Ad Widget .

ಲಸಿಕೆ ಹಾಕಿಸಿದ ಬಳಿಕ ಹೋಗಿದ್ದ ದೃಷ್ಟಿ ಮರಳಿ ಬಂತು! ಹೀಗೊಂದು ಪವಾಡವೇ?

ಮುಂಬೈ: ಕರೊನಾ ಲಸಿಕೆ ಪಡೆದ ನಂತರ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ಕಾಣಿಸಿಕೊಂಡಿದೆ ಎಂದಿರುವ ಅನೇಕರನ್ನು ನೀವು ನೋಡಿರುತ್ತೀರಿ. ಆದರೆ ವರ್ಷಗಳ ಹಿಂದೆ ಹೋಗಿದ್ದ ದೃಷ್ಟಿಯೇ ವಾಪಸು ಬಂದಿದೆ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಅಂತದ್ದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Ad Widget . Ad Widget .

ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ನಿವಾಸಿ ಮಥುರಾಬಾಯಿ ಬಿಡ್ವೆ(70)ಗೆ ಒಂಬತ್ತು ವರ್ಷಗಳ ಹಿಂದೆ ಎರಡೂ ಕಣ್ಣುಗಳ ದೃಷ್ಟಿ ಹೋಗಿತ್ತಂತೆ. ಆಕೆ ಜೂನ್ 26ರಂದು ಹತ್ತಿರದ ಕರೊನಾ ಲಸಿಕಾ ಕೇಂದ್ರಕ್ಕೆ ತೆರಳಿ ಕೋವಿಶೀಲ್ಡ್ ಲಸಿಕೆಯ ಮೊದಲನೇ ಡೋಸೇಜ್ ಪಡೆದುಕೊಂಡು ಮನೆಗೆ ಬಂದಿದ್ದಾಳೆ. ಇದಾದ ಮೇಲೆ ಆಕೆಯ ಎರಡೂ ಕಣ್ಣುಗಳು ಶೇ.30-40ರಷ್ಟು ಕಾಣಲಾರಂಭಿಸಿವೆಯಂತೆ.

Ad Widget . Ad Widget .

ಈ ರೀತಿ ಮಹಿಳೆ ಹೇಳಿಕೊಂಡಿದ್ದು, ಪೂರ್ತಿ ದೇಶವೇ ಆಕೆಯನ್ನು ಅಚ್ಚರಿಯಿಂದ ನೋಡುವಂತಾಗಿದೆ. ಆದರೆ ವೈಜ್ಞಾನಿಕವಾಗಿ ಇದನ್ನು ಸ್ಪಷ್ಟಪಡಿಸಲಾಗಿಲ್ಲ.

Leave a Comment

Your email address will not be published. Required fields are marked *