ಹೆಂಡತಿ ಮೇಲೆ ಕೋಪಕ್ಕೆ ಮಕ್ಕಳಿಗೆ ವಿಷ ಕೊಟ್ಟ ತಂದೆ

ಮುಂಬೈ: ಹೆಂಡತಿ ಮೇಲೆ ಕೋಪಕ್ಕೆ ತಂದೆಯೊಬ್ಬ ಮಕ್ಕಳಿಗೆ ಐಸ್‌ಕ್ರೀಮ್‌ನಲ್ಲಿ ವಿಷ ಬೆರೆಸಿ ಕೊಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದ್ದು ಓರ್ವ ಸಾವನಪ್ಪಿ, ಇನ್ನಿಬ್ಬರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

Ad Widget ... ..

ಮುಹಮ್ಮದ್ ಅಲಿ ನೌಶಾದ್ ವಿಷ ಬೆರಸಿಕೊಟ್ಟ ಆರೋಪಿ. ಅಲಿಷನ್ ಅಲಿ(5) ಸಾವನ್ನಪ್ಪಿದ ಮಗು. ಅಲಿನ(7), ಅರ್ಮಾನ್(2) ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಮಕ್ಕಳು. ಇವರಿಬ್ಬರ ಸ್ಥಿತಿ ಗಂಭೀರ ವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂವರು ಮಕ್ಕಳಿಗೆ ತಂದೆ ಐಸ್‌ಕ್ರೀಮ್‌ನಲ್ಲಿ ವಿಷಬೆರೆಸಿ ಕೊಟ್ಟಿದ್ದಾನೆ.

Ad Widget

ಮನ್‌ಖುರ್ದ್ ಪ್ರಾಂತ್ಯದ ನಿವಾಸಿ ಮೊಹಮ್ಮದ್ ಅಲಿ ನೌಶಾದ್ ಜೂನ್ 25 ರಂದು ತನ್ನ ಪತ್ನಿಯ ಜೊತೆಗೆ ಜಗಳವಾಡಿದ್ದಾನೆ. ಪತ್ನಿಯ ಮೇಲೆ ಇರುವ ಸಿಟ್ಟನ್ನು ಮಕ್ಕಳಿಗೆ ವಿಷ ಹಾಕುವ ಮೂಲಕವಾಗಿ ತಿರಿಸಿಕೊಂಡಿದ್ದಾನೆ. ನಂತರ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳಿಗೆ ಐಸ್‌ಕ್ರೀಮ್‌ನಲ್ಲಿ ಇಲಿ ಪಾಷಾಣವನ್ನು ಬೇರೆಸಿ ಕೊಟ್ಟಿದ್ದಾನೆ. ಅದರೆ ಮಕ್ಕಳು ತಂದೆ ಇಷ್ಟೋಂದು ಕ್ರೂರಿ ಎಂದು ಊಹಿಸಿರಲಿಲ್ಲ. ಪ್ರೀತಿಯಿಂದ ತಂದೆ ಕೊಟ್ಟಿದ್ದಾರೆ ಎಂದು ತಿಂದು ಬಿಟ್ಟಿದ್ದಾರೆ. ನಂತರ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಆಘಾತಕಾರಿ ಕೃತ್ಯದ ಬಗ್ಗೆ ಆರೋಪಿಯ ಹೆಂಡತಿ ದೂರು ನೀಡಿದ್ದೂ, ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *