Ad Widget .

ಮಾಜಿ ವಿಜ್ಞಾನಿ, ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ ಇನ್ನಿಲ್ಲ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ DRDO ಮಾಜಿ ವಿಜ್ಞಾನಿ, HAL ಹಿರಿಯ ನಿವೃತ್ತ ಇಂಜಿನಿಯರ್ ಹಾಗೂ ಸುಪ್ರಸಿದ್ಧ ವಿಜ್ಞಾನ ಬರಹಗಾರ​ ಸುಧೀಂದ್ರ ಹಾಲ್ದೊಡ್ಡೇರಿ ವಿಧಿವಶರಾಗಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ತೀವ್ರ ಹೃದಯಾಘಾತಕ್ಕೀಡಾಗಿದ್ದ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸುಧೀಂದ್ರ ಹಾಲ್ದೊಡ್ಡೇರಿ ಕನ್ನಡಪ್ರಭ ಸೇರಿದಂತೆ ಅನೇಕ ಪತ್ರಿಕೆಗಳಿಗೆ ವಿಜ್ಞಾನ ಬರಹಗಾರರಾಗಿದ್ದರು.

Ad Widget . Ad Widget .

ಸುಧೀಂದ್ರ ಅವರು ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿರುವುದರಿಂದ ಅವರ ದೇಹದಾನಕ್ಕೆ ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಬೆಂಗಳೂರಿನ ಮೆಡಿಕಲ್ ಕಾಲೇಜಿಗೆ ಅಂಗಾಂಗ ದಾನ ಮಾಡಲಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಚಿಕಿತ್ಸೆಯಲ್ಲಿದ್ದ ಹಾಲ್ದೊಡ್ಡೇರಿ ಸುಧೀಂದ್ರ ಅವರ ಮೆದುಳಿಗೆ ಆಕ್ಸಿಜನ್​ ಸರಬರಾಜು ಆಗುವುದು ನಿಂತಿತ್ತು.
ಹಾಲ್ದೊಡ್ಡೇರಿಯವರಿಗೆ ಅನುಪಮಾ ನಿರಂಜನ ವೈದ್ಯಕೀಯ ವಿಜ್ಞಾನ ಪ್ರಶಸ್ತಿ ಬಂದಿದ್ದು, ಪ್ರಶಸ್ತಿ ಬಂದ ದಿನವೇ ಸುಧೀಂದ್ರ ನಿಧನ ಹೊಂದಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಚಿಕಿತ್ಸೆಯಲ್ಲಿದ್ದ ಹಾಲ್ದೊಡ್ಡೇರಿ ಸುಧೀಂದ್ರ ಅವರ ಮೆದುಳಿಗೆ ಆಕ್ಸಿಜನ್​ ಸರಬರಾಜು ಆಗುವುದು ನಿಂತಿತ್ತು. ಅವರ ಮೆದುಳು ಬಹುತೇಕ ನಿಷ್ಕ್ರಿಯಗೊಂಡಿದ್ದು ಹಾಲ್ದೊಡ್ಡೇರಿ ಸುಧೀಂದ್ರ ಅವರನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ನಡೆಸಲಾಯಿತಾದರೂ ಅವರು ಚೇತರಿಸಿಕೊಂಡಿರಲಿಲ್ಲ. ಎಲ್ಲಾ ಪ್ರಯತ್ನಗಳು ವಿಫಲಗೊಂಡಿದ್ದು ಸುಧೀಂದ್ರ ಅವರು ಬಾರದ ಲೋಕಕ್ಕೆ ತೆರಳಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *