Ad Widget .

ಪುತ್ತೂರು: ಬಿನ್ನ ಕೋಮಿನ ಯುವಕರ ನಡುವೆ ಜಗಳ- ತಲವಾರು ದಾಳಿ

ಪುತ್ತೂರು: ಬಿನ್ನ ಕೋಮಿನ ಯುವಕರ ನಡುವೆ ಜಗಳ ನಡೆದು ಬಳಿಕ ಸ್ಥಳೀಯ ಅಂಗಡಿಯಲ್ಲಿದ್ದ ಯುವಕರ ಮೇಲೆ ಇಬ್ಬರು ಯುವಕರು ತಲವಾರಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ಜು.6ರಂದು ಪುತ್ತೂರಿನ ಹೊರವಲಯ ಬನ್ನೂರು ಜೈನರಗುರಿ ಸಮೀಪ ನಡೆದಿದೆ.

Ad Widget . Ad Widget .

ಫಯಾಝ್ ಎಂಬವರು ದೂರು ನೀಡಿದ್ದೂ ಅಭಿಜಿತ್ ಮತ್ತು ಶರತ್ ತಲವಾರು ಪ್ರದರ್ಶಿಸುತ್ತಾ ಬೆದರಿಕೆಯೊಡ್ಡಿದ್ದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ದೂರು ಸ್ವೀಕರಿಸಿರುವ ಪುತ್ತೂರು ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ad Widget . Ad Widget .

ಮೂಲಗಳ ಪ್ರಕಾರ ನಿನ್ನೆ ರಾತ್ರಿ ಒಂದು ಕೋಮಿಗೆ ಸೇರಿದ ಯುವಕರ ಗುಂಪೊAದು ಬನ್ನೂರು ಜೈನರ ಗುರಿ ಸಮೀಪ ಮಾತುಕತೆಯಲ್ಲಿ ನಿರತರಾಗಿದ್ದಾಗ ಇನ್ನೊಂದು ಕೋಮಿನ ಯುವಕರ ತಂಡ ಅಲ್ಲಿಗೆ ಆಗಮಿಸಿದೆ. ಈ ಸಂದರ್ಭ ಎರಡು ತಂಡಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದು ಅದು ಜಗಳದ ಸ್ವರೂಪ ಪಡೆದಿದೆ ಎಂದು ಹೇಳಲಾಗುತ್ತಿದೆ.

ಅದಾದ ಸ್ವಲ್ಪ ಹೊತ್ತಿನ ಬಳಿಕ ಸ್ಥಳೀಯ ಅಂಗಡಿಯೊಂದರಲ್ಲಿದ್ದ ಕೆಲ ಯುವಕರ ಮೇಲೆ ಇನ್ನೊಂದು ಕೋಮಿನ ಯುವಕರಿಬ್ಬರು ತಲವಾರಿನಿಂದ ಹಲ್ಲೆ ನಡೆಸಲು ಯತ್ನಿಸಿ ಪರಾರಿಯಾಗಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು ಬಳಿಕ ಯುವಕರ ಪೈಕಿ ಒಬ್ಬ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *