June 2021

ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಕೋವಿಡ್ ಕಾರಣದಿಂದ ಈ ಬಾರಿ ವಿಶೇಷವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಬಾರಿ ಎರಡು ದಿನ ಪರೀಕ್ಷೆ ನಡೆಯಲಿದೆ. ಜು.19ರಂದು ಕೋರ್ ವಿಷಯಗಳ ಪರೀಕ್ಷೆ (ಸಮಾಜ ವಿಜ್ಞಾನ, ಗಣಿತ, ವಿಜ್ಞಾನ) ಜು. 22ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು. ಕರ್ನಾಟಕದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ತೀರ್ಮಾನಿಸಿರುವ ಶಿಕ್ಷಣ ಇಲಾಖೆ ಇಂದು ಮಹತ್ವದ ಸಭೆ ನಡೆಸಿ ನಿರ್ಧಾರ ಕೈಗೊಂಡಿದೆ. ಜುಲೈ ತಿಂಗಳ ಮೂರನೇ ವಾರದಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಯ ಅಧಿಕೃತ […]

ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ Read More »

ಬೆಳ್ತಂಗಡಿ: ಹಾರೆ, ಗುದ್ದಲಿ ಹಿಡಿದ ಗ್ರಾ. ಪಂ. ಸದಸ್ಯೆಯ ಕೆಲಸ ಶ್ಲಾಘನೀಯ

ಬೆಳ್ತಂಗಡಿ: ಇಲ್ಲಿನ ಅಂಡಿಂಜೆ ಗ್ರಾಮ ಪಂಚಾಯತ್‌ನ ಸದಸ್ಯೆಯೊಬ್ಬರು ತಾವೇ ಸ್ವತಃ ಹಾರೆ, ಗುದ್ದಲಿ ಹಿಡಿದು ಪೈಪ್ ಲೈನ್ ರಿಪೇರಿ ಮಾಡಿದ ಕೆಲಸಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಈ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದವರು ಸಾವ್ಯ ವಾರ್ಡ್ನ ಸದಸ್ಯೆಯಾಗಿರುವ ಸರೋಜಾ ಎಂಬವರು. ಅವರು ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಇದೀಗ ಇವರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರೋಜಾ ಅವರು ಗ್ರಾಮಸ್ಥರೊಂದಿಗೆ ಅತ್ಯುತ್ತಮ ಒಡನಾಟ ಬೆಳೆಸಿಕೊಂಡಿದ್ದು, ಜನರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುತ್ತಾರೆ.

ಬೆಳ್ತಂಗಡಿ: ಹಾರೆ, ಗುದ್ದಲಿ ಹಿಡಿದ ಗ್ರಾ. ಪಂ. ಸದಸ್ಯೆಯ ಕೆಲಸ ಶ್ಲಾಘನೀಯ Read More »

ಜೈ ತುಳುನಾಡ್ ಸಂಘಟನೆಯಿಂದ ತುಳು ಭಾಷೆಯನ್ನು ಅಧಿಕೃತ ಮಾಡುವಂತೆ ಕೇರಳ ಸರ್ಕಾರಕ್ಕೆ ಮನವಿ

ಕಾಸರಗೋಡು: ತುಳುನಾಡಿನ ಆಚಾರ ವಿಚಾರ ಲಿಪಿ ಸಂಸ್ಕ್ರತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯುತ ಕೆಲಸ ಕಾರ‍್ಯಗಳನ್ನು ನಿಸ್ವರ‍್ಥವಾಗಿ ಮಾಡಲು ಯುವಕರು ಹಾಗೂ ಹಿರಿಯರು ಒಗ್ಗೂಡಿಕೊಂಡು ಒಂದಾಗಿರುವ ಸಂಘಟನೆ ‘ಜೈ ತುಳುನಾಡ್ ಸಂಘಟನೆ’ ಇದರ ಕಾಸರಗೋಡು ಘಟಕದಿಂದ ಘಟಕದ ಅಧ್ಯಕ್ಷ ಹರಿಕಾಂತ್ ಕಾಸರಗೋಡು ಇವರ ಮುಂದಾಳುತ್ವದಲ್ಲಿ, ಕೇರಳ ರಾಜ್ಯದಲ್ಲಿ ತುಳು ಬಾಷೆ ಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ಬೇಡಿಕೆಯನ್ನು ಸರಕಾರದ ಗಮನಕ್ಕೆ ತರಬೇಕು ಎಂದು ಶಾಸಕರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ. ದಾಖಲೆಯ ಜೊತೆಗಿರುವ ಮನವಿಯನ್ನು

ಜೈ ತುಳುನಾಡ್ ಸಂಘಟನೆಯಿಂದ ತುಳು ಭಾಷೆಯನ್ನು ಅಧಿಕೃತ ಮಾಡುವಂತೆ ಕೇರಳ ಸರ್ಕಾರಕ್ಕೆ ಮನವಿ Read More »

ಜೋಗ ಜಲಪಾತ ಪ್ರವಾಸಿಗರಿಗೆ ಇಲ್ಲಿದೆ ಸಿಹಿ ಸುದ್ದಿ

ಶಿವಮೊಗ್ಗ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಜೋಗ ಜಲಪಾತ ವೀಕ್ಷಣೆ ಪ್ರವಾಸಿಗರಿಗೆ ಅವಕಾಶ ನೀಡದೆ ಎಲ್ಲಾ ಪ್ರವಾಸಿ ತಾಣಗಳು ಬಂದ್ ಆಗಿದ್ದವು. ಇದೀಗ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಇಂದಿನಿಂದ ಮುಕ್ತ ಅವಕಾಶ ನೀಡಲಾಗಿದೆ. ಕೊರೊನಾ ಸೋಂಕು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಅನ್‌ಲಾಕ್ ಘೋಷಿಸಿದ್ದು, ಪ್ರವಾಸಿ ತಾಣಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಹೀಗಾಗಿಯೇ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತ ವೀಕ್ಷಣೆಗೆ ಇಂದಿನಿಂದ ಅವಕಾಶ ಕಲ್ಪಿಸಿದ್ದು, ಮುಂಜಾನೆ 10

ಜೋಗ ಜಲಪಾತ ಪ್ರವಾಸಿಗರಿಗೆ ಇಲ್ಲಿದೆ ಸಿಹಿ ಸುದ್ದಿ Read More »

ಅಶ್ಲೀಲ ಸಿನಿಮಾ ನೋಡಲು 70ರ ಈ ವೃದ್ದ ಮಾಡಿದ ಕೆಲಸ ಏನ್ ಗೊತ್ತಾ…..?

ಲಂಡನ್: ಗಂಡ ನೀಲಿ ಚಿತ್ರ ವೀಕ್ಷಣೆ ಮಾಡುವುದು ಅನೇಕ ಹೆಂಡತಿಯರಿಗೆ ಇಷ್ಟವಾಗುವುದಿಲ್ಲ. ಈ ವಿಚಾರದಲ್ಲಿ ದಂಪತಿ ನಡುವೆ ತಿಕ್ಕಾಟ ನಡೆದೇ ಇರುತ್ತದೆ. ಲಂಡನ್​ನ ವೃದ್ಧ ಡಾಕ್ಟರ್​ ಹಾಗೂ ಆತನ ಪತ್ನಿ ನಡುವೆ ಇದೇ ವಿಚಾರಕ್ಕೆ ಜಗಳ ಏರ್ಪಟ್ಟಿತ್ತು. ನಂತರ ಪೋರ್ನ್​​ ವಿಡಿಯೋ ನೋಡಲು ಈತ ಅನುಸರಿಸಿದ ಮಾರ್ಗ ಮಾತ್ರ ವಿಚಿತ್ರವಾದುದ್ದು! ಪೀಟರ್​ ಡೇವಿಸ್​ ವೈದ್ಯನ ಹೆಸರು. ಈತನ ವಯಸ್ಸು 70 ವರ್ಷ. ಕ್ಷಯ ರೋಗದ ಸ್ಪೆಷಲಿಸ್ಟ್​ ಆಗಿದ್ದ ಈತ 18ನೇ ವರ್ಷಕ್ಕೆ ಪೋರ್ನ್​ಗೆ ಅಡಿಕ್ಟ್​ ಆಗಿದ್ದ. 10

ಅಶ್ಲೀಲ ಸಿನಿಮಾ ನೋಡಲು 70ರ ಈ ವೃದ್ದ ಮಾಡಿದ ಕೆಲಸ ಏನ್ ಗೊತ್ತಾ…..? Read More »

ಕುಂದಾಪುರ: ಅಕ್ರಮ ಕಸಾಯಿಖಾನೆಗೆ ದಾಳಿ | 23 ಗೋವುಗಳ ರಕ್ಷಣೆ

ಕುಂದಾಪುರ: ಮೇಯಲು ಬಿಟ್ಟ ದನಗಳನ್ನು ಕದ್ದು ಮಾಂಸಕ್ಕಾಗಿ ಕೂಡಿಟ್ಟಿದ್ದ 23 ದನಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಮತ್ತು ಕುಂದಾಪುರ ಪೊಲೀಸರು ರಕ್ಷಣೆ ಮಾಡಿದ್ದಾರೆ. ತಾಲೂಕಿನಲ್ಲಿ ಮೇಯಲು ಬಿಟ್ಟ ದನಗಳ ಸರಣಿ ಕಳ್ಳತನವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಗೋ ಕಳ್ಳತನವಾಗುತ್ತಿರುವುದರ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಭಾನುವಾರ ದನ ಕಳ್ಳನ ಬಗ್ಗೆ ಮಾಹಿತಿ ಪಡೆದ ಕಾರ್ಯಕರ್ತರು ಕುಂದಾಪುರ ಗ್ರಾಮಾಂತರ ಠಾಣೆಗೆ ತಿಳಿಸಿದ್ದಾರೆ. ನಂತರ ಪೋಲೀಸರ ನೆರವಿನಿಂದ ಗುಳ್ವಾಡಿ ನಿವಾಸಿ ಅಬೂಬಕ್ಕರ್ ಎಂಬವರ ಮನೆಗೆ ದಾಳಿ ಮಾಡಿದ್ದಾರೆ. ಈ

ಕುಂದಾಪುರ: ಅಕ್ರಮ ಕಸಾಯಿಖಾನೆಗೆ ದಾಳಿ | 23 ಗೋವುಗಳ ರಕ್ಷಣೆ Read More »

ಪಾಕೆಟ್ ನಲ್ಲಿ ಮೊಬೈಲ್ ಇಟ್ಕೋತೀರಾ? | ಹಾಗಾದ್ರೆ ಈ ಸ್ಟೋರಿ ಓದ್ಲೇಬೇಕು | ತಜ್ಞರ ವರದಿಯಲ್ಲಿ ಏನಿದೆ ಗೊತ್ತಾ?

ನವದೆಹಲಿ : ಸಧ್ಯ ಮೊಬೈಲ್ ನಮ್ಮ ಜೀವನದ ಅತ್ಯಂತ ಪ್ರಮುಖ ಭಾಗವಾಗಿದೆ. ನಾವು ಎಲ್ಲಾದಕ್ಕೂ ಫೋನ್ ಅವಲಂಭಿಸಿದ್ದೇವೆ. ಊಟ ಮಾಡುವಾಗ, ಟಾಯ್ಲೆಟ್ ಹೋಗುವಾಗ, ಕುಳಿತಾಗ, ನಿದ್ರೆ ಮಾಡುವಾಗ ಮೊಬೈಲ್ ಹತ್ತಿರ ಇರಲೇ ಬೇಕು. ಆದರೆ ಇದರಿಂದ ಕಣ್ಣಿನ ದೃಷ್ಟಿ ಮತ್ತು ಕಳಪೆ ಭಂಗಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಜೊತೆಗೆ ಪುರುಷರ ಲೈಂಗಿಕ ಜೀವನದ ಮೇಲೆಯೂ ಪರಿಣಾಮ ಬೀರಬಹುದು. ಸ್ಮಾರ್ಟ್ ಫೋನ್ ನ ಹಾನಿಕಾರಕ ಪರಿಣಾಮಗಳು: ಮೊಬೈಲ್(Mobile) ನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ವಿಕಿರಣವು (ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಷನ್) ನಮ್ಮ ಆರೋಗ್ಯಕ್ಕೆ

ಪಾಕೆಟ್ ನಲ್ಲಿ ಮೊಬೈಲ್ ಇಟ್ಕೋತೀರಾ? | ಹಾಗಾದ್ರೆ ಈ ಸ್ಟೋರಿ ಓದ್ಲೇಬೇಕು | ತಜ್ಞರ ವರದಿಯಲ್ಲಿ ಏನಿದೆ ಗೊತ್ತಾ? Read More »

ಲಡಾಕ್’ನಲ್ಲಿ ಬೆಳ್ಳಂಬೆಳಗ್ಗೆ ಭೂಕಂಪನ

ಜಮ್ಮು ಕಾಶ್ಮೀರ: ಲಡಾಖ್ ನ ಲೇಹ್ ನಲ್ಲಿ ಇಂದು ಬೆಳಗಿನ ಜಾವ ಭೂಕಂಪನ ಸಂಭವಿಸಿದೆ. ಯಾವುದೇ ಸಾವು-ನೋವು, ಹಾನಿಯ ಬಗ್ಗೆ ವರದಿಯಾಗಿಲ್ಲ. ಲೇಹ್ ಪ್ರದೇಶದ ನಿವಾಸಿಗಳಿಗೆ ಬೆಳಗಿನ ಜಾವಾ ಭೂಮಿ ನಡುಗಿದ ಅನುಭವಾಗಿದೆ. ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (ಎನ್ ಸಿಎಸ್) ಹೇಳಿದೆ. ಎನ್ಸಿಎಸ್ ಪ್ರಕಾರ ಬೆಳಿಗ್ಗೆ 6:10 ರ ಸುಮಾರಿಗೆ ಕಂಪನದ ಅನುಭವವಾಗಿದೆ. ಲಡಾಖ್ ನ ಲೇಹ್ ನಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿದು

