ಹೆಣ್ಣು ಎಂದು ನವಜಾತಾ ಶಿಶುವನ್ನು ಕೊಂದು ಕಿಟಕಿಗೆ ತೂಗಿದ ತಾಯಿ

ಚಿಕ್ಕಬಳ್ಳಾಪುರ: ಹೆಣ್ಣು ಎಂದು ಆಗತಾನೆ ಹುಟ್ಟಿದ ನವಜಾತ ಶಿಶುವನ್ನು ಹೆತ್ತಮ್ಮನೇ ನೇಣು ಬಿಗಿದು ಹತ್ಯೆ ಮಾಡಿರುವ ಘಟನೆ ನಡೆದಿದೆ.

Ad Widget ... ..

ಚಿಕ್ಕಬಳ್ಳಾಪುರದ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘನಘೋರ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಗಂಡು ಮಗು ಆಗಬೇಕೆಂಬ ಹುಚ್ಚು ಅಸೆ ಹೊತ್ತಿದ್ದ ಮಹಿಳೆ ಹೆಣ್ಣು ಮಗು ಎಂಬ ಕಾರಣಕ್ಕೆ ಹುಟ್ಟಿದ ಕಂದಮ್ಮನನ್ನೇ ಅಮಾನುಷವಾಗಿ ಕೊಂದಿದ್ದಾಳೆ.

Ad Widget

ಅಮಾಯಕ ಪುಟ್ಟ ಕಂದಮ್ಮನನ್ನು, ತಾನು ಹೆರಿಗೆಯಾದ ಆಸ್ಪತ್ರೆಯ ಶೌಚಾಲಯದ ಕಿಟಕಿಗೆ ನೇಣುಹಾಕಿ ಸಾಯಿಸಿದ್ದಾಳೆ ಈ ದುರುಳ ತಾಯಿ. ಆಸ್ಪತ್ರೆಯ ಶೌಚಾಲಯವನ್ನು ಸ್ವಚ್ಚ ಮಾಡಲೆಂದು ಬಾಗಿಲು ತೆಗೆದ ಸಿಬ್ಬಂದಿಗೆ, ನವಜಾತ ಶಿಶು ಕರುಳಬಳ್ಳಿ ಸಮೇತ ಕಿಟಕಿಯಲ್ಲಿ ನೇತಾಡುತ್ತಿದ್ದ ದೃಶ್ಯ ಕಂಡುಬಂದಿದೆ.

ಬೆಚ್ಚಿಬಿದ್ದ ಸಿಬ್ಬಂದಿ ತಕ್ಷಣ ಆಸ್ಪತ್ರೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *