Ad Widget .

ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದ ಆ 2 ಸೆಕೆಂಡುಗಳ ನಿಗೂಢ ಶಬ್ಧ | ಅಲುಗಾಡಿದ ಕಿಟಕಿ, ಬಾಗಿಲು |ಚೆಲ್ಲಾಪಿಲ್ಲಿಯಾದ ಪಕ್ಷಿಗಳು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 12:30ರ ಆಸುಪಾಸಿನಲ್ಲಿ ಸ್ಪೋಟದ ಸದ್ದು ಕೇಳಿಬಂದಿದೆ. ಬೆಂಗಳೂರಿನ ಜನರನ್ನು ಬೆಚ್ಚಿ ಬೀಳಿಸಿದ ಆ 2 ಸೆಕೆಂಡುಗಳ ನಿಗೂಢ ಶಬ್ಧದಿಂದ ಕಿಟಕಿ, ಬಾಗಿಲು ಅಲುಗಾಡಿದ ಅನುಭವ ಜನರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳಲಾರಂಭಿಸಿದ್ದು, ಅನೇಕ ಮಂದಿ ತಮಗೂ ಅನುಭವ ಆಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

Ad Widget . Ad Widget .

ಬಿಡದಿ, ಬನಶಂಕರಿ, ಆರ್ ಆರ್ ನಗರ, ನಾಗರಬಾವಿ, ಚಂದ್ರಾ ಲೇಔಟ್, ಮಾಗಡಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಕೆಲವೆಡೆ ಸದ್ದು ಕೇಳಿಸಿದ ಅನುಭವ ಆಗಿದ್ದು, ಎರಡು ಸೆಕೆಂಡುಗಳ ಕಾಲ ಕಿಟಕಿ, ಬಾಗಿಲು ಅಲುಗಾಡಿದ ಅನುಭವವೂ ಆಗಿದೆ. ಕೆಲವರು ಹೇಳುವ ಪ್ರಕಾರ 12:23ರ ಸುಮಾರಿಗೆ ಸ್ಪೋಟದ ಸದ್ದು ಕೇಳಿದೆ.

Ad Widget . Ad Widget .

ಬಂಡೆ ಒಡೆದಾಗ ಬರುವ ಸದ್ದಿನಂತೆ ಕೇಳಿಸಿದ್ದು, ಪಾರಿವಾಳ ಹಾಗೂ ಇನ್ನಿತರ ಪಕ್ಷಿಗಳು ಚೆಲ್ಲಾಪಿಲ್ಲಿಯಾಗಿ ಹಾರಿರುವುದು ಅನುಮಾನಕ್ಕೆ ಕಾರಣವಾಗಿದೆ.

ಆದರೆ, ಇಲ್ಲಿಯ ತನಕ ಶಬ್ದಕ್ಕೆ ನಿಖರ ಕಾರಣವೇನು? ಮೇಘಸ್ಪೋಟವೇ, ಭೂಕಂಪವೇ ಅಥವಾ ಇನ್ನೇನಾದರೂ ಅವಘಡ ಸಂಭವಿಸಿತೇ ಎನ್ನುವುದು ತಿಳಿದುಬಂದಿಲ್ಲ. ಈ ಬಗ್ಗೆ ಯಾವುದೇ ಅಧಿಕಾರಿಗಳು, ತಜ್ಞರು ಇನ್ನೂ ಮಾಹಿತಿ ನೀಡಿಲ್ಲ. ಕಳೆದ ಬಾರಿಯೂ ನಗರದಲ್ಲಿ ಇಂಥದ್ದೇ ಸದ್ದು ಕೇಳಿಬಂದು ಜನರಿಗೆ ಆತಂಕ ಮೂಡಿತ್ತು. ನಂತರ ಅದು ಸೋನಿಕ್ ಸೌಂಡ್ ಎಂಬಲ್ಲಿಂದ ಹಿಡಿದು ಅನೇಕ ಲೆಕ್ಕಾಚಾರಗಳೂ ಕೇಳಿಬಂದಿದ್ದವು.

ಇಂದು ಕೇಳಿಸಿರುವ ಈ ಸದ್ದಿನ ಬಗ್ಗೆ ಜನರು ಭಯಭೀತರಾಗಿದ್ದು, ಪ್ರಕೃತಿಯಲ್ಲಿ ಏನಾದರೂ ಬದಲಾವಣೆ ಸಂಭವಿಸಿರಬಹುದೇ? ಭೂಮಿಯೊಳಗಿಂದ ಈ ಶಬ್ಧ ಕೇಳಿಸಿರಬಹುದೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವರಿಗೆ ಭೂಕಂಪನದ ಅನುಭವ ಆಗಿದೆಯಾದರೂ ಭೂಕಂಪನ ಮಾಪಕದಲ್ಲಿ ಅದು ದಾಖಲಾಗಿಲ್ಲ. ಹೀಗಾಗಿ ಈ ನಿಗೂಢ ಸದ್ದು ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದ್ದು, ನಿಖರ ಕಾರಣವೇನು ಎಂದು ತಜ್ಞರು ವಿಶ್ಲೇಷಿಸಲಿ ಎಂದು ಕಾಯುತ್ತಿದ್ದಾರೆ.

Leave a Comment

Your email address will not be published. Required fields are marked *