ಲಡಾಕ್’ನಲ್ಲಿ ಬೆಳ್ಳಂಬೆಳಗ್ಗೆ ಭೂಕಂಪನ Read More »

ಪೊಲೀಸ್ ಅಧಿಕಾರಿ ಮನೆಗೆ ನುಗ್ಗಿ ಉಗ್ರರಿಂದ ಗುಂಡಿನ ದಾಳಿ |ದಂಪತಿ ಮೃತ್ಯು | ಮಗಳು ಗಂಭೀರ

ಜಮ್ಮು-ಕಾಶ್ಮೀರ: ವಾಯುಪಡೆ ಕೇಂದ್ರದ ಮೇಲೆ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ, ಪೊಲೀಸ್ ವಿಶೇಷಾಧಿಕಾರಿ ಮನೆಗೆ ನುಗ್ಗಿದ ಉಗ್ರರು ಗುಂಡಿನ ದಾಳಿ ನಡೆಸಿ ದಂಪತಿಯನ್ನು ಕೊಂದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಅಧಿಕಾರಿಯ ಪುತ್ರಿ ಗಂಭೀರ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ 11 ಗಂಟೆಗೆ ಪುಲ್ವಾಮ ಜಿಲ್ಲೆಯ ಅವಂತಿಪೊರದ ಹರಿಪರಿಗಾಂವ್ ನಲ್ಲಿರುವ ಪೊಲೀಸ್ ವಿಶೇಷಾಧಿಕಾರಿ ಫಯಾಜ್ ಅಹ್ಮದ್ ಅವರ ಮನೆಗೆ ನುಗ್ಗಿದ ಉಗ್ರರು ಏಕಾಏಕಿ ಗುಂಡಿನ ಸುರಿಮಳೆಗೈದಿದ್ದಾರೆ. ಪರಿಣಾಮ ಫಯಾಜ್ ಮತ್ತು ಅವರ ಪತ್ನಿ ರಾಜಾ ಬೇಗಂ ಸ್ಥಳೀಯ

ಪೊಲೀಸ್ ಅಧಿಕಾರಿ ಮನೆಗೆ ನುಗ್ಗಿ ಉಗ್ರರಿಂದ ಗುಂಡಿನ ದಾಳಿ |ದಂಪತಿ ಮೃತ್ಯು | ಮಗಳು ಗಂಭೀರ Read More »

ಪೆಲತ್ತರಿ ಅಂತ ತಾತ್ಸಾರ ಮಾಡ್ಬೇಡಿ, ಅದಕ್ಕೂ ಭಾರೀ ರೇಟ್ ಮರಾಯ್ರೆ…!

ಸಾಮಾನ್ಯವಾಗಿ ಏನಾದರೂ ಮಾತನಾಡೋವಾಗ ಪೆಲತ್ತರಿ(ಹಲಸಿನ ಬೀಜ) ಅಂತ ತಾತ್ಸಾರ ಮಾಡ್ತೇವೆ. ಹುರುಳಿಲ್ಲದ ಮಾತಿಗೆ ಈ ರೀತಿ ಹೇಳುವುದುಂಟು. ಹೀಗೆ ಜನರ ಬಾಯಲ್ಲಿ ತಾತ್ಸಾರಗೊಂಡ, ಬೆಲೆಯಿಲ್ಲದ ಹಲಸಿನ ಬೀಜದ ಈಗಿನ ಮಾರ್ಕೆಟ್ ರೇಟ್ ಕೇಳಿದ್ರೆ ನೀವ್ ಬೆಚ್ಚಿ ಬೀಳ್ತೀರ.ಹೌದು, ಲಾಕ್ ಡೌನ್ ನಿಂದಾಗಿ ಎಲ್ಲಾ ವಸ್ತುಗಳು ಆನ್ ಲೈನ್ ನಲ್ಲೇ ಬಿಕರಿಯಾಗುತ್ತಿವೆ. ಈ ಮಾರುಕಟ್ಟೆಗೆ ಈಗ ಎಂಟ್ರಿ ಕೊಟ್ಟಿದೆ ಹಲಸಿನ ಬೀಜ. ಮಲೆನಾಡಲ್ಲಿ ಬಿದ್ದು ಹಾಳಾಗಿ ಹೋಗುವ ಹಲಸಿನ ಬೀಜದ 800 ಗ್ರಾಂ ಪ್ಯಾಕೆಟ್ ಗೆ 800 ರೂ

ಪೆಲತ್ತರಿ ಅಂತ ತಾತ್ಸಾರ ಮಾಡ್ಬೇಡಿ, ಅದಕ್ಕೂ ಭಾರೀ ರೇಟ್ ಮರಾಯ್ರೆ…! Read More »