Ad Widget .

ಸುಳ್ಯದ ನಾಗರಿಕರೇ ಎಚ್ಚರ | ವ್ಯಾಕ್ಸಿನ್ ಸೆಂಟರ್’ನಲ್ಲಿ ರಾಜಕಾರಣಿಗಳದ್ದೇ ದರ್ಬಾರ್ | ಅಳಲು ತೋಡಿಕೊಂಡ ಜನಸಾಮಾನ್ಯರು

ಸುಳ್ಯ: ಸುಳ್ಯದ ಪುರಭವನದ ಕೋವಿಡ್ ಲಸಿಕಾ ಕೇಂದ್ರದಲ್ಲಿ ರಾಜಕಾರಣಿಗಳು ದರ್ಬಾರ್ ನಡೆಸುತ್ತಿದ್ದಾರೆ. ಆಗಾಗ ತಮ್ಮ ಪ್ರಭಾವ ಬಳಸಿ ತಮ್ಮ ಜೊತೆ ಬಂದವರಿಗೆ ಲಸಿಕೆ ಹಾಕಿಸುತ್ತಿದ್ದಾರೆ. ಈ ಬಗ್ಗೆ ಜನಸಾಮಾನ್ಯರು ಅಳಲು ತೋಡಿಕೊಂಡಿದ್ದಾರೆ. ಇಂದು ಶುಕ್ರವಾರ ನಗರದ ಪುರಭನದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದ ನಾಗರಿಕರು ಈ ಬಗ್ಗೆ ಹೇಳಿಕೊಂಡಿದ್ದಾರೆ.

Ad Widget . Ad Widget .

ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ಜನಸಾಮಾನ್ಯ ರೊಂದಿಗೆ ಎಚ್ಚರಿಕೆಯಿಂದ ಇರುವಂತೆ ಆಗಾಗ ಸೂಚಿಸಿದ್ದಾರೆ. ಆದರೆ ಇದರ ನಡುವೆ ಆಗಾಗ ಒಬ್ಬೊಬ್ಬ ರಾಜಕಾರಣಿಗಳು ಇತರರನ್ನು ಕರೆದುಕೊಂಡು ಬಂದು ಬೆಳಗ್ಗಿನಿಂದ ಕಾಯುತ್ತಿರುವ ಜನಸಾಮಾನ್ಯರನ್ನು ಕಡೆಗಣಿಸಿ ವ್ಯಾಕ್ಸಿನ್ ಹಾಕಿಸುತ್ತಿದ್ದಾರೆ.

Ad Widget . Ad Widget .

ಕೆಲವು ಜನಸಾಮಾನ್ಯರು ಇದನ್ನು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ನಮಗ್ಯಾಕೆ ಎಂದು ಕೈಕಟ್ಟಿ ಕೂತು ಕಾದು ಕಾದು ಸುಸ್ತಾಗಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಸೂಚನೆಯಂತೆ ಕೆಲವರು ಅದನ್ನು ಪ್ರಶ್ನಿಸಿದರೆ ಅವರ ಮುಂದೆ ಇಲ್ಲಸಲ್ಲದ ಕಾರಣ ನೀಡಿ ಪ್ರಶ್ನಿಸಿದವರಿಗೆ ಕ್ಯಾರೆ ಮಾಡುತ್ತಿಲ್ಲ. ನಾಗರಿಕರ ಎದುರು ರಾಜಕಾರಣಿಗಳು ಪರಸ್ಪರ ಸ್ವಲ್ಪ ಚರ್ಚೆ ಮಾಡಿದಂತೆ ನಾಟಕವಾಡುತ್ತಿದ್ದಾರೆ. ಏನೇ ಆದರೂ ಬೆಳಗಿನ ಜಾವ ಬಂದು ಕಾದುಕುಳಿತ ಜನಸಾಮಾನ್ಯರು ಗಂಟೆಗಟ್ಟಲೆ ಕಾಯುವಂತಾಗಿದೆ.

ಇನ್ನು ಕೆಲವರು ಕಾದು ಕಾದು ಲಸಿಕೆ ಇಲ್ಲದೆ ಬಂದಹಾಗೆ ಹಿಂತಿರುಗಿದ ಘಟನೆಯೂ ನಡೆದಿದೆ.ಈ ಬಗ್ಗೆ ಪ್ರಶ್ನಿಸುವಂತೆ ಸ್ಥಳದಲ್ಲಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಜನತೆಯನ್ನು ಆಗಾಗ ಎಚ್ಚರಿಸುತ್ತಿದ್ದಾರೆ. ಈ ಘಟನೆ ನಿತ್ಯವೂ ನಡೆಯುತ್ತಿದೆ ಎನ್ನಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕಾಗಿದೆ. ತನ್ನೆದುರೆ ತನಗೆ ಮೋಸ ಆಗುತ್ತಿದ್ದರೂ ಅರಿವಿಗೆ ಬಾರದ ಬಡ ಜನರಿಗೆ ನ್ಯಾಯ ಕೊಡಿಸಬೇಕಿದೆ. ಇನ್ನು ಮುಂದೆ ಲಸಿಕೆಗೆ ಹೋಗುವ ಜನರು ಈ ಬಗ್ಗೆ ಎಚ್ಚರ ವಹಿಸುವುದು ಒಳಿತು.

Leave a Comment

Your email address will not be published. Required fields are marked *