀಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಎಂಬುದು ಬಿಜೆಪಿ ‌ವಲಯದ ಮಾತು. ನಿಜಕ್ಕೂ ಈ ಮಾತು ಹೌದು ಕೂಡಾ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರಾಜ್ಯದಲ್ಲಿ ಈ ಹಿಂದೆ ಮೊದಲ ಬಾರಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕರಂದ್ಲಾಜೆ ಮಂತ್ರಿಯಾಗಿದ್ದರು. ಈ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ‌ಪಂಚಾಯತ್ ರಾಜ್ ಹಾಗೂ ಇಂಧನ ಸಚಿವೆ ಸ್ಥಾನ ಪಡೆದು ಸಮರ್ಥವಾಗಿ ಆ ಕೆಲಸಗಳನ್ನು ‌ನಿಭಾಯಿಸಿದ್ದರು. ಇದೇ ವೇಳೆಯಲ್ಲಿ ರಾಜಕೀಯ ಅಸ್ತಿರತೆ‌ ಉಂಟಾಗಿ ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷದಲ್ಲಿ ದುಡಿದು ‌ಮತ್ತೆ ಬಿಜೆಪಿಗೆ ವಾಪಾಸ್ಸಾದರು. ಈ ಸಂದರ್ಭದಲ್ಲಿ ಶೋಭಾ ಹಲವು ಅವಮಾನಗಳನ್ನು ಎದುರಿಸಬೇಕಾಗಿಯೂ ಬಂತು. ಆದರೆ ಅದೆಲ್ಲವನ್ನು ಸಹಿಸಿಕೊಂಡು ಮುಂದೆ 2014ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾದರು. 2019ರಲ್ಲಿ ಪುನಃ ಅದೇ‌ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾದರು.

Ad Widget . Ad Widget . Ad Widget .

ನಂತರ ರಾಜ್ಯದಲ್ಲಿ ಯಡಿಯೂರಪ್ಪರವರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಶೋಭಾ ಸರ್ಕಾರದ ವಿಷಯದಲ್ಲಿ ಮೂಗು ತೂರಿಸುತ್ತಾರೆ ಎಂಬ ಅಪಸ್ವರಗಳು ಕೇಳಿಬಂತು. ಇದೇ ವೇಳೆ ಹೈಕಮಾಂಡ್ ಕೂಡಾ ಇವರಿಗೆ ಸೂಚನೆ ನೀಡಿತ್ತು. ಪಕ್ಷದ ವರಿಷ್ಟರ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿದ ಶೋಭಾ ಕರಂದ್ಲಾಜೆ ಇಂದು ಕೇಂದ್ರ ಮಂತ್ರಿಯಾಗಿದ್ದಾರೆ. ಕಠಿಣ ಪರಿಶ್ರಮ, ಪಕ್ಷನಿಷ್ಠೆ, ಮತ್ತು ಜವಾಬ್ದಾರಿ ನಿರ್ವಹಣೆಗೆ ಸೂಕ್ತ ಫಲ ಸಿಕ್ಕಿದೆ. ಮುಳ್ಳಿನ ಹಾದಿಯಲ್ಲಿ ಸಾಗಿದ ಕರಂದ್ಲಾಜೆ ತಮಗೆ ಸಿಕ್ಕಿದ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ಭರವಸೆ ಮೋದಿಯವರಿಗಿದೆ. ಜೊತೆಗೆ ರಾಜ್ಯದ ರೈತರೂ ಇವರಿಂದ ಹೊಸ ನಿರೀಕ್ಷೆಯಲ್ಲಿದ್ದಾರೆ.

Leave a Comment

Your email address will not be published. Required fields are marked *