Ad Widget .

ಒಂದೇ ವಾರದಲ್ಲಿ 700ಕ್ಕೂ ಅಧಿಕ ಸಾವು | ನೋಡನೋಡುತ್ತಿದ್ದಂತೆ ಹೊತ್ತಿ ಉರಿಯಿತು ಹಳ್ಳಿ

ಕೆನಡಾ: ಉಷ್ಣಾಂಶ ಏರಿಕೆಯಿಂದ ಕಳೆದೊಂದು ವಾರದಲ್ಲಿ ಏಳು ನೂರಕ್ಕೂ ಅಧಿಕ ಮಂದಿ ಮೃತಪಟ್ಟ ಘಟನೆ ಕೆನಡಾದಲ್ಲಿ ನಡೆದಿದೆ. ಬಿಸಿಗಾಳಿಯ ಪ್ರಭಾವದಿಂದ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು ಕಾಡು-ನಾಡು ಹೊತ್ತಿ ಉರಿಯುತ್ತಿದೆ.

Ad Widget . Ad Widget .

Ad Widget . Ad Widget .

ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಬೆಂಕಿ ಕ್ಷಣಮಾತ್ರದಲ್ಲಿ ಜನವಸತಿ ಪ್ರದೇಶಗಳಲ್ಲಿ ಹಬ್ಬಿಕೊಳ್ಳುತ್ತಿದೆ. ಸಿಡಿಲಿನ ಅಬ್ಬರ ಜಾಸ್ತಿಯಾಗಿದ್ದು ಅದು ಕಾಡ್ಗಿಚ್ಚನ್ನು ಸೃಷ್ಟಿ ಮಾಡುತ್ತಿದೆ. ಕಾಡುಗಿಚ್ಚು ಕಾಡು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿದೆ ಜೊತೆಗೆ ಉಷ್ಣಾಂಶವನ್ನು ಮತ್ತಷ್ಟು ಏರಿಕೆ ಮಾಡುತ್ತಿದೆ. ಇದು ಈ ಪ್ರದೇಶದಲ್ಲಿ ಸರಣಿ ಸಾವನ್ನು ಸೃಷ್ಟಿಸುತ್ತಿದೆ.

ಕಳೆದ ಶುಕ್ರವಾರ ಒಂದೇ ದಿನ, ಕೆನಡಾದ ಅರಣ್ಯ ಪ್ರದೇಶಗಳ ನಾನಾ ಸ್ಥಳಗಳಲ್ಲಿ ಸುಮಾರು 12,000 ಸಿಡಿಲುಗಳು ಬಡಿದು 150 ಸ್ಥಳಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಇದರಿಂದ ಹೊತ್ತಿಕೊಂಡಿರುವ ಬೆಂಕಿಯಿಂದ ಬ್ರಿಟಿಷ್‌, ಕೊಲಂಬಿಯಾ ಹಾಗೂ ಇನ್ನಿತರ ಪ್ರಾಂತ್ಯಗಳಲ್ಲಿ ವಾತಾವರಣ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತೆಂದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಉಷ್ಣಾಂಶ ಏರಿಕೆ ಜನರ ನಿದ್ದೆಗೆಡಿಸಿದ್ದು, ತಮ್ಮ ತಮ್ಮ ಮನೆಗಳ ಯಾವಾಗ ಹೊತ್ತಿ ಉರಿಯುತ್ತದೆ ಎಂದು ಆತಂಕಿತರಾಗಿದ್ದಾರೆ. ಕೆಲವು ಹಳ್ಳಿಯ ಮನೆಗಳಿಗೆ ಒಂದೇ ಸಮನೆ ಬೆಂಕಿ ಆವರಿಸಿಕೊಳ್ಳುತ್ತಿದ್ದ ಜನರು ಎಲ್ಲ ಬಿಟ್ಟು ಮನೆಯಿಂದ ಹೊರಗಡೆ ಓಡಿದ್ದಾರೆ.

Leave a Comment

Your email address will not be published. Required fields are marked *