June 2021

ಎಎಸ್ ಐ ಮೇಲೆ ಕೈಮಾಡಿದ ಬೈಕ್ ಸವಾರ ಅಂದರ್

ಕಲಬುರಗಿ: ಲಾಕ್ ಡೌನ್ ಇದ್ದರು ಅನಗತ್ಯವಾಗಿ ತಿರುಗಾಡುತ್ತಿದ್ದ ಬೈಕ್ ಸವಾರ, ವಾಹನ ತಪಾಸಣೆಗಾಗಿ ತನ್ನನ್ನು ತಡೆದ ಎಎಸ್ಐ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ರಾಷ್ಟ್ರಪತಿ ವೃತ್ತದ ಬಳಿ ನಡೆದಿದೆ. ಪೊಲೀಸರು ಆತನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಅಶೋಕ ನಗರ ಪೊಲೀಸ್ ಠಾಣೆ ಮಹಿಳಾ ಎಎಸ್ ಐ ಸುಮಂಗಲ ಎಂಬವರು ಲಾಕ್ಡೌನ್ ನಡುವೆ ಅನಗತ್ಯವಾಗಿ ಸಂಚರಿಸುತ್ತಿದ್ದ ಬೈಕ್ ಸವಾರ ಸ್ಥಳೀಯ ನಿವಾಸಿ ಮಹೇಶ್ ಕುಮಾರ್ ಎಂಬವರನ್ನು ತಡೆದಿದ್ದಾರೆ. ಮಾಸ್ಕ ಧರಿಸದ ಆತನನ್ನು, ಅಗತ್ಯ ದಾಖಲೆಗಳಿಗಾಗಿ […]

ಎಎಸ್ ಐ ಮೇಲೆ ಕೈಮಾಡಿದ ಬೈಕ್ ಸವಾರ ಅಂದರ್ Read More »

ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಮುಸ್ಲಿಮ್ ಒಕ್ಕೂಟ

ನವದೆಹಲಿ: ಕೇಂದ್ರ ಸರ್ಕಾರ ಕಳೆದ ಶುಕ್ರವಾರ ಹೊರಡಿಸಿದ್ದ ಪೌರತ್ವ ಅಧಿಸೂಚನೆ ವಿರುದ್ಧ ಐಯುಎಂಎಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮುಸ್ಲಿಮೇತರರಿಗೆ ಪೌರತ್ವ ನೀಡುವ ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆಯನ್ನು ತಡೆಹಿಡಿಯುವಂತೆ ಒತ್ತಾಯಿಸಿ ಭಾರತೀಯ ಮುಸ್ಲಿಂ ಲೀಗ್ ಒಕ್ಕೂಟ ಸುಪ್ರೀಂಕೋರ್ಟ್ನಲ್ಲಿ ಇಂದು ಅರ್ಜಿ ಸಲ್ಲಿಸಿದೆ. ಕಳೆದ ಶುಕ್ರವಾರ ಕೇಂದ್ರ ಗೃಹ ಸಚಿವಾಲಯ, ಭಾರತದಲ್ಲಿ ವಾಸವಿರುವ, ಬಾಂಗ್ಲಾದೇಶ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಸೇರಿದ ನಿರಾಶ್ರಿತ ಮುಸ್ಲಿಮೇತರ ಧರ್ಮದವರಿಂದ ಭಾರತದ ಪೌರತ್ವಕ್ಕಾಗಿ ಅರ್ಜಿ ಆಹ್ವಾನಿಸಿತ್ತು. ಧರ್ಮದ ಆಧಾರದಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಜಿದಾರನ

ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಮುಸ್ಲಿಮ್ ಒಕ್ಕೂಟ Read More »

ಕೇಂದ್ರ ಸಚಿವ ರಮೇಶ್ ಪೋಖ್ರಿಯಾಳ್ ಆರೋಗ್ಯದಲ್ಲಿ ವ್ಯತ್ಯಯ: ಆಸ್ಪತ್ರೆಗೆ ದಾಖಲು

ದೆಹಲಿ : ಕೊರೋನಾ ಸೋಂಕಿನ ನಂತರ ಉಂಟಾದಂತ ತೊಂದರೆಯಿಂದಾಗಿ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಳ್ ನಿಶಾಂಕ್ ಅವರು, ಅನಾರೋಗ್ಯಕ್ಕೆ ಒಳಗಾಗಿ, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತಂತೆ ದೆಹಲಿಯ ಏಮ್ಸ್ ಆಸ್ಪತ್ರೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, ಕೋವಿಡ್-19 ರ ನಂತರದ ತೊಡಕುಗಳಿಂದಾಗಿ ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರನ್ನು ಮಂಗಳವಾರ ಏಮ್ಸ್ ಗೆ ದಾಖಲಿಸಲಾಗಿದೆ, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.ಸಚಿವ ರಮೇಶ್ ಪೋಖ್ರಿಯಾಳ್ ಇತ್ತೀಚೆಗೆ ಕೊರೋನಾ

ಕೇಂದ್ರ ಸಚಿವ ರಮೇಶ್ ಪೋಖ್ರಿಯಾಳ್ ಆರೋಗ್ಯದಲ್ಲಿ ವ್ಯತ್ಯಯ: ಆಸ್ಪತ್ರೆಗೆ ದಾಖಲು Read More »

ಪುತ್ತೂರು:ಅನ್ಯಕೋಮಿನ ಯುವಕನಿಂದ ಅತ್ಯಾಚಾರಕ್ಕೆ ಯತ್ನ

ಪುತ್ತೂರು: ಭಿನ್ನ ಕೋಮಿನ ಯುವಕನೋರ್ವ ಮೆಡಿಕಲ್‌ನ ಒಳಗೆ ನುಗ್ಗಿ ಮಹಿಳಾ ಸಿಬ್ಬಂದಿಯ ಮಾನಭಂಗಕ್ಕೆ ಯತ್ನಿಸಿರುವ ಘಟನೆ ಜೂ.1ರಂದು ಈಶ್ವರಮಂಗಲದಲ್ಲಿ ನಡೆದಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪೇಟೆಯಲ್ಲಿರುವ ಮೆಡಿಕಲ್‌ಗೆ ಔಷಧಿ ಖರೀದಿಸಲು ಬಂದಿರುವ ಯುವಕ ಮೆಡಿಕಲ್‌ನಲ್ಲಿ ಯುವತಿಯೋರ್ವಳೆ ಇರುವುದನ್ನು ಗಮನಿಸಿ ಮೆಡಿಕಲ್ ಒಳನುಗ್ಗಿದ್ದು ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಯುವತಿ ಕೂಗಿಕೊಂಡಾಗ ಅಲ್ಲಿನ ಸ್ಥಳೀಯರು ಜಮಾಯಿಸಿ, ಆರೋಪಿ ಯುವಕನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಪುತ್ತೂರು:ಅನ್ಯಕೋಮಿನ ಯುವಕನಿಂದ ಅತ್ಯಾಚಾರಕ್ಕೆ ಯತ್ನ Read More »

ಉತ್ತರ ಪ್ರದೇಶ ಕಳ್ಳಭಟ್ಟಿ ದುರಂತ | ಏರುತ್ತಲೇ ಇದೆ ಮೃತರ ಸಂಖ್ಯೆ

ಲಖನೌ: ರಾಜ್ಯದ ಅಲಿಗಡದಲ್ಲಿ ಕಳೆದ ವಾರ ವಿಷಕಾರಿ ಮದ್ಯಸೇವಿಸಿ ಆಸ್ಪತ್ರೆ ಸೇರಿದ್ದವರಲ್ಲಿ ನಿನ್ನೆ ಒಂದೇ ದಿನ 11 ಮಂದಿ ಅಸುನೀಗಿದ್ದಾರೆ. ಇದರೊಂದಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 36 ಕ್ಕೆ ಏರಿಕೆಯಾಗಿದೆ. ಘಟನೆ ನಡೆದ ಶುಕ್ರವಾರದಿಂದ ಸೋಮವಾರ ಮುಂಜಾನೆಯವರೆಗೆ ಒಟ್ಟು 71 ಶವಗಳು ಮರಣೋತ್ತರ ಪರೀಕ್ಷೆಗೆ ಬಂದಿವೆ. ಇವುಗಳ ಪೈಕಿ 36 ಜನರ ಸಾವಿಗೆ ವಿಷಕಾರಿ ಮದ್ಯವೇ ಕಾರಣ ಎಂಬುದು ದೃಢಪಟ್ಟಿದೆ. ಉಳಿದ 35 ಶವಗಳ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿದ್ದು, ಅವರ ಸಾವಿಗೂ ವಿಷಯುಕ್ತ ಮದ್ಯವೇ ಕಾರಣ ಎಂದು

ಉತ್ತರ ಪ್ರದೇಶ ಕಳ್ಳಭಟ್ಟಿ ದುರಂತ | ಏರುತ್ತಲೇ ಇದೆ ಮೃತರ ಸಂಖ್ಯೆ Read More »

ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ವ್ಯತ್ಯಯ

ಬೆಂಗಳೂರು: ಮಾಜಿ ಸಿಎಂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ವೈದ್ಯರ ಪರೀಕ್ಷೆಗೆ ಒಳಪಟ್ಟಿದ್ದಾರೆ. ನಿನ್ನೆ ರಾತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ನಂತರ ಅವರ ಆಪ್ತ ವೈದ್ಯ ಡಾ. ರವಿಕುಮಾರ್ ಅವರನ್ನು ಪರೀಕ್ಷಿಸಿದ್ದು, ಮನೆಯಲ್ಲಿಯೇ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಸಿದ್ದರಾಮಯ್ಯ ಅವರ ಕೋವಿಡ್ ವರದಿ ನೆಗೆಟಿವ್ ಬಂದಿದ್ದು ಅವರ ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ವ್ಯತ್ಯಯ Read More »

ಮುಂದಿನ ವರ್ಷ 20,810 ಕೋಟಿ ಬೆಳೆಸಾಲ ಗುರಿ ಸಚಿವ ಸೋಮಶೇಖರ್

ಬೆಂಗಳೂರು: ಮುಂದಿನ ವರ್ಷ ರೈತರಿಗೆ 20,810 ಕೋಟಿಗೂ ಅಧಿಕ ನೀಡುವ ಗುರಿ ಹೊಂದಲಾಗಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ಕಳೆದ ವರ್ಷ ಅಂದರೆ 2020-21 ನೇ ಸಾಲಿನಲ್ಲಿ 15,400 ಕೋಟಿಗೂ ಅಧಿಕ ಬೆಳೆಸಾಲ ವಿತರಿಸಲಾಗಿತ್ತು. ಈ ಬಾರಿ ಅಂದರೆ 2021-22 ನೇ ಸಾಲಿಗೆ ಈಗಾಗಲೇ ಗುರಿ ನಿಗದಿಪಡಿಸಲಾಗಿದ್ದು ಈ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಗಿದೆ. ಮೂರು ಕೋಟಿಗೂ ಅಧಿಕ ರೈತರು ಫಲಾನುಭವಿಗಳಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಸಚಿವರು

ಮುಂದಿನ ವರ್ಷ 20,810 ಕೋಟಿ ಬೆಳೆಸಾಲ ಗುರಿ ಸಚಿವ ಸೋಮಶೇಖರ್ Read More »

ಮಂಗಳೂರು ನಗರ ಪೊಲೀಸ್ ವತಿಯಿಂದ ಇಂದು “ಗಾನಸುಧೆ” ಕಾರ್ಯಕ್ರಮ

ಮಂಗಳೂರು: ಮಂಗಳೂರು ನಗರ ಪೊಲೀಸ್ ವತಿಯಿಂದ ಇಂದು ಕೋವಿಡ್ ವಾರಿಯರ್ಸ್ ಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ಗಾನಸುಧೆ’ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಮಧ್ಯಾಹ್ನ ಫೇಸ್ ಬುಕ್ ಲೈವ್ ನಲ್ಲಿ ಮಂಗಳೂರು ನಗರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ನಡೆಸಿಕೊಡುವ ಸಂಗೀತ ಕಾರ್ಯಕ್ರಮ ಪ್ರಸಾರವಾಗಲಿದೆ. ಕೇಳಲಿಚ್ಚಿಸುವವರು Arvind Vivek’s ಫೇಸ್ಬುಕ್ ಪೇಜ್ ಅನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. “ಗಾನಸುಧೆ”ಯನ್ನು ರಾಜ್ಯದ ಎಲ್ಲಾ ಕೋವಿಡ್ ವಾರಿಯರ್ಸ್ ಗಳಿಗೆ ಸಮರ್ಪಿಸಲಾಗುತ್ತಿದೆ ಎಂದು ಮಂಗಳೂರು ನಗರ

ಮಂಗಳೂರು ನಗರ ಪೊಲೀಸ್ ವತಿಯಿಂದ ಇಂದು “ಗಾನಸುಧೆ” ಕಾರ್ಯಕ್ರಮ Read More »

ಸರ್ಕಾರದ ಮೇಲಿನ ಮಾಧ್ಯಮಗಳ ಟೀಕೆಯನ್ನು ದೇಶದ್ರೋಹ ಎಂದು ಪರಿಗಣಿಸಲಾಗದು: ಸುಪ್ರೀಂ

ನವದೆಹಲಿ: ಸರ್ಕಾರದ ಕೆಲಸಗಳು ಅಥವಾ ನೀತಿ-ನಿಯಮಗಳನ್ನು ಟೀಕಿಸಿ ಮಾಧ್ಯಮಗಳು ವರದಿ ಮಾಡಿದರೆ ಅದನ್ನು ದೇಶದ್ರೋಹ ಎಂದು ಪರಿಗಣಿಸಲಾಗದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆಂಧ್ರ ಪ್ರದೇಶ ಸರ್ಕಾರದ ವಿರುದ್ಧ ಅಲ್ಲಿನ ಟಿವಿ5 ಹಾಗೂ ಎಬಿಎನ್ ಆಂಧ್ರಜ್ಯೋತಿ ಸುದ್ದಿವಾಹಿನಿಗಳು ಅಲ್ಲಿನ ಸಂಸದರೊಬ್ಬರ ನಿಲುವನ್ನು ಪ್ರಕಟಿಸಿ, ದೇಶದ್ರೋಹ ಆರೋಪ ಎದುರಿಸುತ್ತಿದ್ದವು. ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ, ಸುಪ್ರೀಂಕೋರ್ಟ್ ಟಿವಿ ಚಾನೆಲ್ ಗಳ ಮೇಲೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಿದೆ. ದೇಶದ್ರೋಹ ಸೇರಿದಂತೆ

ಸರ್ಕಾರದ ಮೇಲಿನ ಮಾಧ್ಯಮಗಳ ಟೀಕೆಯನ್ನು ದೇಶದ್ರೋಹ ಎಂದು ಪರಿಗಣಿಸಲಾಗದು: ಸುಪ್ರೀಂ Read More »

ಜೂ. 7 ರ ಬಳಿಕ ಮುಂದುವರಿಯಲಿದೆ ಲಾಕ್ಡೌನ್…? | ಇಲ್ಲಿದೆ ತಜ್ಞರ ಶಿಫಾರಸ್ಸಿನ ಮುಖ್ಯಾಂಶಗಳು

ಬೆಂಗಳೂರು: ರಾಜ್ಯ ಸರ್ಕಾರದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರಕಾರಕ್ಕೆ ಶಿಫಾರಸ್ಸು ಒಂದನ್ನು ಮಾಡಿದ್ದು ಸದ್ಯ ರಾಜ್ಯದಲ್ಲಿರುವ ಲಾಕ್ಡೌನ್ ಅನ್ನು ಮುಂದುವರೆಸುವಂತೆ ಸಲಹೆ ನೀಡಿದೆ. ಮೇ 30ರಂದು ನಡೆದ ತಜ್ಞರನ್ನೊಳಗೊಂಡ 14 ಸದಸ್ಯರುಗಳ, ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆಯ ವರದಿ ನಿನ್ನೆ ರಾಜ್ಯ ಸರ್ಕಾರದ ಕೈಸೇರಿದೆ. ವರದಿಯಲ್ಲಿ ದಿನದ ಕೋವಿಡ್ ಪಾಸಿಟಿವ್ ಪ್ರಮಾಣ ಶೇಕಡಾ 5ಕ್ಕಿಂತ ಕೆಳಗೆ ಬರುವವರೆಗೆ ಮತ್ತು ಮರಣ ಪ್ರಮಾಣ ಶೇಕಡ 1ಕ್ಕಿಂತ ಕೆಳಗೆ ಇಳಿಯುವವರೆಗೆ ರಾಜ್ಯದಲ್ಲಿ ಸದ್ಯ ಇರುವ ನಿರ್ಬಂಧಗಳನ್ನು ಮುಂದುವರಿಸಬೇಕು

ಜೂ. 7 ರ ಬಳಿಕ ಮುಂದುವರಿಯಲಿದೆ ಲಾಕ್ಡೌನ್…? | ಇಲ್ಲಿದೆ ತಜ್ಞರ ಶಿಫಾರಸ್ಸಿನ ಮುಖ್ಯಾಂಶಗಳು Read More »