ಛತ್ತಿಸ್’ಗಢ: ಶಿಕ್ಷಕರ ಹುದ್ದೆಗೆ ಎಂಎಸ್ ಧೋನಿ ಎಂಬ ಅಭ್ಯರ್ಥಿ ಹೆಸರಿನ ಅರ್ಜಿ ಸಲ್ಲಿಕೆ ಆದ ಘಟನೆ ಛತ್ತಿಸ್’ಗಢ ರಾಜ್ಯದಲ್ಲಿ ನಡೆದಿದೆ. ಅರ್ಜಿಯಲ್ಲಿ ಎಂಎಸ್ ಧೋನಿ ತಂದೆ ಸಚಿನ್ ತೆಂಡೂಲ್ಕರ್ ಎಂದು ನಮೂದು ಆಗಿರುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ.
ಅಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಒಟ್ಟು 14,850 ಶಿಕ್ಷಕರ ನೇಮಕಾತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ಲಕ್ಷಾಂತರ ಮಂದಿ ಉದ್ಯೋಗಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸುವಾಗ ಎಂಎಸ್ ಧೋನಿ ಎಂಬ ಅಭ್ಯರ್ಥಿಯ ಹೆಸರು ಇರುವ ಅರ್ಜಿ ಪತ್ತೆಯಾಗಿದೆ.
ಮಾಜಿ ಕ್ರಿಕೆಟಿಗ, ಇಂಜಿನಿಯರಿಂಗ್ ಪದವೀಧರರಾಗಿರುವ ಎಂಎಸ್ ಧೋನಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದರೇ ಎಂದು ಆಶ್ಚರ್ಯಚಕಿತರಾದ ಅಧಿಕಾರಿಗಳು ಅರ್ಜಿಯನ್ನು ಮುಂದೆ ಪರಿಶೀಲಿಸಿದ್ದಾರೆ. ಆಗ ಅದರಲ್ಲಿ ಅಭ್ಯರ್ಥಿ ತಂದೆ ಹೆಸರು ಸಚಿನ್ ತೆಂಡೂಲ್ಕರ್ ಎಂದು ನಮೂದಾಗಿರುವ ಕಂಡುಬಂದಿದೆ.
ಇದು ಪತ್ತೆಯಾದ ಬೆನ್ನಲ್ಲೇ ಅಗ್ನಿ ಸಲ್ಲಿಕೆಯಲ್ಲಿ ಗೋಲ್ಮಾಲ್ ನಡೆದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣ ಪೊಲೀಸ್ ದೂರು ದಾಖಲಿಸಿದ ನೇಮಕಾತಿ ಅಧಿಕಾರಿಗಳು ಎಂಎಸ್ ಧೋನಿ ಸೇರಿದಂತೆ 15 ಜನ ಅರ್ಜಿದಾರರನ್ನು ಸಂದರ್ಶನಕ್ಕೆ ಕರೆದಿದ್ದಾರೆ. ಈ ವೇಳೆ ನಕಲಿ ಎಂಎಸ್ ಧೋನಿ ಗೈರುಹಾಜರಾಗಿದ್ದಾನೆ.
ನಕಲಿ ಎಂಎಸ್ ಧೋನಿ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇನ್ನು ಈ ಬೃಹತ್ ಅವ್ಯವಹಾರ ಜಾಲದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದೆ.