Ad Widget .

ಸರ್ಕಾರಿ ಕೆಲಸಗಳು ವಿಳಂಬ ಆಗ್ತಿದೆಯಾ? ಮೋದಿಗೆ ಪತ್ರ ಬರೆಯಿರಿ. ಹೇಗೆ ಗೊತ್ತಾ?

ಅನೇಕ ಬಾರಿ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಅಂದರೆ ಸಾರ್ವಜನಿಕರಿಗೆ ಅಲ್ಲಿನ ಸಿಬ್ಬಂದಿಯಿಂದ ಕಿರಿಕಿರಿ ಉಂಟಾಗುವುದು ಇದೆ. ಇಂತಹ ಸಂದರ್ಭಗಳಲ್ಲಿ ಅನೇಕರು ಮೇಲಾಧಿಕಾರಿಗಳಿಗೆ ದೂರನ್ನ ಸಹ ನೀಡುತ್ತಾರೆ.

Ad Widget . Ad Widget .

ಆದರೆ ಈ ದೂರುಗಳನ್ನ ಕೆಲವರು ಗಂಭೀರವಾಗಿ ಪರಿಗಣಿಸೋದೇ ಇಲ್ಲ. ಆದರೆ ಇನ್ಮೇಲೆ ನೀವು ಈ ರೀತಿಯ ಸಮಸ್ಯೆಗಳನ್ನ ಎದುರಿಸಬೇಕಾಗಿ ಬರೋದಿಲ್ಲ. ಏಕೆಂದರೆ ಸಾರ್ವಜನಿಕರು ನೇರವಾಗಿ ದೂರುಗಳನ್ನ ಪ್ರಧಾನಮಂತ್ರಿ ಕಾರ್ಯಾಲಯಕ್ಕೇ ತಲುಪಿಸಬಹುದಾಗಿದೆ.

Ad Widget . Ad Widget .

ನೀವು ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೇ ದೂರನ್ನ ಸಲ್ಲಿಸಬೇಕು ಎಂದುಕೊಂಡಿದ್ದರೆ ಅನಾಯಾಸವಾಗಿ ಈ ಕೆಲಸವನ್ನ ಮಾಡಬಹುದಾಗಿದೆ. ಮನೆಯಲ್ಲಿ ಕುಳಿತುಕೊಂಡೇ ಆನ್​ಲೈನ್​​ ಮಾಧ್ಯಮಗಳ ಸಹಾಯದಿಂದ ನಿಮ್ಮ ದೂರುಗಳನ್ನ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ತಲುಪಿಸಬಹುದಾಗಿದೆ.
ಇದಕ್ಕಾಗಿ ನೀವು ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕೃತ ವೆಬ್​ಸೈಟ್​ https://www.pmindia.gov.in/hi ಗೆ ಲಾಗಿನ್​ ಆಗಿ. ಬಳಿಕ ಡ್ರಾಪ್​ ಡೌನ್​​ ಮೆನುವಿನಲ್ಲಿ ಪ್ರಧಾನಿಯೊಂದಿಗೆ ಮಾತನಾಡಿ ಎಂಬ ಆಯ್ಕೆಯನ್ನ ನೋಡಲಿದ್ದೀರಿ. ಈ ಆಯ್ಕೆಯ ಮೂಲಕ ನೀವು ವೆಬ್​ಸೈಟ್​ನಲ್ಲೇ ದೂರಿನ ಪತ್ರವನ್ನ ಬರೆಯಬಹುದಾಗಿದೆ.

CPGRAMS ಪೇಜ್​ನಲ್ಲಿ ನಿಮ್ಮ ದೂರನ್ನ ಸಲ್ಲಿಸಿದ ಬಳಿಕ ನಿಮಗೆ ಒಂದು ರಿಜಿಸ್ಟ್ರೇಷನ್​ ಸಂಖ್ಯೆ ಸಿಗಲಿದೆ. ಇದಾದ ಬಳಿಕ ನಿಮ್ಮ ಕೆಲ ವೈಯಕ್ತಿಕ ದಾಖಲೆ ಹಾಗೂ ದೂರಿನ ಸಂಬಂಧ ಕೆಲ ದಾಖಲೆಗಳನ್ನ ಸಲ್ಲಿಸಬೇಕು.

ನೀವು ಅಂಚೆ ಮೂಲಕವೂ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ಪ್ರಧಾನ್​ ಮಂತ್ರಿ ಕಾರ್ಯಾಲಯ, ಸೌತ್​ ಬ್ಲಾಕ್​, ನವದೆಹಲಿ – 110011 ವಿಳಾಸಕ್ಕೆ ಪತ್ರ ಬರೆಯಬೇಕು. ಇದನ್ನ ಹೊರತುಪಡಿಸಿ FAX No. 011-23016857 ಮೂಲಕ ಫ್ಯಾಕ್ಸ್​ ಕೂಡ ಮಾಡಬಹುದಾಗಿದೆ.

ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಾಕಷ್ಟು ದೂರುಗಳು ಬರುತ್ತವೆ. ಇದನ್ನ ನಿರ್ವಹಣೆ ಮಾಡಲೆಂದೇ ವಿಶೇಷ ತಂಡ ಕೂಡ ಇದೆ. ಈ ತಂಡವು ನೀವು ನೀಡಿದ ದೂರುಗಳನ್ನು ಪರಿಶೀಲನೆ ನಡೆಸಲಿದೆ.

Leave a Comment

Your email address will not be published. Required fields are marked *