ಶ್ರೀನಗರ: ಮಾವನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ನನ್ನ ಗಂಡ ಮತ್ತು ಗಂಡನ ತಾಯಿ ಒತ್ತಾಯಿಸುತ್ತಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ವಿನಂತಿಸಿಕೊಂಡು ಮಹಿಳೆಯೊಬ್ಬಳು ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಗೆ ಪತ್ರ ಬರೆದಿದ್ದಾರೆ.
ಆಕೆ ಹಿಂದೂ ಯುವತಿ. ಆತ ಮುಸಲ್ಮಾನ್ ಯುವಕ. ಇಬ್ಬರು ಶಾಲಾ ದಿನಗಳಲ್ಲಿ ಸಹಪಾಠಿಗಳು. ಕೊನೆಗೆ ಯುವತಿ ಜಲಂಧರ್ ನ ಆಸ್ಪತ್ರೆಯಲ್ಲಿ ಯುವತಿ ಉದ್ಯೋಗಿಯಾಗಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಅದಲ್ಲದೆ ಇಬ್ಬರು ಉತ್ತರಪ್ರದೇಶದ ಮಸೀದಿಯೊಂದರಲ್ಲಿ ವಿವಾಹವಾಗಿದ್ದಾರೆ.
ಬಹಳ ಸಂತೋಷದಿಂದ ಯುವತಿ ಗಂಡನ ಮನೆಯ ಹೊಸ್ತಿಲು ತುಳಿದಿದ್ದಾಳೆ. ಮದುವೆಯ ಮುಂದೆ ಗಂಡನ ಮನೆಯವರು ಮತಾಂತರಕ್ಕೆ ಒತ್ತಡ ಹೇರಿರಲಿಲ್ಲ. ಇತರೆ ಯಾವುದೇ ಷರತ್ತು ಕೂಡ ಹಾಕಿರಲಿಲ್ಲ. ಆದರೆ ಗಂಡನ ಮನೆ ಹೊಕ್ಕಿದ್ದೆ ತಡ, ಕಾದಿತ್ತು ನೋಡಿ ಯುವತಿಗೆ ಶಾಕ್. ಅದಾಗಲೇ ಗಂಡನ ಮನೆಯವರ ಅಸಲಿಯತ್ತು ಯುವತಿಯ ಗಮನಕ್ಕೆ ಬಂದಿದೆ.
ಮೊದಲಿಗೆ ಈಕೆಯ ಹೆಸರನ್ನು ಬದಲಾಯಿಸಿದ್ದಾರೆ. ಒಂದೊಂದೇ ಕಿರುಕುಳ ಆರಂಭಿಸಿದ್ದಾರೆ. ಆತ ಮೊದಲೇ ಬೇರೊಂದು ವಿವಾಹವಾಗಿರುವ ಸುದ್ದಿ ಇವಳಿಗೆ ತಿಳಿದಿದೆ.
ದಿನ ಕಳೆಯುತ್ತಿದ್ದಂತೆ, ಕ್ಯಾನ್ಸರ್ ಇರುವ ಕಾರಣ ನನಗೆ ಮಾವನೊಂದಿಗೆ ಸೇರಲಾಗುತ್ತಿಲ್ಲ. ನೀನು ಅವರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೋಡಗಿಕೊಳ್ಳುವಂತೆ ಆಕೆಯ ಅತ್ತೆ ಹೇಳಿದ್ದಾಳೆ. ವಿಷಯ ಗಂಡನ ಬಳಿ ತಿಳಿಸಿದರೂ ಆತ ಅದನ್ನೇ ಬೆಂಬಲಿಸಿದ್ದಾನೆ. ಯುವತಿ ವಿರೋಧ ವ್ಯಕ್ತಪಡಿಸಿದಾಗ ದೈಹಿಕ ಹಿಂಸೆ ನೀಡಿದ್ದಾರೆ.
ಯುವತಿ ಇದಕ್ಕೆಲ್ಲ ಒಪ್ಪದಿದ್ದಾಗ ಆಸ್ತಿ, ಹಣ ಕೊಡುವ ಆಮಿಷವೊಡ್ಡಿದ್ದಾರೆ. ಯುವತಿ ಗಂಡನ ಮನೆಯವರ ಆಮಿಷಕ್ಕೆ ಬಲಿಯಾಗದೇ ಪ್ರತಿಭಟಿಸಿದಾಗ ವೇಶ್ಯಾವಾಟಿಕೆಗೆ ತಳ್ಳಲು ಮುಂದಾಗಿದ್ದಾರೆ ಎಂದು ಪತ್ರದಲ್ಲಿ ಯುವತಿ ತನ್ನ ಅಳಲು ತೋಡಿಕೊಂಡಿದ್ದಾಳೆ.