Ad Widget .

ದೇವಿಗೆ ಕಣ್ಣು ಬಿಡಿಸಿ ಭಕ್ತರ ಕಣ್ಣಿಗೆ ಮಣ್ಣೆರಚಿದ ಪೂಜಾರಿಯ ಚಳಿ ಬಿಡಿಸಿದ ತಹಶೀಲ್ದಾರ್

ಬೆಳಗಾವಿ: ಕಳೆದ ಕೆಲವು ದಿನಗಳ ಹಿಂದೆ ದೇವಸ್ಥಾನವೊಂದರಲ್ಲಿ ದೇವಿ ಕಣ್ಣು ಬಿಟ್ಟಿದ್ದಾಳೆ. ಇನ್ನು ಕೆಲವೇ ಸಮಯದಲ್ಲಿ ಕೋರೋನಾ ಮಹಾಮಾರಿ ಓಡಿಸಲಿದ್ದಾಳೆ. ಹೀಗೆ ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿ ರಾಜ್ಯದ ಜನರಲ್ಲಿ ಅಚ್ಚರಿ ಮೂಡಿಸಿತ್ತು. ಇದೀಗ ದೇವಿಯ ವಿಗ್ರಹದಲ್ಲಿ ಕಣ್ಣನ್ನು ಸ್ವತಹ ಪೂಜಾರಿಯೇ ಬಿಡಿಸಿದ್ದಾರೆ ಎಂಬ ರಹಸ್ಯ ಬಯಲಾಗಿದೆ.

Ad Widget . Ad Widget .

ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ದೇವಾಲಯದಲ್ಲಿ ದೇವಿ ಕಣ್ಣು ಬಿಟ್ಟಿದ್ದಾಳೆ ಎಂಬ ಸುದ್ದಿ ತಿಳಿದು ಜನ ತಂಡೋಪತಂಡವಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಈ ವಿಷಯ ಕಾಗವಾಡ ತಹಸಿಲ್ದಾರ್ ಪ್ರಮೀಳಾ ದೇಶಪಾಂಡೆ ಗಮನಕ್ಕೆ ಬಂದಿದೆ. ಏನಿದು ಬಹು ಅಚ್ಚರಿಯ ವಿಷಯ ಎಂದು ಸ್ವತಹ ತಾವೇ ಕಂದಾಯ ಇಲಾಖೆ ಸಿಬ್ಬಂದಿಗಳೊಂದಿಗೆ ತೆರಳಿ ವಿಗ್ರಹ ಪರಿಶೀಲಿಸಿದ್ದಾರೆ.

Ad Widget . Ad Widget .

ಈ ವೇಳೆ ದೇವಿ ನಿಜವಾಗಿಯೂ ಕಣ್ಣು ಬಿಟ್ಟಿಲ್ಲ. ದೇವಾಲಯದ ಅರ್ಚಕ ಮತ್ತು ಇತರರು ಸೇರಿ ದೇವಿಗೆ ಕಣ್ಣು ಆಂಟಿಸಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಕೂಡಲೇ ಪೂಜಾರಿಯನ್ನು ತರಾಟೆಗೆ ತೆಗೆದುಕೊಂಡ ತಹಶೀಲ್ದಾರ್ ಅವರ ಕೈಯಿಂದಲೇ ಕಣ್ಣನ್ನು ತೆಗೆಸಿದ್ದಾರೆ. ಇನ್ನು ಮುಂದೆ ಈ ರೀತಿ ನಡೆದುಕೊಂಡರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *