Ad Widget .

ಪ್ರೇಮಪಾಶದಲ್ಲಿ ಕುರುಡಾದ ಮಗ ತಂದೆಗೆ ತ್ರಿಶೂಲದಿಂದ ತಿವಿದ…!

ಲಕ್ನೋ: ಪ್ರೇಮಪಾಶದಲ್ಲಿ ಬಿದ್ದು ಕೊಲೆಗಾರರಾಗುವ ಅನೇಕ ಪ್ರೇಮಿಗಳಿದ್ದಾರೆ. ಯಾಕೆಂದರೆ ಅವರಿಗೆ ತಮ್ಮ ಪ್ರೀತಿಯನ್ನು ಹೊರತುಪಡಿಸಿ ಮತ್ತೇನೂ ಕಾಣುವುದಿಲ್ಲ. ಇಂತಹುದೇ ಶಾಕಿಂಗ್ ಘಟನೆ ಉತ್ತರ ಪ್ರದೆಶದ ಔರೆಯಾದಲ್ಲಿ ನಡೆದಿದೆ. ಇಲ್ಲೊಬ್ಬ ಮಗ ಇಲ್ಲೊಬ್ಬ ಮಗ ತನ್ನ ಗರ್ಲ್‌ಫ್ರೆಂಡ್‌ ಜೊತೆ ಮಾತನಾಡಲು ಸಾಧ್ಯವಾಗಲಿಲ್ಲವೆಂದು ತಂದೆಯನ್ನು ನಿದ್ದೆ ಮಾಡುವಾಗಲೇ ಕೊಲೆಗೈದಿದ್ದಾನೆ.

Ad Widget . Ad Widget .

ಶಿವಂ ಹೆಸರಿನ ಯುವಕ ಗಾಢ ನಿದ್ರೆಯಲ್ಲಿದ್ದ ತಂದೆಯ ಅರವಿಂದ್ ಹೊಟ್ಟೆಗೆ ತ್ರಿಶೂಲ ಚುಚ್ಚಿ ಕೊಲೆಗೈದಿದ್ದಾನೆ. ಯುವಕನಿಗೆ ಗರ್ಲ್‌ಫ್ರೆಂಡ್‌ ಜೊತೆ ಮಾತನಾಡಲು ತಂದೆ ಅಡ್ಡಿಪಡಿಸುತ್ತಿದ್ದರೆಂಬುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಘಟನೆ ದಿನವೂ ತಂದೆ ಮಗ ಇದೇ ವಿಚಾರಕ್ಕೆ ಜಗಳವಾಡಿದ್ದರೆನ್ನಲಾಗಿದೆ.

Ad Widget . Ad Widget .

ಮೃತ ಚೀರಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದ ಇನ್ನಿತರ ಕುಟುಂಬ ಸಸದಸ್ಯರು ಆತನ ಕೋಣೆಗೆ ತಲುಪಿದಾಗ ಇಡೀ ಕೋಣೆ ರಕ್ತದಿಂದ ತುಂಬಿತ್ತು. ಕೂಡಲೇ ಅಕ್ಕ ಪಕ್ಕದ ಮನೆಯವರನ್ನು ಕರೆದು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದಾರೆ. ರಕ್ತ ಹೆಚ್ಚು ಹರಿದು ಹೋದ ಪರಿಣಾಮ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಆರೋಪಿಯ ಸಹೋದರರು ರಂದೆ ಈ ಮೊದಲು ಹಲವಾರು ಬಾರಿ ಶಿವಂಗೆ ಗರ್ಲ್‌ಫ್ರೆಂಡ್‌ ವಿಚಾರವಾಗಿ ಅರ್ಥೈಸಿದ್ದರು. ಆದರೆ ಆತ ಆಕೆಯನ್ನು ಬಿಟ್ಟಿರಲಿಲ್ಲ. ಸೋಮವಾರ ರಾತ್ರಿ ಶಿವಂ ಹಾಗೂ ತಂದೆ ಇದೇ ವಿಚಾರವಾಗಿ ಜಗಳವಾಡಿದ್ದರು. ಇದಾದ ಬಳಿಕ ತಂದೆ ಮಲಗಲು ಹೋಗಿದ್ದರು. ಆದರೆ ಶಿವಂ ಕೋಪದಲ್ಲಿ ತಂದೆಯನ್ನು ಕೊಲೆಗೈದಿದ್ದಾನೆ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *