Ad Widget .

ನನ್ನ ಇಮೇಜ್ ಹಾಳು ಮಾಡುವ ಕೆಲಸ ಮಾಡಲಾಗಿದೆ; ವಿಜಯೇಂದ್ರ ವಿರುದ್ಧ ರೊಚ್ಚಿಗೆದ್ದ ಶ್ರೀರಾಮುಲು

Ad Widget . Ad Widget .

ಬೆಂಗಳೂರು: ಶ್ರೀರಾಮುಲು ಆಪ್ತನ ಬಂಧನವಾಗುತ್ತಿದ್ದAತೆ ವಿಜಯೇಂದ್ರ ವಿರುದ್ಧ ರಾಮುಲು ರೊಚ್ಚಿಗೆದ್ದಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

Ad Widget . Ad Widget .

ರಾಜಣ್ಣ ತಪ್ಪು ಮಾಡುತ್ತಿದ್ದಾನೆ ಎಂದರೆ ನನ್ನ ಬಳಿ ಹೇಳಬಹುದಿತ್ತು. ನಾನು ಅವನ ಮೇಲೆ ಕ್ರಮ ಕೈಗೊಳ್ಳುತ್ತಿದ್ದೆ. ಅದು ಬಿಟ್ಟು ವಿಜಯೇಂದ್ರ ಏಕಾಏಕಿ ದೂರು ಕೊಟ್ಟಿರುವುದು ಸರಿಯಲ್ಲ. ಇದರಿಂದ ನನ್ನ ಇಮೇಜ್ ಹಾಳು ಮಾಡುವ ಕೆಲಸ ಮಾಡಲಾಗಿದೆ ಎಂದು ಸಚಿವ ಶ್ರೀರಾಮುಲು ಅಸಮಾಧಾನ ಹೊರಹಾಕಿದ್ದಾರೆ.

ಸಿಎಂ ಅವರ ಈ ನಡೆಯಿಂದ ನನ್ನ ಹೆಸರು ಹಾಳಾಗಿದೆ. ನನ್ನ ಹೆಸರು ಹಾಳು ಮಾಡೊದಕ್ಕೆ ಕಾಯ್ತಾ ಇದ್ದರು. ಈಗಾಗಲೇ ಸಾಕಷ್ಟು ಹೆಸರು ಹಾಳು ಮಾಡಿದ್ದಾರೆ. ರಾಜಣ್ಣ ತಪ್ಪು ಮಾಡುತ್ತಿದ್ದಾನೆ ಅಂದ್ರೆ ನನ್ನ ಬಳಿ ಹೇಳಬಹುದಿತ್ತು. ನಾನು ಅವನ ಮೇಲೆ ಕ್ರಮ ಕೈಗೊಳ್ತಿದ್ದೆ. ಅದು ಬಿಟ್ಟು ವಿಜಯೇಂದ್ರ ಏಕಾಏಕಿ ದೂರು ಕೊಟ್ಟಿರುವ ಬಗ್ಗೆ ರಾಮುಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಆರೋಪದಿಂದಾಗಿ ನನ್ನ ಇಮೇಜ್ ಹಾಳು ಮಾಡುವ ಕೆಲಸ ಮಾಡಲಾಗಿದೆ. ಇದರಲ್ಲಿ ನನ್ನ ತೇಜೋವಧೆಗೆ ಇಳಿದಿದ್ದಾರೆ ಅನಿಸುತ್ತಿದೆ. ನನ್ನ ಆಪ್ತ ನನ್ನ ಆಪ್ತ ಅಂತಾ ಬಹಿರಂಗವಾಗಿ ನನ್ನ ಹೆಸರು ಡ್ಯಾಮೇಜ್ ಆಗುತ್ತಿದೆ. ನಾನು ವಿಜಯೇಂದ್ರ ಮತ್ತು ಸಿಎಂ ಜೊತೆ ನಾನು ಈ ಕುರಿತು ಮಾತನಾಡುತ್ತೇನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಈ ಕುರಿತು ಇನ್ನೇನು ಮಾತನಾಡುವುದಿಲ್ಲ ಎಂದಿದ್ದಾರೆ.

Leave a Comment

Your email address will not be published. Required fields are marked *