Ad Widget .

ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋಲ್ಡನ್ ಸ್ಟಾರ್ | ವಿಶೇಷದಿನದಂದೆ ‘ಸಖತ್’ ಪೋಸ್ಟರ್ ಬಿಡುಗಡೆ

ಬೆಂಗಳೂರು: ಇಂದು ಸ್ಯಾಂಡಲ್’ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ಇಂದು ಅವರು 42ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.

Ad Widget . Ad Widget .

ಪ್ರತಿವರ್ಷ ಕುಟುಂಬದವರು, ಸ್ನೇಹಿತರು ಹಾಗೂ ಅಭಿಮಾನಿಗಳೊಟ್ಟಿಗೆ ಬಹಳ ಸಡಗರದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳತ್ತಿದ್ದ ಗಣೇಶ್‌ರವರು ಈ ವರ್ಷ ಕೊರೊನಾ ಹಿನ್ನೆಲೆ ಈ ಬಾರಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

Ad Widget . Ad Widget .

ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಈ ಬಾರಿ ತಮ್ಮ ಬರ್ತ್ಡೇಗೆ ವ್ಯರ್ಥ ಮಾಡುವ ಹಣವನ್ನು ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಇನ್ನೂ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಗಣೇಶ್ ಫೋಟೋವನ್ನು ಹಂಚಿಕೊಳ್ಳುವುದರ ಮೂಲಕ ವಿಶ್ ಮಾಡುತ್ತಿದ್ದಾರೆ. ಜೊತೆಗೆ ಸೆಲೆಬ್ರೆಟಿಗಳು ಕೂಡ ಗಣೇಶ್‌ರವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ.

ಈ ವಿಶೇಷದಿನದಂದು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ‘ಸಖತ್’ ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ. ಪೋಸ್ಟರ್‌ನಲ್ಲಿ ಕೋರ್ಟ್ ಕಟಕಟೆಯಲ್ಲಿ ಕನ್ನಡಕ ಹಾಕಿಕೊಂಡು ಅಂದನಂತೆ ಗೋಲ್ಡನ್ ಸ್ಟಾರ್ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾಕ್ಕೆ ನಿರ್ದೇಶಕ ಸಿಂಪಲ್ ಸುನಿ ಆ್ಯಕ್ಷನ್ ಕಟ್ ಹೇಳಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಅಲ್ಲದೇ ಸಿನಿಮಾ ರೈತರು ಕಾದ ಮಳೆ… ಹೊನ್ನಿನ ನಕ್ಷತ್ರದ ಬೆಳೆ… ಚೆಲುವಿನ ಹೂ ನ ಪಕಳೆ… ಕರ್ನಾಟಕದ ಮಾತಿನ ಕಹಳೆ. ಗಣೇಶ್‌ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ಸಖತ್ತಾಗಿರಲಿ ನಿಮ್ಮ ಜೀವನ ಎಂದು ಸಿಂಪಲ್ ಸುನಿ ಟ್ವಿಟ್ಟರ್‌ನಲ್ಲಿ ವಿಶ್ ಮಾಡಿದ್ದಾರೆ.

Leave a Comment

Your email address will not be published. Required fields are marked *