Ad Widget .

ಈ ಬ್ಯಾಂಕಲ್ಲಿ ಲೋನ್ ತಗೋಬೇಕಾದ್ರೆ ಬ್ಯಾಂಕ್ ಮ್ಯಾನೇಜರ್ ಗೆ ಲೈಂಗಿಕ ಸುಖ ನೀಡಬೇಕು…!

ವಿಜಯವಾಡ: ಮಹಿಳಾ ಗ್ರಾಹಕರಿಗೆ ಲೋನ್​ ಬೇಕಾದರೆ ಅದಕ್ಕೆ ಪ್ರತಿಯಾಗಿ ಬ್ಯಾಂಕ್​ ಮ್ಯಾನೇಜರ್​ಗೆ ಲೈಂಗಿಕ ಸುಖ ನೀಡಬೇಕಂತೆ. ಈ ರೀತಿ ಕಿರುಕುಳ ಪ್ರಕರಣ ಆಂಧ್ರದ ನೆಲ್ಲೂರು ಜಿಲ್ಲೆಯ ಪೊದಲಕುರ್​ ಎಸ್ ಬಿ ಐ ಶಾಖೆಯಲ್ಲಿ ಬೆಳಕಿಗೆ ಬಂದಿದೆ.

Ad Widget . Ad Widget .

ಆರೋಪಿಯನ್ನು ಎಸ್​ಬಿಐ ಶಾಖೆಯಲ್ಲಿ ಮ್ಯಾನೇಜರ್​ ನಾಗೇಶ್​ ಪೊದಲಕುರ್​ ಎಂದು ಗುರುತಿಸಲಾಗಿದೆ. ಈತ ಕಚೇರಿಯ ಮಹಿಳಾ ಸಹೋದ್ಯೋಗಿಗಳಿಗೆ ಮಾತ್ರವಲ್ಲದೆ, ಮಹಿಳಾ ಗ್ರಾಹಕರ ಮೇಲೂ ತನ್ನ ಕಾಮದೃಷ್ಟಿ ಬೀರಿರುವ ಘಟನೆ ವರದಿಯಾಗಿದೆ.
ಈತನ ವಿರುದ್ಧ ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪವಿದೆ. ಅಲ್ಲದೆ, ಈತನ ಕಿರುಕುಳ ತಾಳದೇ ಕೆಲವು ಉದ್ಯೋಗಿಗಳು ಸ್ವಯಂ ವರ್ಗಾವಣೆ ತೆಗೆದುಕೊಂಡಿದ್ದಾರಂತೆ.

Ad Widget . Ad Widget .

ಸಿಸಿಟಿವಿಯಲ್ಲಿ ಬ್ಯಾಂಕ್​ ಮ್ಯಾನೇಜರ್​ ಚೆಲ್ಲಾಟ ದಾಖಲಾದ ಬಳಿಕ ಆತನ ದುಷ್ಕೃತ್ಯಗಳೆಲ್ಲ ಒಂದೊಂದಾಗಿ ಬಯಲಿಗೆ ಬಂದಿದೆ. ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಮ್ಯಾನೇಜರ್​ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ದಾಖಲಾಗಿದೆ.

ಸದ್ಯ ನಾಗೇಶ್​ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಗೇಶ್​ ಪತ್ತೆಗೆ ಬಲೆ ಬೀಸಿದ್ದಾರೆ.

Leave a Comment

Your email address will not be published. Required fields are marked *