Ad Widget .

ಬಹಿರ್ದೆಸೆಗೆ ಕುಳಿತವನ ಮರ್ಮಾಂಗಕ್ಕೆ ಕಚ್ಚಿದ ಹಾವು…!

ಕ್ಯಾನ್ಬೆರಾ: ಮುಂಜಾನೆ ನಿದ್ದೆಯಿಂದೆದ್ದು ಟಾಯ್ಲೆಟ್ ನಲ್ಲಿ ಬಹಿರ್ದೆಸೆಗೆ ಕುಳಿತವನ ಮರ್ಮಾಂಗಕ್ಕೆ ಹಾವು ಕಚ್ಚಿದ ಘಟನೆ ಆಸ್ಟ್ರೇಲಿಯಾ ದಲ್ಲಿ ನಡೆದಿದೆ.

Ad Widget . Ad Widget .

65 ವರ್ಷದ ವೃದ್ಧರೊಬ್ಬರು ಬೆಳಿಗ್ಗೆ ನಿದ್ದೆಯಿಂದ ಎದ್ದು ಹಾಗೆ ಟಾಯ್ಲೆಟ್ ನಲ್ಲಿ ಹೋಗಿ ಕುಳಿತಿದ್ದಾರೆ. ಸ್ವಲ್ಪ ಸಮಯದಲ್ಲೇ ಅವರ ಮರ್ಮಾಂಗಕ್ಕೆ ಏನೋ ಕಚ್ಚಿದಂತಾಗಿದೆ. ಎದ್ದು ನೋಡಿದಾಗ ಶೌಚಾಲಯದ ಬೇಸಿನ್ ಒಳಗಡೆ ಹಾವು ಕಾಣಿಸಿಕೊಂಡಿದೆ. ಗಾಬರಿಗೊಂಡ ವೃದ್ಧ ಚೀರಿಕೊಂಡು ಹೊರಗೆ ಓಡಿದ್ದಾರೆ.

Ad Widget . Ad Widget .

ಬೊಬ್ಬೆ ಕೇಳಿ ಮನೆಯವರು ಮತ್ತು ಅಕ್ಕಪಕ್ಕದವರು ಓಡೋಡಿ ಬಂದಿದ್ದಾರೆ. ಹಾವನ್ನು ಹಿಡಿದಾಗ ಅದು ಪಕ್ಕದ ಮನೆ ಯುವಕ ಸಾಕಿದ ಹಾವು ಎಂದು ತಿಳಿದಿದೆ. ಸಾಕುವ ಹಾವಾದ ಕಾರಣ ಆತ ಅದರ ವಿಷ ತೆಗೆದಿದ್ದ. ಆದ್ದರಿಂದ ಪ್ರಾಣಪಾಯವೇನು ಸಂಭವಿಸಿಲ್ಲ. ಆದರೆ ಹಾವು ಹೇಗೆ ಶೌಚಾಲಯಯದೊಳಗೆ ನುಗ್ಗಿದೆ ಎನ್ನುವುದರ ಬಗ್ಗೆ ವಿಚಾರಣೆ ನಡೆಯುತ್ತಿದೆ.

Leave a Comment

Your email address will not be published. Required fields are marked *