Ad Widget .

UAPA ಕಾಯ್ದೆಯಡಿ ಬಂಧಿಯಾಗಿದ್ದಾತ 12 ವರ್ಷಗಳ ಬಳಿಕ ನಿರಪರಾಧಿ ಎಂದು ಸಾಬೀತು | ಗೂಡು ಸೇರಿದ ಜೈಲು ಹಕ್ಕಿ

ಶ್ರೀನಗರ; ಭಯೋತ್ಪಾದನೆಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ UAPA ಕಾಯ್ದೆಯ ಅಡಿಯಲ್ಲಿ ಪೊಲೀಸರು ಯಾರನ್ನೂ ಪ್ರಶ್ನೆ ಮಾಡದೆ ಪೊಲೀಸರು ಆರೋಪಿಯನ್ನು ತನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುವ ಹಕ್ಕನ್ನು ಹೊಂದಿರುತ್ತಾರೆ. ಹೀಗೆ ಭಯೋತ್ಪಾದನೆ ಪ್ರಕರಣದ ಆರೋಪ ಹೊತ್ತು ಗುಜರಾತ್​ನ ಜೈಲಿನಲ್ಲಿದ್ದ ಕಾಶ್ಮೀರ ಮೂಲದ ಬಶೀರ್ ಅಹ್ಮದ್ ಬಾಬಾ (44) ಅವರು ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, 12 ವರ್ಷಗಳ ಬಳಿಕ ಈಗ ಗುಜರಾತ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

Ad Widget . Ad Widget .

ಅವರ ವಿರುದ್ದ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಆ ಎಲ್ಲಾ ಆರೋಪಗಳಲ್ಲಿ ಅವರು ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ ಬಳಿಕ ಅವರು ತಮ್ಮ ಮನೆಗೆ ಮರಳಿದ್ದಾರೆ.ಆದರೆ, ಅವರು ಜೈಲಿನಲ್ಲಿದ್ದಾಗ, ಅವರ ಚಿಕ್ಕಪ್ಪ ಮತ್ತು ಅವರ ತಂದೆ ಗುಲಾಮ್ ನಬಿ ಬಾಬಾ ಸೇರಿದಂತೆ ಅವರ ಕುಟುಂಬದ ಅನೇಕ ಸದಸ್ಯರು ಸಾವನ್ನಪ್ಪಿದರು.

Ad Widget . Ad Widget .

ಗುತ್ತಿಗೆದಾರ ರಾಗಿದ್ದ ಅವರ ತಂದೆ ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು, ಅವರು 2017 ರಲ್ಲಿ ನಿಧನರಾದರು. ಈ ಬಗ್ಗೆ ಹಲವಾರು ದಿನಗಳು ಕಳೆದರೂ ಬಶೀರ್‌ ಅವರಿಗೆ ಮಾಹಿತಿ ಇರಲಿಲ್ಲ. ಬಶೀರ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಸಂದರ್ಭ ದಲ್ಲಿ ಅವರ ತಂದೆ ಸಾವನ್ನಪ್ಪಿದ್ದರ ಮಾಹಿತಿ ತಿಳಿಯಿತು ಎಂದು ಅವರು ಹೇಳಿದ್ದಾರೆ.

ಬಶೀರ್ ಅವರು ಶ್ರೀನಗರದ ರೈನವರಿ ಪ್ರದೇಶದ ತಮ್ಮ ನಿವಾಸದ ಹತ್ತಿರ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದರು. ಅವರು ಎನ್‌ಜಿಓ ಒಂದರಲ್ಲಿ ಸಹಾಯಕ ಪ್ರಾಜೆಕ್ಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು, ಅವರ ಭಾಗವಾಗಿ ಹಲವಾರು ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು.

ಫೆಬ್ರವರಿ 2010 ರಲ್ಲಿ ಅವರು ಗುಜರಾತ್‌ನಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಲು ಕಾಶ್ಮೀರದಿಂದ ಬಂದಿದ್ದರು. ಆದರೆ, ಅವರು ಹಿಂದಿರುಗುವ ಒಂದು ದಿನ ಮೊದಲು ಅವರನ್ನು ಗುಜರಾತ್‌ನ ಆನಂದ್ ಜಿಲ್ಲೆಯ ಸಮರ್ಖಾ ಗ್ರಾಮದ ಬಳಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿತು. ಅಲ್ಲದೆ, ಬಶೀರ್‌ ಅವರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಭಾಗವಾಗಿದ್ದಾರೆ. “ಭಯೋತ್ಪಾದಕ ತರಬೇತಿ”ಗಾಗಿ ಯುವಕರ ಜಾಲವನ್ನು ಸ್ಥಾಪಿಸಲು ಬಶೀರ್‌ ಯೋಜಿಸುತ್ತಿದ್ದಾರೆ ಎಂದು ಎಟಿಎಸ್ ಆರೋಪಿಸಿ, ಪ್ರಕರಣ ದಾಖಲಿಸಿತ್ತು.

ಬಂಧನಕ್ಕೆ ಮುಂಚಿತವಾಗಿ, ಬಶೀರ್ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಡಿಪ್ಲೊಮಾ ಪಡೆದಿದ್ದರು. ಆದರೆ ಅವರು ರಾಜಕೀಯ ವಿಜ್ಞಾನ, ಸಾರ್ವಜನಿಕ ಆಡಳಿತ ಮತ್ತು ಬೌದ್ಧಿಕ ಆಸ್ತಿ ಕಾಯ್ದೆಯಲ್ಲಿ ಮೂರು ಸ್ನಾತಕೋತ್ತರ ಪದವಿಗಳನ್ನೂ ಪಡೆದಕೊಂಡಿದ್ದರು.

Leave a Comment

Your email address will not be published. Required fields are marked *