Ad Widget .

ಅಪ್ಪ-ಮಗನಿಗೆ ಒಬ್ಬಳೇ ಹೆಂಡತಿ…! ಮಾಹಿತಿ ಹಕ್ಕಿನ ವರದಿ ನೋಡಿ ಇಬ್ಬರೂ ಶಾಕ್

ಲಖನೌ: ಮದುವೆಯಾಗಿದ್ದ ಹೆಂಡತಿ ದೂರವಾದ ಮೇಲೆ ಅಕೆಯನ್ನು ಮತ್ತೆ ಎಲ್ಲೇ ನೋಡಿದರೂ ತಮ್ಮ ಹಳೆ ನೆನಪುಗಳು ಕಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವಕನ ಕಥೆ ಕೇಳಿದರೆ ಅಯ್ಯೋ ಪಾಪ ಎನಿಸದಿರದು. ತಾನು ಮದುವೆಯಾಗಿದ್ದ ಹೆಂಡತಿಯೇ ತನ್ನಿಂದ ದೂರಾಗಿ ತನ್ನ ತಂದೆಯನ್ನೇ ವರಿಸಿದ್ದಾಳೆ ಎಂದು ತಿಳಿದು ಯುವಕ ಕಂಗಾಲಾಗಿದ್ದಾನೆ.

Ad Widget . Ad Widget .

ಯುವಕನೊಬ್ಬ 2016ರಲ್ಲಿ ಯುವತಿಯೊಬ್ಬಳನ್ನು ಮದುವೆಯಾಗಿದ್ದನಂತೆ. ಆ ವೇಳೆಗೆ ಇಬ್ಬರೂ ಅಪ್ರಾಪ್ತರಾಗಿದ್ದರಾದರೂ ಅವರು ಆರು ತಿಂಗಳ ಕಾಲ ಸಂಸಾರ ನಡೆಸಿದ್ದರು. ಅದಾದ ಮೇಲೆ ಗಂಡ ಮದ್ಯಪಾನ ಮಾಡುತ್ತಾನೆ ಎನ್ನುವ ಕಾರಣ ಕೊಟ್ಟು ಯುವತಿ ಆತನಿಂದ ದೂರವಾಗಿದ್ದಳು. ಆತ ಅದೆಷ್ಟೇ ಬೇಡಿಕೊಂಡಿದ್ದರೂ ಅವಳು ಸಂಸಾರ ಮುಂದುವರಿಸಲು ಒಪ್ಪಿರಲಿಲ್ಲ.

Ad Widget . Ad Widget .

ಮದುವೆಯ ವಿಚಾರ ಮರೆತು ಆತ ತನ್ನ 48 ವರ್ಷದ ಅಪ್ಪನೊಂದಿಗೇ ಜೀವನ ಮುಂದುವರಿಸಿದ್ದ.
ಆತನ ಖರ್ಚಿಗೂ ಅಪ್ಪನೇ ಹಣ ಕೊಡುತ್ತಿದ್ದನಂತೆ. ಕೆಲ ತಿಂಗಳ ಹಿಂದೆ ಅಪ್ಪ ಮನೆ ಬಿಟ್ಟು ಹೋಗಿದ್ದು, ಮಗನಿಗೆ ಹಣ ಕೊಡುವುದನ್ನೂ ನಿಲ್ಲಿಸಿದ್ದಾನೆ. ಇದರಿಂದಾಗಿ ಬೇಸರಗೊಂಡ ಯುವಕ ಅಪ್ಪನ ಬಗ್ಗೆ ಮಾಹಿತಿ ಕೋರಿ ಆರ್​ಟಿಐ ಅರ್ಜಿ ಸಲ್ಲಿಸಿದ್ದಾನೆ. ಅದರಲ್ಲಿ ಅಪ್ಪ ಎರಡನೇ ಮದುವೆಯಾಗಿರುವುದು ಗೊತ್ತಾಗಿದೆ. ಯುವಕನನ್ನು ಮದುವೆಯಾಗಿ ಕೈ ಕೊಟ್ಟಿದ್ದ ಯುವತಿಯನ್ನೇ ಅಪ್ಪ ಮದುವೆಯಾಗಿರುವುದಾಗಿ ವರದಿಯಲ್ಲಿ ತಿಳಿದುಬಂದಿದೆ.

ಇದನ್ನು ನೋಡಿ ಶಾಕ್ ಆದ ಯುವಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಎರಡೂ ಕಡೆಯವರನ್ನು ಕರೆಸಿ ಪೊಲೀಸರು ಮಾತನಾಡಿದ್ದಾರೆ. ಆದರೆ ನಾನು ಮೊದಲ ಮದುವೆಯಾಗುವಾಗ ಅಪ್ರಾಪ್ತಳಾಗಿದ್ದರಿಂದಾಗಿ ಆ ಮದುವೆ ಅಸಿಂಧು ಆಗಿದ್ದು, ಈಗ ಎರಡನೇ ಗಂಡನೊಂದಿಗೆ ಸಂತೋಷದಿಂದ ಇದ್ದೇನೆ. ಮತ್ತೆ ಮೊದಲನೇ ಗಂಡನ ಬಳಿ ಹೋಗುವ ಮಾತಿಲ್ಲ ಎಂದು ಯುವತಿ ಹೇಳಿದ್ದಾಳೆ.

Leave a Comment

Your email address will not be published. Required fields are marked *