Ad Widget .

‘ನಾ ನಿನ್ನ ಬಿಡಲಾರೆ’ ಅಂತ ಸುತ್ತಿಕೊಳ್ತಿದೆ ಅಕ್ರಮ ಭೂ ಡಿನೋಟಿಫಿಕೇಶನ್ ಪ್ರಕರಣ, ಮತ್ತೆ ತನಿಖೆಗೆ ಆದೇಶಿಸಿದ ಕೋರ್ಟ್, ಸಿಎಂಗೆ ಹಿನ್ನಡೆ

ಬೆಂಗಳೂರು. ಅಕ್ರಮ ಭೂ ಡಿನೋಟಿಫಿಕೇ‍ಷನ್‌ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಹಿನ್ನಡೆಯಾಗಿದ್ದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಿಎಸ್‌ವೈ ವಿರುದ್ಧ ಮರು ತನಿಖೆಗೆ ಆದೇಶಿಸಿದೆ. ಅಕ್ರಮ ಭೂ ಡಿನೋಟಿಫಿಕೇ‍ಷನ್‌ಗೆ ಸಂಬಂಧಿಸಿದಂತೆ ತನಿಖಾ ಅಧಿಕಾರಿ ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲಿನ ಆರೋಪ ಗಂಭೀರ ಸ್ವರೂಪದ್ದಾಗಿದ್ದು ಸಮರ್ಪಕ ತನಿಖೆಯನ್ನು ನಡೆಸದೇ ಕ್ಲೀನ್‌ ಚೀಟ್‌ ನೀಡಿರುವುದು ಸರಿಯಲ್ಲ ಎಂದಿರುವ ನ್ಯಾಯಾಲಯ ಹೆಚ್ಚಿನ ತನಿಖೆಗೆ ಇಂದು ಆದೇಶ ನೀಡಿತು.

Ad Widget . Ad Widget .

ನ್ಯಾಯಮೂರ್ತಿ ಶ್ರೀಧರ್ ಗೋಪಾಲಕೃಷ್ಣ ಭಟ್ ಪ್ರಕರಣದ ತನಿಖೆ ಕುರಿತು ಅಸಮಧಾನ ವ್ಯಕ್ತಪಡಿಸಿ ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿ ಡಿನೋಟಿಫಿಕೇ‍ಷನ್‌ ನಡೆದಿದೆ ಪ್ರಕರಣದ ಮರುತನಿಖೆ ನಡೆಸಬೇಕೆಂದು ಡಿವೈಎಸ್‌ಪಿ ಅವರಿಗೆ ಆದೇಶ ನೀಡಿದರು. ತ್ವರಿತ ತನಿಖೆ ನಡೆಸಿ ಆದಷ್ಟು ಶೀಘ್ರದಲ್ಲಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಾಧೀಶರು ಇದೇ ಸಂದರ್ಭದಲ್ಲಿ ಆದೇಶಿಸಿದರು.

Ad Widget . Ad Widget .

ಈ ಹಿಂದೆ ಕರ್ನಾಟಕ ಹೈಕೋರ್ಟ್ ಬಿಎಸ್‌ವೈ ವಿರುದ್ಧ ಅಕ್ರಮ ಡಿನೋಟಿಫಿಕೇ‍ಷನ್‌ ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಆದೇಶಿಸಿತ್ತು. ತನಿಖಾಧಿಕಾರಿ ಸಲ್ಲಿಸಿರುವ ‘ಬಿ’ ರಿಪೋರ್ಟ್‌ನಲ್ಲಿ ಡಿನೋಟಿಫಿಕೇ‍ಷನ್‌ನಲ್ಲಿ ಯಡಿಯೂರಪ್ಪ ಪಾತ್ರವಿಲ್ಲವೆಂದು ಹೇಳಲಾಗಿದೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ಈ ತನಿಖಾ ವರದಿ 1988 ಭೃಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಸಮರ್ಪಕವಾಗಿಲ್ಲ. ಅಸಮರ್ಪಕ ಮತ್ತು ಸಂಬಂಧವಿಲ್ಲ ಹೇಳಿಕೆಗಳಿಂದ ಕೂಡಿದೆ. ಈ ‘ಬಿ’ ರಿಪೋರ್ಟ್ ಒಪ್ಪಲು ಸಾಧ್ಯವಿಲ್ಲ ಎಂದು ಇಂದು ನ್ಯಾಯಾಲಯವು ಹೇಳಿತು.

2006-07 ರಲ್ಲಿ ಬಿ.ಎಸ್‌.ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದಾಗ ನಡೆದಿದೆ ಎನ್ನಲಾದ ಭೂಗಹರಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು ಕಳೆದ 14 ವರ್ಷಗಳಿಂದ ಪ್ರಕರಣ ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ವರ್ಗಾವಣೆಯಾಗುತ್ತಲೇ ಬರುತ್ತಿದೆ. ಇದೇ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಅಕ್ಟೋಬರ್ 15, 2011 ರಂದು ಬಂಧನಕ್ಕೆ ಕೂಡ ಒಳಗಾಗಿದ್ದರು. ಭೂಹಗರಣದ ಪ್ರಕರಣದಿಂದ ಸದ್ಯ ಯಡಿಯೂರಪ್ಪನವರಿಗೆ ಮುಕ್ತಿ ದೊರೆಯುವಂತೆ ಕಾಣುತ್ತಿಲ್ಲ. ಪ್ರಕರಣಕ್ಕೆ ತಡೆಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಹತ್ತಿಬಂದರೂ ಭೃಷ್ಟಾಚಾರ ಪ್ರಕರಣ ಕಗ್ಗಂಟಾಗಿ ಯಡಿಯೂರಪ್ಪನವರ ಸುತ್ತ ಸುತ್ತಿಕೊಳ್ಳುತ್ತಲೇ ಇದೆ. ಏನೇ ಆದ್ರೂ ನಾ ನಿನ್ನ ಬಿಡಲಾರೆ ಎಂದು ಅಪ್ಪಿಕೊಳ್ಳುತ್ತಿರುವ ಈ ಹಗರಣ ಎಲ್ಲಿವರೆಗೆ ತಲುಪುತ್ತೋ ಕಾದುನೋಡಬೇಕಿದೆ.

Leave a Comment

Your email address will not be published. Required fields are marked *