ದನ ಕಟ್ಟುವ ವಿಚಾರದಲ್ಲಿ ತಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ | ಗಂಭೀರ ಗಾಯಗೊಂಡಿದ್ದ ಮಗ ಸಾವು

ಮಂಗಳೂರು: ದನ ಕಟ್ಟುವ ವಿಚಾರದಲ್ಲಿ ತಂದೆ-ಮಗನ ನಡುವೆ ಜಗಳ ನಡೆದು ತಂದೆಯಿಂದ ಬೆಂಕಿ ದಾಳಿಗೊಳಗಾಗಿದ್ದ ಮಗ ಇಂದು ಮೃತಪಟ್ಟಿದ್ದಾರೆ.

Ad Widget ... ..

ಕಳೆದ ಕೆಲವು ದಿನಗಳ ಹಿಂದೆ ತಾಲೂಕಿನ ಜಪ್ಪಿನಮೊಗರು ತಾರ್ದೋಲ್ಯ ಎಂಬಲ್ಲಿ ದನ ಮತ್ತು ಕೋಳಿಗಳನ್ನು ಹೊರಗಡೆ ಕಟ್ಟಿಹಾಕಿದ ವಿಚಾರದಲ್ಲಿ ತಂದೆ ಮತ್ತು ಮಗನ ನಡುವೆ ಜಗಳ ನಡೆದಿತ್ತು. ಕೊನೆಗೆ ಕುಪಿತಗೊಂಡ ತಂದೆ ವಿಶ್ವನಾಥ ಶೆಟ್ಟಿ, ಮಗ ಸಾನ್ವಿತ್ ಶೆಟ್ಟಿ ಮಲಗಿದ್ದಲ್ಲಿ ಗೆ ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಪರಿಣಾಮ ಗಂಭೀರ ಗಾಯಗೊಂಡ ಮಗನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸುಟ್ಟಗಾಯಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾನ್ವಿತ್ ಶೆಟ್ಟಿ(25) ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

Ad Widget

ಘಟನೆ ನಡೆದ ದಿನವೇ ಪೊಲೀಸರು ಆರೋಪಿ ತಂದೆ ವಿಶ್ವನಾಥ ಶೆಟ್ಟಿಯನ್ನು ಬಂಧಿಸಿದ್ದರು.

Leave a Comment

Your email address will not be published. Required fields are marked *