ಧರ್ಮಸ್ಥಳ:ಬಿ ಎಸ್ ವೈ ಚುನಾವಣೆ ವೇಳೆ ಹಣ ಹಂಚಲು ಈತನಲ್ಲೇ ನೀಡೋದಂತೆ….! | ಈತನ ಒಂದು ಕರೆಯಿಂದ ಸಿಎಂ ಏನ್ ಬೇಕಾದ್ರು ಮಾಡ್ತಾರಂತೆ | ನಂಬಿದ ಕೆಎಸ್ಆರ್ಟಿಸಿ ಚಾಲಕನಿಗೆ ಲಕ್ಷ ರೂ ಪಂಗನಾಮ
ಧರ್ಮಸ್ಥಳ: ನಾನು ಸಿಎಂ ಯಡಿಯೂರಪ್ಪ ಅವರ ಪಿಎ ಎಂದು ಹೇಳಿ ಯುವಕನೊಬ್ಬ ಕೆಎಸ್ಆರ್ಟಿಸಿ ಚಾಲಕರೊಬ್ಬರಿಗೆ ಲಕ್ಷ ರೂ. ವಂಚಿಸಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಧರ್ಮಸ್ಥಳ ಡಿಪೋದ ಬಸ್ ಚಾಲಕ ಪುರುಷೋತ್ತಮ್ ವಂಚಗೊಳಗಾದವರು. ಅವರಿಗೆ ಧರ್ಮಸ್ಥಳದ ಹೋಟೆಲೊಂದರಲ್ಲಿ ಶೈಲೇಶ್ ಎಂಬ ಯುವಕನ ಪರಿಚಯವಾಗಿತ್ತು. ಆತ ಸಿಎಂ ಯಡಿಯೂರಪ್ಪ ನನಗೆ ತುಂಬಾ ಆತ್ಮೀಯರು ಎಂದು ನಂಬಿಸಿದ್ದಾನೆ. ಮೊಬೈಲ್ನಲ್ಲಿ ಹಲವಾರು ಫೋಟೋಗಳನ್ನು ತೋರಿಸಿದ್ದಾನೆ. ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಹಣ ಹಂಚಲು ನನ್ನಲ್ಲಿ ನೀಡುತ್ತಾರೆ ಎಂದು ಸುಳ್ಳು ಬಿಟ್ಟಿದ್ದಾನೆ. ಯುವಕ ನಾನು […]