ಭಾರತೀಯರ ಡಿಎನ್ಎ ಒಂದೇ ಅಂತ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ಹಿಂದುಸ್ತಾನಿ ಫಸ್ಟ್, ಹಿಂದುಸ್ತಾನ್ ಫಸ್ಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜನ ಪೂಜೆ ಮಾಡುವ ವಿಧಾನದಿಂದ ಅವರನ್ನು ವಿಂಗಡಿಸಲು ಸಾಧ್ಯವಿಲ್ಲ. ಗೋರಕ್ಷಣೆ ನೆಪದಲ್ಲಿ ಹತ್ಯೆ ಮಾಡುವವರು ಹಿಂದುತ್ವಕ್ಕೆ ವಿರುದ್ಧವಾಗಿದ್ದಾರೆ. ಮುಸ್ಲಿಮರು ಭಾರತದಲ್ಲಿ ಇರಬಾರದು ಅಂತ ಹೇಳುವವನು ಹಿಂದೂನೇ ಅಲ್ಲ. ಭಾರತದಲ್ಲಿ ಇಸ್ಲಾಂ ಅಪಾಯದಲ್ಲಿದೆ ಅನ್ನೋ ಭಯದ ಸುಳಿಯಲ್ಲಿ ಸಿಲುಕಬೇಡಿ..ಐಕ್ಯತೆ ಇದ್ರೆ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ. ಆದ್ರೆ ಆ ಐಕ್ಯತೆಯ ಅಡಿಪಾಯ ರಾಷ್ಟ್ರೀಯತೆಯಾಗಿರಬೇಕು ಅಂತ ಹೇಳಿದ್ದಾರೆ. ಮಾತು ಆರಂಭಿಸುವಾಗ ನಾನು ನನ್ನ ಇಮೇಜ್ ಗಳಿಸಿಕೊಳ್ಳಲು ಅಥವಾ ವೋಟ್ ಬ್ಯಾಂಕ್ಗಾಗಿ ಈ ಕಾರ್ಯಕ್ರಮಕ್ಕೆ ಬಂದಿಲ್ಲ ಅಂತ ಕೂಡ ಮೋಹನ್ ಭಾಗವತ್ ಹೇಳಿದ್ರು.
ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಕ್ರಿಮಿನಲ್ಗಳಿಗೆ ಹಸುಗಳು ಮತ್ತು ಎಮ್ಮೆಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲ.. ಆದ್ರೆ ಹೆಸರಿನ ಆಧಾರದ ಮೇಲೆ ಒಂದು ಸಮುದಾಯದವರನ್ನು ಗುರುತಿಸಿ ಹತ್ಯೆ ಮಾಡೋಕೆ ಗೊತ್ತಿದೆ.. ಇಂಥವರಿಗೆ ಹಿಂದುತ್ವದ ಸರ್ಕಾರ ಕೂಡ ಪ್ರೋತ್ಸಾಹ ನೀಡ್ತಿದೆ ಅಂತ ಆರೋಪಿಸಿದ್ದಾರೆ. ಮತ್ತೊಂದ್ಕಡೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕೂಡಾ, ಇಂಥಾ ಪ್ರಕರಣದ ಆರೋಪಿಗಳ ವಿರುದ್ಧ ಈವರೆಗೆ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಅಂತ ಮೋಹನ್ ಭಾಗವತ್ರನ್ನು ಪ್ರಶ್ನಿಸಿದ್ದಾರೆ.