ಮಂಗಳೂರು: ನಿಯಮ ಉಲ್ಲಂಘಿಸಿ ಹುಕ್ಕಾ ಕೆಫೆಯನ್ನು ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ ನಗರದ ವೆಲೆನ್ಸಿಯಾದಲ್ಲಿ ಘಟನೆ ನಡೆದಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಒಳಗೆ ಕುಳಿತು ಪಾರ್ಟಿ ಮಾಡುವಂತಿಲ್ಲ. ಅಲ್ಲದೆ ಕೋಲ್ಡ್ ಡ್ರಿಂಕ್ಸ್ ಆಗಲೀ, ಹುಕ್ಕಾವನ್ನಾಗಲೀ ಸರ್ವ್ ಮಾಡುವಂತಿಲ್ಲ. ಹುಕ್ಕಾ ಕೆಫೆಯಲ್ಲಿ ಗ್ರಾಹಕರು ಕುಳಿತು ಹುಕ್ಕಾ ಸೇವಿಸುತ್ತಿದ್ದರು. ಕೋಲ್ಡ್ ಡ್ರಿಂಕ್ಸ್ ಇನ್ನಿತರ ಸ್ನಾಕ್ಸ್ ಸೇವನೆ ಮಾಡುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದು ಪಾಂಡೇಶ್ವರ ಪೊಲೀಸರು ದಾಳಿ ನಡೆಸಿದ್ದು ೧೭ ಮಂದಿಯ ವಿರುದ್ಧ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಬಗ್ಗೆ ಕೇಸು ದಾಖಲಿಸಿದ್ದಾರೆ.ಹುಕ್ಕಾ ಕೆಫೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
