ಕಾಸರಗೋಡು: ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆ

ಕಾಸರಗೋಡು: ಮೀನುಗಾರಿಕೆಗೆ ತೆರಲಿದ್ದ ದೋಣಿ ಮಗುಚಿ ಮೂವರು ನಾಪತ್ತೆಯಾದ ಘಟನೆ ಕಾಸರಗೋಡು ಸಮುದ್ರದಲ್ಲಿ ಇಂದು ಬೆಳಗ್ಗೆ ನಡೆದಿದ್ದು, ನಾಲ್ವರು ಪಾರಾಗಿದ್ದಾರೆ.

Ad Widget ... ..

ಕಸಬಾ ಕಡಪ್ಪುರದ ಸಂದೀಪ್ (33), ರತೀಶ್ (30) ಮತ್ತು ಕಾರ್ತಿಕ್ (29) ನಾಪತ್ತೆಯಾದವರು. ಇನ್ನೂ ರವಿ (40), ಶಿಬಿನ್ (30), ಮನಿಕುಟ್ಟನ್ (35) ಈಜಿ ದಡಸೇರಿದ್ದಾರೆ. ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

ಸಮುದ್ರದ ಅಲೆಗಳ ರಭಸಕ್ಕೆ ಫೈಬರ್ ದೋಣಿ ಮಗುಚಿ ಬಿದ್ದು ಈ ಅನಾಹುತ ನಡೆದಿದೆ. ದೋಣಿ ಭಾಗಶಃ ಹಾನಿಗೊಂಡಿದೆ.
ನಾಪತ್ತೆಯಾದವರಿಗಾಗಿ ಕರಾವಳಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಮೀನುಗಾರರು ಶೋಧ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *