Ad Widget .

ಅಪ್ರಾಪ್ತ ತಂಗಿಯನ್ನೇ ಹರಿದು‌ ಮುಕ್ಕಿದ ಪಾಪಿ‌ ಅಣ್ಣ…! ಗರ್ಭವತಿಯಾದ ಬಾಲಕಿ

ತಿರುಪತಿ​: ಸ್ವಂತ ತಂಗಿಯ ಮೇಲೆ ಅಣ್ಣನೊಬ್ಬ ನಿರಂತರ ಅತ್ಯಾಚಾರವೆಸಗಿ, ಆಕೆಯನ್ನು ಗರ್ಭವತಿಯನ್ನಾಗಿಸಿದ ಘಟನೆ ತಿರುಪತಿ ಅಲಿಪಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Ad Widget . Ad Widget .

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕ ತನ್ನ ತಂಗಿಯನ್ನು ಹೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದನಂತೆ. ಪರಿಣಾಮ ಬಾಲಕಿ ಗರ್ಭವತಿಯಾಗಿದ್ದಾಳೆ. ಇವರ ತಂದೆ 20 ವರ್ಷಗಳ ಹಿಂದೆ ಮದುವೆಯಾಗಿದ್ದ. ಈತನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಈತನ ಮೊದಲನೇ ಹೆಂಡತಿ ಮನೆ ಬಿಟ್ಟು ಹೋಗಿದ್ದು ಎರಡನೇ ಮದುವೆಯಾಗಿದ್ದ. ಎರಡನೇ ಹೆಂಡತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು.ಮೊದಲನೇ ಹೆಂಡತಿಯ ಮಗ ಆಗಾಗ ಅವರ ಮನೆಗೆ ಬರುತ್ತಿದ್ದು ತನ್ನ ತಂಗಿಯ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿಯೂ ಆತ ಬೆದರಿಕೆ ಹಾಕಿದ್ದ.

Ad Widget . Ad Widget .

ಸಂತ್ರಸ್ತೆ ಆಗಾಗ ಹೊಟ್ಟೆನೋವು ಎಂದು ಸಂಕಟ ಪಡುತ್ತಿದ್ದಳು. ಇದನ್ನು ಕಂಡು ತಾಯಿ ವಿಚಾರಿಸಿದಾಗ, ಅಣ್ಣ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾಳೆ. ಬಾಲಕಿಯ ತಾಯಿ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾಳೆ.

Leave a Comment

Your email address will not be published. Required fields are marked *