Ad Widget .

ಮಡಿಕೇರಿ: ಎರಡು ಕಾಡಾನೆಗಳ ಕಳೇಬರ ಪತ್ತೆ, ಹುಲಿ ದಾಳಿಯ ಶಂಕೆ

ಮಡಿಕೇರಿ: ಪ್ರತ್ಯೇಕ ಪ್ರಕರಣಗಳಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಮತ್ತು ವಡ್ಡರಮಾಡು ಎಂಬಲ್ಲಿ ಎರಡು ಕಾಡಾನೆಗಳ ಕಳೇಬರ ಪತ್ತೆಯಾಗಿದೆ.

Ad Widget . Ad Widget .

ಕುಟ್ಟ ಗ್ರಾಮದ ಪೂಜೆಕಲ್ ಎಂಬಲ್ಲಿ ಕಾಕೇರ ಕಾಳಪ್ಪ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ಸುಮಾರು 12 ವರ್ಷದ ಗಂಡು ಕಾಡಾನೆ ಕಳೇಬರ ಭಾನುವಾರ ಮುಂಜಾನೆ ಪತ್ತೆಯಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಶನಿವಾರ ರಾತ್ರಿ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ.

Ad Widget . Ad Widget .

ನಾಗರಹೊಳೆ ಉದ್ಯಾನವನ ವ್ಯಾಪ್ತಿಯ ವಡ್ಡರಮಾಡು ಎಂಬಲ್ಲಿ ಹುಲಿ ದಾಳಿಗೆ 1 ತಿಂಗಳು ಪ್ರಾಯದ ಕಾಡಾನೆ ಮರಿ ಸಾವಿಗೀಡಾಗಿದೆ. ಕೆರೆಯ ಸಮೀಪ ಕಳೇಬರ ಭಾನುವಾರ ಪತ್ತೆಯಾಗಿದ್ದು, ದೇಹದ ಭಾಗದಲ್ಲಿ ಹುಲಿ ಪರಚಿದ ಗಾಯಗಳಿವೆ. 2 ದಿನಗಳ ಹಿಂದೆ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ. ನಾಗರಹೊಳೆ ಎಸಿಎಫ್ ಕಂಬೇಯಂಡ ಗೋಪಾಲ್, ಆರ್‌ಎಫ್‌ಒ ಅಮಿತ್, ಡಿಆರ್‌ಎಫ್‌ಒ ಯೋಗೇಶ್ ಪರಿಶೀಲನೆ ನಡೆಸಿ ಕ್ರಮಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *